More

    ಶಾಸಕ ಬೆಲ್ಲದ್‌ಗೆ ಅಪರಿಚಿತರಿಂದ ಅನಾಮಧೇಯ ಕರೆ- ತನಿಖೆಗೆ ಡಿಜಿ ಆದೇಶ

    ಬೆಂಗಳೂರು: ಶಾಸಕ ಅರವಿಂದ್​ ಬೆಲ್ಲದ್​ ಅವರ ಫೋನ್‌ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುವಂತೆ ಡಿಜಿಯವರಿಂದ ನಮಗೆ ಸೂಚನೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಹೇಳಿದರು.

    ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಅವರು, ಬೆಲ್ಲದ್‌ ಅವರು ತಮಗೆ ಯಾವುದೋ ಅಪರಿಚಿತ ವ್ಯಕ್ತಿಯಿಂದ 2-3 ಬಾರಿ ಕರೆ ಬಂದಿರುವುದಾಗಿ ಆರೋಪಿಸಿ ಡಿಜಿಯವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಡಿಜಿಯವರು ನಮಗೆ ಸೂಚನೆ ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

    ಕಳೆದ ಒಂದು ತಿಂಗಳಿನಿಂದ ನನ್ನ ಫೋನ್​ ಟ್ಯಾಪ್ ಆಗುತ್ತಿದೆ. ನನಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ಯಾರೆಂದು ಕೇಳಿದಾಗ ಯುವರಾಜ ಸ್ವಾಮಿ ಎಂದು ಹೇಳಿಕೊಂಡರು. ನಾನು ಕರೆ ಕಟ್‌ ಮಾಡಿದ್ದೆ. ಆದರೆ ಈ ಘಟನೆ ನಡೆದು ಮೂರ್ನಾಲ್ಕು ದಿನಗಳ ಬಳಿಕ ಮತ್ತೊಮ್ಮೆ ಕರೆ ಬಂದಿತ್ತು. ಆಗಲೂ ಸಹ ತಾನು ಯುವರಾಜ ಸ್ವಾಮಿ ಎಂದು ಹೇಳಿಕೊಂಡ ವ್ಯಕ್ತಿ, ನನ್ನನ್ನ ಅನವಶ್ಯಕವಾಗಿ ಜೈಲಿಗೆ ಹಾಕಿದ್ದಾರೆ. ನನಗೆ ಸಹಾಯ ಮಾಡಿ ಎಂದಿದ್ದರು. ಆದರೆ ಈ ಕರೆಯ ಹಿಂದೆ ನನ್ನ ವಿರುದ್ಧ ದೊಡ್ಡ ಪಿತೂರಿಯೇ ಇದೆ ಎಂದು ಬೆಲ್ಲದ್‌ ನಿನ್ನೆಯಷ್ಟೇ ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts