More

    ಎರಡು ದಶಕ ಬಾಲಿವುಡ್‌ ಆಳಿದ ‘ಮಿಸ್‌ ಇಂಡಿಯಾ’ ಮೀನಾಕ್ಷಿ ಶೇಷಾದ್ರಿಗೆ ಏನಾಯ್ತು? ಜಾಲತಾಣದಲ್ಲಿ ಹರಿದಾಡ್ತಿರೋ ಸುದ್ದಿ ನಿಜನಾ?

    ಮುಂಬೈ: 80-90ರ ದಶಕದಲ್ಲಿ ಬಾಲಿವುಡ್‌ನ ಉತ್ತುಂಗಕ್ಕೇರಿದ ಕೆಲವೇ ಕೆಲವು ನಟಿಯರಲ್ಲಿ ಮೀನಾಕ್ಷಿ ಶೇಷಾದ್ರಿ ಒಬ್ಬರು. ಭರತನಾಟ್ಯ, ಒಡಿಸಿ ನೃತ್ಯಗಾತಿಯೂ ಆಗಿರುವ ಮೀನಾಕ್ಷಿ ತಮ್ಮ ಸೌಂದರ್ಯದಿಂದ ಮಾತ್ರವಲ್ಲದೇ, ಅಭಿನಯ, ನೃತ್ಯದಿಂದ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಸೆಳೆದುಕೊಂಡವರು. ಇವರ ಚಿತ್ರ ನೋಡಲು ಚಿತ್ರಮಂದಿರದಲ್ಲಿ ನೂಕುನುಗ್ಗಲು ಆಗುವಷ್ಟು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ ಇವರು.

    ಇಂಥ ನಟಿ ಇದ್ದಕ್ಕಿದ್ದಂತೆಯೇ ಚಿತ್ರರಂಗದಿಂದಲೇ ದೂರ ಸರಿದುಬಿಟ್ಟರು. ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಕೊನೆಯ ಚಿತ್ರ ಘಾತಕ್‌. 1981ರಲ್ಲಿ ಮಿಸ್‌ ಇಂಡಿಯಾ ಆಗಿಯೂ ಇವರು ಆಯ್ಕೆಯಾಗಿದ್ದರು. 1997ರಲ್ಲಿ ಬಿಡುಗಡೆಯಾದ ಈ ಚಿತ್ರದ ನಂತರ ಮೀನಾಕ್ಷಿ ದೂರವೇ ಉಳಿದಿದ್ದಾರೆ. ಆದರೆ ಒಂದೆರಡು ದಿನಗಳಿಂದ ಇವರ ಅಭಿಮಾನಿಗಳಿಗೆ ಭಾರಿ ಆಘಾತವಾಗುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದೇನೆಂದರೆ ’ಮೀನಾಕ್ಷಿ ಶೇಷಾದ್ರಿ ಇನ್ನಿಲ್ಲ’ ಎನ್ನುವ ಸುದ್ದಿ.

    ಎರಡು ದಶಕ ಬಾಲಿವುಡ್‌ ಆಳಿದ ‘ಮಿಸ್‌ ಇಂಡಿಯಾ’ ಮೀನಾಕ್ಷಿ ಶೇಷಾದ್ರಿಗೆ ಏನಾಯ್ತು? ಜಾಲತಾಣದಲ್ಲಿ ಹರಿದಾಡ್ತಿರೋ ಸುದ್ದಿ ನಿಜನಾ?

    ಆದರೆ ಈ ಸುದ್ದಿಯಲ್ಲಿ ಎಳ್ಳಷ್ಟು ಸತ್ಯಾಂಶ ಇಲ್ಲ ಎಂದು ಅವರ ಕುಟುಂಬಸ್ಥರೇ ಇದೀಗ ಮಾಹಿತಿ ನೀಡಿದ್ದಾರೆ. 1963ರಲ್ಲಿ ಹುಟ್ಟಿರುವ ಈ ನಟಿಗೆ ಈಗ 57 ವರ್ಷ. ಹರೀಶ್‌ ಮೈಸೂರು ಎಂಬುವವರನ್ನು 1995ರಲ್ಲಿ ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದಿರುವ ಮೀನಾಕ್ಷಿ ಶೇಷಾದ್ರಿ ಕುಟುಂಬದ ಬಗ್ಗೆ ಹೆಚ್ಚಿನ ಟೈಂ ನೀಡುವ ಸಂಬಂಧ ಚಿತ್ರರಂಗದಿಂದ ಮರೆಯಾಗಿದ್ದಾರಷ್ಟೇ. ಇದೀಗ ಅವರು ಅಮೆರಿಕದ ಟೆಕ್ಸಾಸ್‌ನಲ್ಲಿ ತಮ್ಮ ಕುಟುಂಬದ ಜತೆ ನೆಮ್ಮದಿಯ ಜೀವನ ಕಳೆಯುತ್ತಿದ್ದಾರೆ. ಅಲ್ಲಿಯೇ ನೃತ್ಯ ತರಗತಿಯನ್ನು ಕೂಡ ನಡೆಸುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆಯೇ ಇಂಥದ್ದೊಂದು ಸುದ್ದಿ ಹರಡಲು ಕಾರಣವೇನು ಎಂಬುದು ತಿಳಿದುಬಂದಿಲ್ಲ.

    ಎರಡು ದಶಕ ಬಾಲಿವುಡ್‌ ಆಳಿದ ‘ಮಿಸ್‌ ಇಂಡಿಯಾ’ ಮೀನಾಕ್ಷಿ ಶೇಷಾದ್ರಿಗೆ ಏನಾಯ್ತು? ಜಾಲತಾಣದಲ್ಲಿ ಹರಿದಾಡ್ತಿರೋ ಸುದ್ದಿ ನಿಜನಾ?

    ಮನೋಜ್ ಕುಮಾರ್‌ ಅವರ ಸಹೋದರ ರಾಜೀವ್‌ ಗೋಸ್ವಾಮಿ ಅವರೊಂದಿಗೆ ಪೇಂಟರ್ ಬಾಬು(1982) ಎಂಬ ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಸಿನಿಮಾ ವೃತ್ತಿಯನ್ನು ಆರಂಭಿಸಿದರು. ಶುಭಾಷ್‌ ಘಾಯ್ ನಿರ್ದೇಶನದ ಮೇಗಾಹಿಟ್ ಚಿತ್ರ ಹೀರೋ (1983) ಇವರಿಗೆ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟ ಚಿತ್ರ.

    ಕರೊನಾದಿಂದಾಗಿ ಹೋಂ ಐಸೋಲೇಷನ್‌ನಲ್ಲಿ ಇರುವಿರಾ? ಹಾಗಿದ್ದರೆ ಈ ಹೊಸ ಮಾರ್ಗಸೂಚಿಯನ್ನೊಮ್ಮೆ ಓದಿ…

    ಊಟಕ್ಕೂ ಮೊದಲು ಪ್ರಾರ್ಥನೆ ಮಾಡುವ ನಾಯಿ- ಸಕತ್‌ ವೈರಲ್‌ ಆಗ್ತಿದೆ ಈ ವಿಡಿಯೋ

    ಆಕ್ಸಿಜನ್‌ಗಾಗಿ ಅರಳಿ ಮರದ ಕೆಳಗೆ ಸೋಂಕಿತರ ದೌಡು- ಜಪ್ಪಯ್ಯ ಎಂದ್ರೂ ಆಸ್ಪತ್ರೆಗೆ ಬರಲೊಲ್ಲರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts