More

    ತಾಳಿ ಕಟ್ಟುವ ಶುಭ ವೇಳೆ… ಸಾಮೂಹಿಕ ವಿವಾಹ ಆಗಬಯಸುವವರಿಗೆ ಇಲ್ಲಿದೆ ಸಿಹಿಸುದ್ದಿ

    ಮೈಸೂರು : ಕರೊನಾ ಹಿನ್ನೆಲೆಯಲ್ಲಿ ಇದಾಗಲೇ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಕೂಡ ನಿಷೇಧಿಸಲಾಗಿತ್ತು. ನಂತರ ಕೆಲವೊಂದು ಷರತ್ತುಗಳನ್ನು ವಿಧಿಸುವ ಮೂಲಕ ಸಾಮೂಹಿಕ ವಿವಾಹಕ್ಕೆ ಇದಾಗಲೇ ಚಾಲನೆ ದೊರೆತಿದ್ದು, ಕೆಲವು ಕಡೆಗಳಲ್ಲಿ ಈ ಕಾರ್ಯಕ್ರಮಗಳು ಜರುಗಿವೆ, ನಡೆಯುತ್ತಲಿವೆ.

    ಇದೀಗ ಮೈಸೂರಿನಲ್ಲಿ ಸಾಮೂಹಿಕ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಏರ್ಪಡಿಸಲಾಗಿದ್ದು, ವಿವಾಹಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಈ ವರ್ಷ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಎರಡು ದಿನಗಳು ಸಾಮೂಹಿಕ ವಿವಾಹ ನಡೆಯಲಿದೆ. ಮಾರ್ಚ್‌ 15 ಹಾಗೂ ಜೂನ್‌ 17. ಎರಡೂ ದಿನಗಳು ಅಭಿಜಿನ್ ಮುಹೂರ್ತದಲ್ಲಿ ವಿವಾಹ ಜರುಗಲಿದೆ.

    ಮಾರ್ಚ್‌ 15: ಈ ದಿನ ನಡೆಯಲಿರುವ ಸಪ್ತಪದಿ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಫೆಬ್ರುವರಿ 28 ಕೊನೆಯ ದಿನವಾಗಿದೆ. ಮಾರ್ಚ್ 15 ರಂದು ಬೆಳಗ್ಗೆ 11 ರಿಂದ 12 ರವರೆಗೆ ವಿವಾಹ ನಡೆಯಲಿದೆ. ಹೆಸರು ನೋಂದಾಯಿಸಿಕೊಂಡ ವಧು, ವರರ ವಿವರಗಳನ್ನು ದೇವಾಲಯದಲ್ಲಿ ಮಾರ್ಚ್ 5 ರಂದು ಪ್ರಕಟಿಸಲಾಗುವುದು.

    ಜೂನ್‌ 17: ಈ ದಿನ ನಡೆಯಲಿರುವ ಸಪ್ತಪದಿ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಮೇ 31 ಕೊನೆಯ ದಿನ. ಜೂನ್‌ 17ರ ಬೆಳಗ್ಗೆ 11 ರಿಂದ 12ರವರೆಗೆ ವಿವಾಹ ಪ್ರಕ್ರಿಯೆಗಳು ನಡೆಯಲಿವೆ.

    ಈ ಎರಡೂ ದಿನಗಳ ವಿವಾಹಗಳ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೇವಾಲಯದ ಕಚೇರಿ ದೂರವಾಣಿ ಸಂಖ್ಯೆ 0821-2590027 ಅಥವಾ ಮೊಬೈಲ್ ಸಂಖ್ಯೆ 99802349947ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ಹೇಳಿದೆ.

    VIDEO: ಶಿವಾಜಿ ಪ್ರತಿಮೆ ಅನಾವರಣಕ್ಕೆ ಪೊಲೀಸರು ತಡೆದಾಗ ಪ್ರಕೃತಿಯಿಂದಲೇ ನಡೆಯಿತು ಈ ವಿಸ್ಮಯ!

    ತಿರುಮಲ ವೆಂಕಟೇಶನಿಗೆ ಭಕ್ತನಿಂದ ಮೂರೂವರೆ ಕೆ.ಜಿ ತೂಕದ ಚಿನ್ನದ ಶಂಖ-ಚಕ್ರ: ಇದರ ಬೆಲೆ ಊಹಿಸುವಿರಾ?

    ಬೇರೆಯವರ ಎದುರು ಮಾತ್ರ ಮುದ್ದಾಡುವ ಪತಿಯ ಹಿಂಸೆ ತಾಳದಾಗಿದೆ- ಕಾನೂನಿನಡಿ ಪರಿಹಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts