More

    ಮಾಸ್ಕ್‌ ಹಾಕಿಕೊಂಡ್ರೆ ರಸ್ತೆ ಬಿಡುತ್ತೆ- ಇಲ್ದಿದ್ರೆ ತಲೆಮೇಲೆ ಏಟು ಕೊಡುತ್ತೆ ಈ ಮಷಿನ್‌: ವಿಡಿಯೋ ನೋಡಿ…

    ಬೀಚಿಂಗ್‌: ಕರೊನಾ ನಿಯಮ ಪಾಲಿಸಿ, ಮಾಸ್ಕ್‌ ಹಾಕಿಕೊಳ್ಳಿ ಎಂದು ಯಾರು ಎಷ್ಟೇ ಹೇಳಿದರೂ ಕೆಲವರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳುತ್ತಿಲ್ಲ. ಇಂಥವರನ್ನು ಬಗೆಬಗೆ ರೂಪದಲ್ಲಿ ಪೊಲೀಸರು ಶಿಕ್ಷಿಸುತ್ತಲೇ ಬಂದಿದ್ದಾರೆ. ಆದರೂ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ತಿರುಗಾಡುವಲ್ಲಿ ಕೆಲವರು ಯಶಸ್ವಿಯಾಗುತ್ತಲೇ ಬಂದಿದ್ದಾರೆ.

    ಮನುಷ್ಯರಿಂದ ಸಾಧ್ಯವಾಗದ್ದು ಯಂತ್ರಗಳಿಂದಲೂ ಕೆಲವೊಮ್ಮೆ ಸಾಧ್ಯವಾಗುವುದು ಇದೆ. ಈಗ ಕರೊನಾ ನಿಯಮ ಪಾಲನೆ ವಿಷಯದಲ್ಲಿಯೂ ಇದು ಸಾಬೀತಾಗಿದ್ದು, ಕರೊನಾ ನಿಯಮ ಪಾಲನೆ ಮಾಡದೇ ಇರುವವರಿಗೆ ಸರಿಯಾದ ಶಿಕ್ಷೆ ನೀಡಲು ಮಷಿನ್‌ ಒಂದನ್ನು ಕಂಡುಹಿಡಿಯಲಾಗಿದೆ.

    ಮಾಸ್ಕ್‌ ಹಾಕಿಕೊಂಡು ಬಂದರಷ್ಟೇ ಈ ಮಷಿನ್‌ ದಾರಿ ಬಿಡುತ್ತದೆ, ಇಲ್ಲದಿದ್ದರೆ ತಲೆಯ ಮೇಲೆ ಏಟು ನೀಡುತ್ತದೆ. ದಾರಿ ಎಂದರೆ ಅದು ಹೇಗೆ ಅಂತೀರಾ? ಇಲ್ಲಿರುವ ವಿಡಿಯೋ ನೋಡಿದರೆ ನಿಮಗೆ ತಿಳಿಯುತ್ತದೆ ನೋಡಿ. ಮಷಿನ್‌ನಿಂದ ದಾರಿ ಕ್ಲೋಸ್ ಆಗಿದ್ರೆ ಅದನ್ನು ಜಪ್ಪಯ್ಯ ಎಂದ್ರೂ ದಾಟಲು ಸಾಧ್ಯವಿಲ್ಲ. ಇದು ಚೀನಾದಲ್ಲಿ ಅಳವಡಿಸಲಾಗಿರುವ ಮಷಿನ್‌.

    ಅಂದಹಾಗೆ ಇಂಥದ್ದೊಂದು ವಿಡಿಯೋ ಅನ್ನು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಶೇರ್‌ ಮಾಡಿದ್ದಾರೆ. ಇಂಥದ್ದೊಂದು ಮಷಿನ್‌ ಎಲ್ಲಾ ಕಡೆಗಳಲ್ಲಿಯೂ ಬರಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಹೀಗೆ ಮಾಡಿದರೆ ಯಾರೂ ಮಷಿನ್‌ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದು ಅವರ ಅನಿಸಿಕೆ.

    11 ಸೆಕೆಂಡುಗಳ ಉದ್ದದ ವೈರಲ್ ಟಿಕ್‌ಟಾಕ್ ವೀಡಿಯೊದಲ್ಲಿ, ಈ ಮಷಿನ್‌ ಅನ್ನು ರಸ್ತೆಯ ಪ್ರವೇಶ ದ್ವಾರದಲ್ಲಿ ಫಿಕ್ಸ್‌ ಮಾಡಲಾಗಿದ್ದು, ಮಾಸ್ಕ್‌ ಹಾಕಿಕೊಂಡು ಬಂದವರಿಗಷ್ಟೇ ದಾರಿ ಬಿಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ವಿಡಿಯೋ ನೋಡಿದಾಗ ವ್ಹಾರೆವ್ಹಾ ಎನ್ನಬಹುದಾದರೆ, ಅಸಲಿಗೆ ಇದನ್ನು ಎಲ್ಲೆಡೆ ಸ್ಥಾಪಿಸುವುದು ಕೂಡ ಅಷ್ಟೇ ಕಷ್ಟ ಎನ್ನಿ. ರಸ್ತೆ ದಾಟಿ ಮತ್ತೊಂದು ಮಷಿನ್‌ ಬರುವವರೆಗೆ ಮಾಸ್ಕ್‌ ತೆಗೆದೇ ಹೋಗುವವರೂ ಇದ್ದಾರೆ. ಒಟ್ಟಿನಲ್ಲಿ ಇಂಥದ್ದೊಂದು ಮಷಿನ್‌ ಕಾರ್ಯನಿರ್ವಹಿಸಲು ಸಾಧ್ಯ ಎನ್ನುವುದಷ್ಟೇ ಇದರಿಂದ ತಿಳಿದುಬರುತ್ತದೆ. ಜನರಿಗೆ ಬುದ್ಧಿಬಂದ ಹೊರತು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಕೂಡ ಇದೇ ವೇಳೆ ಅಷ್ಟೇ ಸತ್ಯ.

    ಪ್ರೇಮ ಅಂದ್ಕೊಂಡು ಇಷ್ಟುವರ್ಷ ದೇಹ ಒಪ್ಪಿಸಿದ್ಯಾ? ಅದು ಕಾಮ ಅನ್ನೋದೂ ಗೊತ್ತಾಗಿಲ್ವಾ ನಿನಗೆ?

    ಅತಿ ಹೆಚ್ಚು ಮಕ್ಕಳನ್ನು ಹುಟ್ಟಿಸಿ: ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲಿ- ವಿವಾದ ಸೃಷ್ಟಿಸಿದ ಸಚಿವ

    ಪಕ್ಕದ್ಮನೆಗೆ ಆಂಟಿಯೊಬ್ಬಳು ಬಂದ ಮೇಲೆ ಇವ್ರ ಸ್ವಭಾವನೇ ಒಂಥರಾ ಆಗಿದೆ- ಸರಿದಾರಿಗೆ ತರೋದು ಹೇಗೆ ಮೇಡಂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts