More

    ಮತದಾನದಲ್ಲಿ ಪುರುಷರೇ ಮುಂದು

    ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಮಂಗಳವಾರ ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಶೇ.64.66ರಷ್ಟು ಮತದಾನವಾಗಿದ್ದು, ಸುರಪುರ ಕ್ಷೇತ್ರದಲ್ಲಿ ಅತ್ಯಕ ಮತದಾನವಾಗಿದ್ದು, ಯಾದಗಿರಿ ಕ್ಷೇತ್ರದಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಪುರುಷರು ಮತದಾನದಲ್ಲಿ ಮುಂದಿದ್ದಾರೆ.
    ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ 1,42,532 ಪುರುಷ, 2,83083 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,83,083 ಮತದಾರರಲ್ಲಿ 1,09,995 ಪುರುಷರು, 1,05,270 ಮಹಿಳೆಯರು ಸೇರಿದಂತೆ ಒಟ್ಟು 2,15,268 ಜನರು ಮತ ಚಾಲಾಯಿಸಿದ್ದು, ಶೇ.76.04ರಷ್ಟು ಮತದಾನವಾಗಿದೆ.
    ಶಹಾಪುರ ಕ್ಷೇತ್ರದಲ್ಲಿ 1,23,339 ಪುರುಷ, 1,23,784 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,47,138 ಮತದಾರರಲ್ಲಿ 76,990 ಪುರುಷ, 73,954 ಮಹಿಳೆಯರು ಸೇರಿದಂತೆ ಒಟ್ಟು 1,50,945 ಜನರು ಮತ ಚಲಾಯಿಸಿದ್ದಾರೆ. ಒಟ್ಟು ಶೇ.61.08ರಷ್ಟು ಮತದಾನವಾಗಿದೆ.
    ಯಾದಗಿರಿ ಕ್ಷೇತ್ರದಲ್ಲಿ 1,23,301 ಪುರುಷ, 1,24,827 ಮಹಿಳೆಯರು ಸೇರಿದಂತೆ ಒಟ್ಟು 2,48,148 ಮತದಾರರಲ್ಲಿ, 76,474 ಪುರುಷ, 74,143 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,50,169 ಜನರು ಮತ ಚಲಾಯಿಸಿದ್ದು, ಶೇ.60.70ರಷ್ಟು ಮತದಾನವಾಗಿದೆ.
    ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 1,15,777 ಪುರುಷ, 1,20,398 ಮಹಿಳೆಯರು ಸೇರಿದಂತೆ ಒಟ್ಟು 2,36,229 ಮತದಾರರಲ್ಲಿ 83,810 ಪುರುಷ, 82,741 ಮಹಿಳೆಯರು ಸೇರಿದಂತೆ ಒಟ್ಟು 1,66,557 ಜನರು ಮತ ಚಲಾಯಿಸಿದ್ದಾರೆ. ಶೇ.70.51ರಷ್ಟು ಮತದಾನವಾಗಿದೆ.
    ರಾಯಚೂರು ನಗರ ಕ್ಷೇತ್ರದಲ್ಲಿ 1,20,735 ಪುರುಷ, 1,25,374 ಮಹಿಳೆಯರು ಸೇರಿದಂತೆ ಒಟ್ಟು 2,46,211 ಮತದಾರರಲ್ಲಿ 75,021 ಪುರುಷ, 75,783 ಮಹಿಳೆಯರು ಸೇರಿದಂತೆ ಒಟ್ಟು 1,50,807 ಜನರು ಮತ ಚಲಾಯಿಸಿದ್ದು, ಶೇ.61.25ರಷ್ಟು ಮತದಾನವಾಗಿದೆ.
    ಮಾನ್ವಿ ಕ್ಷೇತ್ರದಲ್ಲಿ 1,19,764 ಪುರುಷ, 1,25,813 ಮಹಿಳೆಯರು ಸೇರಿದಂತೆ ಒಟ್ಟು 2,45,641 ಮತದಾರರಲ್ಲಿ 77,345 ಪುರುಷ, 76,084 ಮಹಿಳೆಯರು ಸೇರಿದಂತೆ ಒಟ್ಟು 1,53,431 ಜನರು ಮತ ಚಲಾಯಿಸಿದ್ದಾರೆ. ಶೇ.62.46ರಷ್ಟು ಮತದಾನವಾಗಿದೆ.
    ದೇವದುರ್ಗ ಕ್ಷೇತ್ರದಲ್ಲಿ 1,18,480 ಪುರುಷ, 1,20,806 ಮಹಿಳೆಯರು ಸೇರಿದಂತೆ ಒಟ್ಟು 2,39,293 ಮತದಾರರಿದ್ದು, ಅದರಲ್ಲಿ 75,755 ಪುರುಷ, 72,240 ಮಹಿಳೆಯರು ಸೇರಿದಂತೆ ಒಟ್ಟು 1,47,998 ಜನರು ಮತ ಚಲಾಯಿಸಿದ್ದು, ಶೇ.61.85ರಷ್ಟು ಮತದಾನವಾಗಿದೆ.
    ಲಿಂಗಸುಗೂರು ಕ್ಷೇತ್ರದಲ್ಲಿ 1,30,718 ಪುರುಷ, 1,33,633 ಮಹಿಳೆಯರು ಸೇರಿದಂತೆ ಒಟ್ಟು 2,64,360 ಮತದಾರರಿದ್ದು, ಅದರಲ್ಲಿ 82,477 ಪುರುಷ, 81,702 ಮಹಿಳೆಯರು ಸೇರಿದಂತೆ ಒಟ್ಟು 1,64,181 ಜನರು ಮತ ಚಲಾಯಿಸಿದ್ದಾರೆ. ಶೇ.62.11ರಷ್ಟು ಮತದಾನವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts