More

    VIDEO: ಮದುವೆ ಡ್ರೆಸ್​ನಲ್ಲಿ ಅಜ್ಜಿ ಮಿಂಚಿಂಗ್​- 70 ವರ್ಷಗಳ ನಂತರ ಈಡೇರಿತು ಆಸೆ: ಕಣ್ಣೀರಾದ ವೃದ್ಧೆ

    ನ್ಯೂಯಾರ್ಕ್​: ಈ ಚಿತ್ರದಲ್ಲಿ ಕಾಣಿಸುವ ಅಜ್ಜಿಯ ಹೆಸರು ಮಾರ್ಥಾ ಮಾ ಓಫೇಲಿಯ. ಅಮರಿಕದ ಈ ಅಜ್ಜಿಗೀಗ 90 ವರ್ಷ ವಯಸ್ಸು. ಆದರೆ 70 ವರ್ಷಗಳಿಂದ ಈ ಅಜ್ಜಿಗೆ ಮದುಮಗಳಂತೆ ಬಿಳಿಯ ಗೌನ್​ ಧರಿಸಬೇಕು ಎಂಬ ಆಸೆ ಇತ್ತು. 20ನೇ ವಯಸ್ಸಿನಲ್ಲಿ ಉಂಟಾಗಿರುವ ಈ ಆಸೆ ಏಳು ದಶಕಗಳ ಬಳಿಕ ಈಡೇರಿದೆ.

    ಅಜ್ಜಿ ಬಿಳಿಯ ಗೌನ್​ ಧರಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಅಷ್ಟಕ್ಕೂ ಒಂದು ಗೌನ್​ಗಾಗಿ 70 ವರ್ಷ ಅಜ್ಜಿ ಕಾಯಬೇಕಿತ್ತಾ ಎಂದು ಕೇಳಬಹುದು.

    ಹೌದು. ಈ ಅಜ್ಜಿಯದ್ದು ಕಣ್ಣೀರ ಕಥೆ. ಏಕೆಂದರೆ ಈಕೆ ಕರಿಯಳು. ಎಂದರೆ ಆಫ್ರಿಕನ್​ ಮೂಲದವರು ಈ ಅಜ್ಜಿ ಯೌವನಾವಸ್ಥೆಯಲ್ಲಿ ಇರುವಾಗ ಬಿಳಿ ಬಣ್ಣದ ಗೌನ್ ತೊಡಬೇಕೆಂಬ ಆಸೆಯಿತ್ತು. ಆದರೆ ಆ ಸಮಯದಲ್ಲಿ ಆಫ್ರಿಕನ್-ಅಮೆರಿಕನ್ ಸಮುದಾಯದ ಹೋರಾಟ ತೀವ್ರವಾಗಿತ್ತು. ಬಿಳಿ ಜನರು ಕಪ್ಪು ಜನಾಂಗದವರನ್ನು ದೂರವಿಡುತ್ತಿದ್ದರು.

    ಆ ಸಮಯದಲ್ಲಿ ಎರಡೂ ಗುಂಪುಗಳು ಅವರಿಗೆ ಬೇರೆ-ಬೇರೆಯದಾದ ಅಂಗಡಿಗಳನ್ನು ಹೊಂದಿತ್ತು. ಆದರೆ, ಬಿಳಿ ಬಣ್ಣದ ಉಡುಪು ತೆಗೆದುಕೊಳ್ಳಲು ಕಪ್ಪು ವರ್ಣೀಯರಿಗೆ ಅಂಗಡಿ ಪ್ರವೇಶವಿರಲಿಲ್ಲ. ಹಾಗಾಗಿ ನೀಲಿ ಬಣ್ಣದ ಉಡುಪನ್ನು ಧರಿಸಿ ಮದುವೆಯಾಗಿದ್ದರು. ಬಿಳಿಯ ಬಣ್ಣ ಮಾತ್ರ ಕನಸಾಗಿಯೇ ಉಳಿದಿತ್ತು. ಆ ಆಸೆಯನ್ನು ಒಳಗೆ ಹುದುಗಿಸಿಕೊಂಡಿದ್ದರು ಅಜ್ಜಿ. ಆದರೆ ಈಗ ಅವರ ಈ ಆಸೆ ಮೊಮ್ಮಗಳಿಗೆ ತಿಳಿದು ಬಿಳಿಯ ಗೌನ್​ ತರಿಸಿಕೊಟ್ಟಿದ್ದಾರೆ. ಅಲ್ಲಿ ನೆರೆದಿದ್ದವರ ಕಣ್ಣಂಚು ಒದ್ದೆಯಾಗಿತ್ತು. ವಧುವಿನ ಬಟ್ಟೆಯಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ ಎಂದು ಹೇಳಿದಾಗ ಅವರ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು.

    ಅಜ್ಜಿ ಸಂಭ್ರಮಿಸಿದ ಕ್ಷಣವಿದು:

    ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಕನಸು ನುಚ್ಚುನೂರು: 8500 ಹುದ್ದೆ ರದ್ದು ಮಾಡಿದ ಎಸ್​ಬಿಐ

    ಫೋಟೋದಲ್ಲಿದ್ದ ಚಿನ್ನದ ಸರವೇ ಮಹಿಳೆ ಪ್ರಾಣ ಕಸಿದುಕೊಂಡಿತು! ಭೀಕರ ಪ್ರಕರಣವನ್ನು ಭೇದಿಸಿದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts