More

    ಕಾಂಗ್ರೆಸ್​ ಪ್ರಣಾಳಿಕೆಯಲ್ಲೂ ಇದೇ ಕೃಷಿ ಕಾನೂನು- ಗುಡುಗುತ್ತಿರೋ ಕೈ ಮುಖಂಡರು ಸುಸ್ತೋ ಸುಸ್ತು!

    ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕೈಗೊಂಡಿರುವ ಪ್ರತಿಭಟನೆಗೆ ಬೆಂಬಲ ನೀಡುತ್ತಿರುವ ಹಲವರು ಕಾಂಗ್ರೆಸ್​ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಇನ್ನಿಲ್ಲದ ವಾಗ್ದಾಳಿ ನಡೆಸಿದ್ದಾರೆ!

    ಸಂಸದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿಯವರು ಇದಾಗಲೇ ಹೋರಾಟದ ಮುಂಚೂಣಿಯಲ್ಲಿದ್ದು, ಕೇಂದ್ರ ಸರ್ಕಾರವನ್ನು ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಪ್ರಚೋದಾನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರೈತರು ದೇಶದ ಬೆನ್ನೆಲೆಬು, ಅವರ ಪರವಾಗಿ ತಾವಿದ್ದೇವೆ ಎಂದು ದಿನವೂ ಭಾಷಣಗಳನ್ನು ಮಾಡುತ್ತಿರುವ ರಾಹುಲ್​ ಗಾಂಧಿಯವರನ್ನು ಪಕ್ಷದ ಕಾರ್ತಕರ್ತರು ಭೇಷ್​ ಭೇಷ್​ ಎನ್ನುತ್ತಿದ್ದಾರೆ.

    ರೈತರು ಇಡೀ ದೇಶವನ್ನು ಪೋಷಿಸಿದ್ದಾರೆ. ಎಲ್ಲರಿಗೂ ತುತ್ತು ಅನ್ನ ನೀಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಯನ್ನು ಹಿಮ್ಮೆಟ್ಟಿಸಬೇಕು ಎಂಬ ರೈತರ ಬೇಡಿಕೆಗೆ ಇಡೀ ದೇಶ ಬೆಂಬಲಿಸಬೇಕು. ಅದು ನಮ್ಮ ಕರ್ತವ್ಯ” ಎಂದು ಒತ್ತಾಯಿಸಿದ್ದಾರೆ.

    ಅಲ್ಲದೆ, ರಾಹುಲ್ ಗಾಂಧಿ ತಮ್ಮ ಟ್ವೀಟ್​ನಲ್ಲಿ 2006 ರಲ್ಲಿ ಎಪಿಎಂಸಿಗಳು ಅಥವಾ ಸರ್ಕಾರಿ ಮಂಡಿಗಳನ್ನು ಸಂಪೂರ್ಣವಾಗಿ ರದ್ದುಪಡಿಸಿದಾಗ ಬಿಹಾರದ ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸಹ ಪಡೆದಿರಲಿಲ್ಲ ಎಂಬ ವರದಿಗಳ ಆಯ್ದ ಭಾಗಗಳನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ನೂತನ ರೈತ ಮಸೂದೆಗಳು ಎಷ್ಟು ಅನಾಹುತಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

    ಆದರೆ ವಿಚಿತ್ರ ಎಂದರೆ, 2019ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಪ್ರಣಾಳಿಕೆಯಲ್ಲಿಯೂ ಇದೇ ಕೃಷಿ ಕಾನೂನು ಜಾರಿ ಮಾಡುವ ಕುರಿತು ಉಲ್ಲೇಖವಾಗಿರುವುದು ಇದೀಗ ಬಹಿರಂಗಗೊಂಡಿದೆ.

    ಇಲ್ಲಿದೆ ನೋಡಿ ಕಾಂಗ್ರೆಸ್​ ಪ್ರಣಾಳಿಕೆ:

    ಕಾಂಗ್ರೆಸ್​ ಪ್ರಣಾಳಿಕೆಯಲ್ಲೂ ಇದೇ ಕೃಷಿ ಕಾನೂನು- ಗುಡುಗುತ್ತಿರೋ ಕೈ ಮುಖಂಡರು ಸುಸ್ತೋ ಸುಸ್ತು!

    ಕಾಂಗ್ರೆಸ್​ ಪ್ರಣಾಳಿಕೆಯಲ್ಲೂ ಇದೇ ಕೃಷಿ ಕಾನೂನು- ಗುಡುಗುತ್ತಿರೋ ಕೈ ಮುಖಂಡರು ಸುಸ್ತೋ ಸುಸ್ತು!
    ಈ ಕಾನೂನಿನಿಂದ ರೈತರಿಗೆ ಬಹಳ ರೀತಿಯಲ್ಲಿ ಅನುಕೂಲಕರ ಆಗಲಿದೆ. ಮಧ್ಯವರ್ತಿಗಳು ಹಾಗೂ ವಿವಿಧ ಸಮಸ್ಯೆಗಳಿಂದ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಮುಕ್ತಿ ನೀಡಲಿವೆ. ಈಗ ಚಾಲ್ತಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ, ಸರ್ಕಾರವೇ ಕೃಷಿ ಉತ್ಪನ್ನಗಳ ಖರೀದಿಯಂತಹ ವ್ಯವಸ್ಥೆ ಮುಂದುವರಿಯಲಿವೆ. ಇವುಗಳ ಪರಿಣಾಮ ರೈತರಿಗೆ ಇನ್ನೂ ಹಲವಾರು ಸೌಲಭ್ಯಗಳು, ಅನುಕೂಲಗಳು ದೊರೆಯಲಿವೆ ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದರೂ ರೈತರು ಅದನ್ನು ಕೇಳಲು ತಯಾರಾಗಿಲ್ಲ, ಪ್ರತಿಭಟನಾಕಾರರನ್ನು ಇನ್ನಷ್ಟು ಉತ್ತೇಜಿಸಲು ಕಾಂಗ್ರೆಸ್​ ಮುಖಂಡರು ಹಿಂದೆ ಬಿದ್ದಿಲ್ಲ.

    ಚುನಾವಣಾ ಪ್ರಣಾಳಿಕೆಯಲ್ಲಿ ಇಡೀ ಎಪಿಎಂಸಿ ಕಾನೂನನ್ನೇ ರದ್ದು ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಆದರೆ ಪ್ರಧಾನಿ ಮೋದಿಯವರು ಸಂಪೂರ್ಣವಾಗಿ ಈ ಕಾಯ್ದೆಯನ್ನು ರದ್ದು ಮಾಡಿಲ್ಲ. ಆದರೆ ಇದನ್ನೇ ತಮ್ಮ ಚುನಾವಣಾ ಪ್ರಣಾಳಿಯಲ್ಲಿಯೂ ಘೋಷಿಸಿರುವುದು ರಾಹುಲ್​ ಗಾಂಧಿಯವರಿಗಂತೂ ಗೊತ್ತಿರಲಿಕ್ಕೆ ಸಾಧ್ಯವೇ ಇಲ್ಲ, ಹೋಗಲಿ ಬೇರೆ ಸರಿಯಾದ ಮುಖಂಡರಿಗೂ ಗೊತ್ತಿಲ್ಲವೇ ಎಂದು ಇದೀಗ ಜಾಲತಾಣದಲ್ಲಿ ಭಾರಿ ಚರ್ಚೆ ಶುರುವಾಗಿದೆ.

    ‘ಒಬ್ಬನ ತಲೆ ಕಡಿದೆ, ಇನ್ನೊಬ್ಬನ ಇರಿದೆ, ಮತ್ತೊಬ್ಬನ ಕತ್ತರಿಸಿದೆ…ಅವರ್ಯಾರೋ ನಂಗೊತ್ತಿಲ್ಲ… ಆಹಾ! ಅದೆಂಥ ನೆಮ್ಮದಿ..’

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts