More

    ಕೊಲೆ ಮಾಡಿ ತಣ್ಣಗಿದ್ದ ಮಂಡ್ಯದ ಮಾಜಿ ಶಾಸಕನ ಪುತ್ರ ಅರೆಸ್ಟ್‌: ಸಿಪಿಐ ಜತೆ 10 ಲಕ್ಷ ರೂ. ಡೀಲ್‌ ಮಾಡಿದ್ರೂ ಸಿಕ್ಕಿಬಿದ್ದದ್ದೇ ರೋಚಕ!

    ಮಂಡ್ಯ: ಮಳವಳ್ಳಿ ತಾಲೂಕಿನ ಪಂಡಿತಹಳ್ಳಿ ಸಮೀಪ ಫೆ. 9ರಂದು ರಸ್ತೆ ಬದಿಯಲ್ಲಿ ಬಿಸಾಡಿದ್ದ ಕೊಳ್ಳೇಗಾಲ ಮೂಲದ ಸಲೀಂ (40) ಕೊಲೆ ಪ್ರಕರಣ ತಿರುವು ಪಡೆದಿದ್ದು, ಜಿಲ್ಲೆಯ ಮಾಜಿ ಶಾಸಕರೊಬ್ಬರ ಪುತ್ರನ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಲ್​ ಇನ್ಸ್​ಪೆಕ್ಟರ್​ರೊಬ್ಬರು ಹುನ್ನಾರ ನಡೆಸಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿತ್ತು.

    ಇದರ ಬೆನ್ನುಹತ್ತಿ ಹೋದ ಪೊಲೀಸರು ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರ ಶ್ರೀಕಾಂತ್ ಬಂಧಿಸಿದ್ದಾರೆ. ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದ ಮಾಜಿ ಶಾಸಕರಾಗಿದ್ದವರು ಚಂದ್ರಶೇಖರ್‌.

    ನಕಲಿ ರೈಸ್ ಪುಲ್ಲಿಂಗ್ ನೀಡಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪ ಶ್ರೀಕಾಂತ್ ಮತ್ತು ಆತನ ಗುಂಪಿನ ಮೇಲಿದೆ. ಮೈಸೂರಿನಲ್ಲಿ ಕೊಂದು ಮಳವಳ್ಳಿಯ ಪಡಂತಹಳ್ಳಿಯ ರಸ್ತೆ ಬದಿಯಲ್ಲಿ ದೇಹವನ್ನು ಎಸೆಯಲಾಗಿತ್ತು. ಈ ಪ್ರಕರಣದಿಂದ ಪಾರಾಗಲು ಸಿಪಿಐ ನೆರವಿನಿಂದ ಮಾಸ್ಟರ್ ಪ್ಲ್ಯಾನ್‌ ಮಾಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

    10 ಲಕ್ಷ ಕ್ಯಾಷ್, ಹೊಸ ಕಾರಿನಾಸೆಗೆ ಈ ಕೇಸ್‌ನಿಂದ ಶ್ರೀಕಾಂತ್‌ ಹೆಸರನ್ನು ಕೈಬಿಡಲು ಮಳವಳ್ಳಿ ಉಪ ವಿಭಾಗದ ಸಿಪಿಐ ಧನರಾಜ್ ಒಪ್ಪಿದ್ದರು ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಶವಹಾಕಿ, ಈ ಪ್ರಕರಣದಲ್ಲಿ ಮೂವರನ್ನು ಒಳಕ್ಕೆ ಹಾಕಲು ಶ್ರೀಕಾಂತ್‌ ರೆಡಿ ಮಾಡಿದ್ದ. ಹಣದಾಸೆಗೆ ಆ ಮೂವರು ಸುಪಾರಿ ಪಡೆದುಕೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

    ಆದರೆ ಮೃತದೇಹ ಹಾಕುವಾಗ ಮಾಡಿದ ಎಡವಟ್ಟಿನಿಂದ ಪ್ರಕರಣ ಬಯಲಾಗಿದೆ. ಬೆಳಕವಾಡಿ ಠಾಣೆಯ ವ್ಯಾಪ್ತಿ ಬದಲಿಗೆ ಮಳವಳ್ಳಿ ಗ್ರಾಮಾಂತರ ಲಿಮಿಟ್‌ಗೆ ಶವ ಹಾಕಿ ಠಾಣೆಗೆ ಬಂದು ಶರಣಾಗಿದ್ದಾರೆ ಮೂವರು. 100 ಮೀಟರ್ ವ್ಯತ್ಯಾಸದಿಂದ ಮಾಸ್ಟರ್‌ ಪ್ಲ್ಯಾನ್‌ ಉಲ್ಟಾ ಹೊಡೆದಿದೆ. ಮಳವಳ್ಳಿ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಹಾಗೂ ತಂಡ ತನಿಖೆಯಿಂದ ಪ್ರಕರಣ ಬಯಲಾಗಿದೆ.

    ಏನಿದು ಘಟನೆ?

    ರೈಸ್​ ಪುಲ್ಲಿಂಗ್​ ವಿಷಯವಾಗಿ ಈಗಾಗಲೇ ರಾಜ್ಯದಲ್ಲಿ ಹಲವು ಅಪರಾಧ ಪ್ರಕರಣಗಳು ವಿವಿಧ ಪೊಲೀಸ್​ ಠಾಣೆಗಳಲ್ಲಿ ದಾಖಲಾಗಿವೆ. ಇದೇ ವಿಚಾರವಾಗಿಯೇ ಸಲೀಂ ಕೊಲೆ ನಡೆದಿದೆ ಎನ್ನಲಾಗಿದೆ.
    ಸಲೀಂ ತನ್ನ ಬಳಿ ತಾಮ್ರದ ಬೊಂಬು (ರೈಸ್​ ಪುಲ್ಲಿಂಗ್​) ಇರುವುದಾಗಿ ಹೇಳಿ ಶ್ರೀಕಾಂತ್‌ ಜತೆ 500 ಕೋಟಿ ರೂ.ಗೆ ವ್ಯವಹಾರ ಕುದುರಿಸಿ 5 ಲಕ್ಷ ರೂ. ಮುಂಗಡ ಪಡೆದಿದ್ದನು. ಫೆ. 7ರಂದು ಶ್ರೀಕಾಂತ್‌, ಸಲೀಂನನ್ನು ಮೈಸೂರಿನ ಇಲವಾಲ ಸಮೀಪಕ್ಕೆ ಕರೆಸಿದ್ದನೆನ್ನಲಾಗಿದೆ. ಆ ವೇಳೆ ರೈಸ್​ ಪುಲ್ಲಿಂಗ್​ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದು ಒಬ್ಬರಿಗೊಬ್ಬರು ಬಡಿದಾಡಿಕೊಳ್ಳುವ ವೇಳೆ ಸಲೀಂ ಮೃತಪಟ್ಟಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts