More

    ಮಂಡ್ಯದ ನಟನ ಬಾಳಲ್ಲಿ ಪತ್ನಿಯೇ ವಿಲನ್!​  ಕಾಡಿಸಿ-ಪೀಡಿಸಿ ಮದ್ವೆಯಾದ ‘ಆದರ್ಶ ಪತ್ನಿ’ ಪರಾರಿ

    ಮಂಡ್ಯ: ಇದು ರಿಯಾಲಿಟಿ ಷೋ ಒಂದರಲ್ಲಿ ಸಕತ್​ ಫೇಮಸ್​ ಆಗಿರೋ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳಸಿದ್ದನಹುಂಡಿಯ ನಟ ರವಿಯ ಕಥೆ. 4 ವರ್ಷದ ಹಿಂದೆ ಮೈಸೂರು ಮೂಲದ ಬೇಬಿ ಎಂಬಾಕೆಯನ್ನು ಪ್ರೀತಿಸಿ, ಮನೆಯವರ ವಿರೋಧವಿದ್ದರೂ ಮದುವೆಯಾಗಿದ್ದರು ಇವರು.

    ಮದುವೆಗೆ ಇಷ್ಟವಿಲ್ಲದಿದ್ದರೂ ಬೇಬಿ, ರವಿಯನ್ನು ಕಾಡಿಸಿ ಪೀಡಿಸಿ ಮದುವೆಯಾಗಿದ್ದಳು. ಈ ಮದುವೆಗೆ ಮನೆಯವರ ವಿರೋಧವೂ ಇತ್ತು. ಇದೇ ಕಾರಣಕ್ಕೆ ರಿಯಾಲಿಟಿ ಷೋನಲ್ಲಿ ಬಂದ ಸಂದರ್ಭದಲ್ಲಿ ರವಿಯ ಅಪ್ಪ-ಅಮ್ಮನ ಎದುರು ರವಿಯಿಂದ ಬೇಬಿಗೆ ತಾಳಿಯನ್ನೂ ಕಟ್ಟಿಸಲಾಗಿತ್ತು. ಇವರನ್ನು ಆದರ್ಶ ಪತಿ,ಪತ್ನಿ ಎಂದೇ ಹೊಗಳಲಾಗಿತ್ತು. ಆದರೆ ಈಗ ಬೇಬಿ ಯೂಟರ್ನ್​ ಹೊಡೆದಿದ್ದು, ಪತಿಯನ್ನು ಬಿಟ್ಟು ಹೋಗಿದ್ದಾಳೆ.

    ಇದಕ್ಕೆ ಕಾರಣ ಕರೊನಾದಿಂದಾಗಿ ರವಿಗೆ ಯಾವುದೇ ಕೆಲಸ ಇಲ್ಲದೇ ಸಂಪಾದನೆ ಇಲ್ಲದಿರುವುದು. ಈ ಬಗ್ಗೆ ಗೋಳು ತೋಡಿಕೊಂಡಿರುವ ರವಿ, ನನ್ನ ಬಳಿ ಹಣ ಇಲ್ಲ ಎನ್ನುವ ಕಾರಣಕ್ಕೆ ಪತ್ನಿ ಮತ್ತೊಬ್ಬನ ಜತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ. ನಿನ್ನ ಬಳಿ ದುಡ್ಡಿಲ್ಲ,. ನನಗೆ ಬೇಡ, ಅವನನ್ನೇ ಮದುವೆಯಾಗುತ್ತೇನೆ ಎಂದಿದ್ದು, ಈಗಾಗಲೇ ಮದ್ವೆ ಕೂಡ ಆಗಿದ್ದಾಳೆ ಎಂದಿದ್ದಾರೆ.

    ಈ ಮದುವೆ ತಡೆಯಲು ಹೋದ ನನ್ನ ಮೇಲೂ ಇಬ್ಬರೂ ಸೇರಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ. ತನಗಾದ ಮೋಸದಂತೆ ಮತ್ಯಾರಿಗೂ ಆಗಬಾರದು, ಆಕೆಗೆ ಶಿಕ್ಷೆ ಆಗಬೇಕು ಅಂತ ಕಲಾವಿದ ರವಿ ಪಟ್ಟು ಹಿಡಿದಿದ್ದು, ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.

    ಅಪಾರ್ಟ್​ಮೆಂಟ್​ನಲ್ಲಿ ನೇಣಿಗೆ ಶರಣಾದ ಖ್ಯಾತ ನಟಿಯ ಆತ್ಮಹತ್ಯೆ ಪ್ರಕರಣ ಭೇದಿಸಿದ ಪೊಲೀಸರು

    ಅತ್ತೆಯ ಸುಳ್ಳು ಸಾಬೀತು ಮಾಡಲು ಉರಿಯುವ ಕೆಂಡದ ಮೇಲೆ ನಡೆದ ಸೊಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts