More

    ಲವ್‌ ಮಾಡೋಕೆ ಉದ್ಯೋಗಿಗಳಿಗೆ ತಿಂಗಳಿಗೊಮ್ಮೆ ರಜೆ ಘೋಷಣೆ ಮಾಡಿದ ಸರ್ಕಾರ! ಇದೆಲ್ಲಿ ಅಂತೀರಾ?

    ಬೀಜಿಂಗ್‌: ಹೆಚ್ಚಿನ ಮಹಿಳೆಯರು ಮನೆಗೆಲಸ, ಉದ್ಯೋಗ ಎಂದುಕೊಂಡು ತಮ್ಮ ಆರೋಗ್ಯದ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ, ಮಾತ್ರವಲ್ಲದೇ ಕುಟುಂಬದ ಕಡೆ ಅವರಿಗೆ ಹೆಚ್ಚಿನ ಗಮನ ಹರಿಸಲು ಕಷ್ಟವಾಗುತ್ತಿದೆ ಎಂಬುದನ್ನು ಪರಿಗಣಿಸಿರುವ ಸರ್ಕಾರ, ಮಹಿಳೆಯರಿಗೆ ಉಳಿದ ರಜೆಗಳ ಜತೆ ಲವ್‌ ಲೀವ್‌ (ಪ್ರೀತಿ ರಜೆ) ಎಂದು ಘೋಷಿಸಿದೆ.

    ಕ್ಯಾಷುವಲ್ ಲೀವ್‌ (ಸಿಎಲ್‌), ಸಿಕ್‌ ಲೀವ್‌ (ಎಸ್‌ಎಲ್‌) ಹೀಗೆ ಇರುವ ರಜೆಗಳ ಜತೆ ತಿಂಗಳಿಗೊಮ್ಮೆ ಮಹಿಳೆಯರಿಗೆ ಲವ್‌ಲೀವ್‌ ಎಂದು ಘೋಷಿಸಲಾಗಿದೆ. ಆದರೆ ಇದು ಸಿಗುವುದು ಅವಿವಾಹಿತ ಮಹಿಳೆಯರಿಗೆ ಮಾತ್ರ

    ಇದಕ್ಕೆ ಕಾರಣ ನೀಡಿರುವ ಸರ್ಕಾರ, ಚೀನಾದಲ್ಲಿ ಹೆಚ್ಚಿನ ಮಹಿಳೆಯರು ಮದುವೆಯಾಗಲು ನಿರಾಕರಿಸುತ್ತಾರೆ. ಇದಕ್ಕೆ ಕಾರಣ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ಸಮಯ ಸಿಗುತ್ತಿಲ್ಲ ಎನ್ನುವುದು. ಇದೇ ಕಾರಣಕ್ಕೆ, ಮದುವೆಯಾಗದೇ, ಮಕ್ಕಳಾಗುವುದಿಲ್ಲ, ಇದು ದೇಶಕ್ಕೆ ಸಮಸ್ಯೆ ತಂದೊಡ್ಡಬಹುದು. ಆದ್ದರಿಂದ ತಮ್ಮ ಸಂಗಾತಿಯ ಜತೆ, ಅವರು ತಿಂಗಳಿಗೊಮ್ಮೆ ಸಮಯ ಕಳೆದು ನಂತರ ಅವರನ್ನು ಮದುವೆಯಾಗುವ ಬಗ್ಗೆ ಚಿಂತನೆ ಮಾಡಬಹುದಾಗಿದೆ.

    ಇದಕ್ಕೆ ಒಂದು ಷರತ್ತು ವಿಧಿಸಲಾಗಿದೆ. ಅದೇನೆಂದರೆ, ಮಹಿಳಾ ಉದ್ಯೋಗಿಗಳಿಗೆ 30 ವರ್ಷಕ್ಕಿಂತ ವಯಸ್ಸು ಹೆಚ್ಚಿರಬೇಕು ಹಾಗೂ ಮದುವೆಯಾಗಿರಬಾರದು. ಇದನ್ನು ಚೀನಾದ ಹ್ಯಾಂಗ್ಜೌದಲ್ಲಿರುವ ಕಂಪೆನಿಗಳು ಇದಾಗಲೇ ತಮ್ಮ ಉದ್ಯೋಗಿಗಳಿಗೆ ಡೇಟಿಂಗ್ ರಜೆ ನೀಡುತ್ತಿವೆ. ಶಾಲಾ ಶಿಕ್ಷಕರಿಯರೂ ನೂತನವಾಗಿ ಡೇಟಿಂಗ್‌ ರಜೆ ಆರಂಭಿಸಲಾಗಿದೆ.
    ಪ್ರೀತಿ ಯಾವಾಗ, ಎಲ್ಲಿ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲದ ಕಾರಣ, ಒಂದು ದಿನ ಮುಂಚಿತವಾಗಿ ರಜೆ ಹಾಕಿದರೆ ಸಾಕಂತೆ!

    ಪಾಕಿಸ್ತಾನದ ಕೊನೆಯ ಆಸೆಯೂ ಠುಸ್‌: ಸಾಲ ಕೊಡಲು ಸಾಧ್ಯವೇ ಇಲ್ಲ ಎಂದ ಐಎಂಎಫ್‌

    ಚಿತ್ರದುರ್ಗದ ನಾಲ್ವರ ಸಾವಿಗೆ ಭಯಾನಕ ಟ್ವಿಸ್ಟ್‌: ಅಪ್ಪ, ಅಮ್ಮ, ಅಜ್ಜಿ, ತಂಗಿಯನ್ನು ಕೊಂದ ಬಾಲಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts