More

    ತನ್ನ ಕೂದಲನ್ನು ಮಾರಾಟ ಮಾಡಿ ಲಕ್ಷಗಟ್ಟಲೆ ಸಂಪಾದನೆ ಮಾಡ್ತಾಳೆ; ಕೋಟ್ಯಾಧಿಪತಿ ಆಗಿರುವ ವಿಚಿತ್ರ ಕಥೆ ಇದು…

    ಅಮೆರಿಕಾ: ಹಣ ಜೀವನಕ್ಕೆ ತುಂಬಾ ಮುಖ್ಯವಾಗಿ. ನಾವು ಕೆಲಸ ಮಾಡಬೇಕು ಹಣ ಸಂಪಾದನೆ ಮಾಡಿ ಜೀವನ ನಡೆಸಬೇಕು. ಆದರೆ ಇಂದಿನ ದಿನಗಳಲ್ಲಿ ಹಣ ಗಳಿಸಲು ಹಲವು ಮಾರ್ಗಗಳಿವೆ. ಲಕ್ಷಾಧಿಪತಿಗಳಾಗುವ ಜನರು ವಿವಿಧ ಕೆಲಸಗಳನ್ನು ಮಾಡುವ ಬಗ್ಗೆ ನಾವು ಆಗಾಗ್ಗೆ ಕೇಳುತ್ತೇವೆ. ಆದರೆ ಕೂದಲು ಮಾರಾಟ ಮಾಡಿ ಕೋಟ್ಯಾಧಿಪತಿಯಾದವರ ಬಗ್ಗೆ ಕೇಳಿದ್ದೀರಾ? ನಾವು ಈ ಕುರಿತಾಗಿ ಇಂಟ್ರಸ್ಟಿಂಗ್​ ಸ್ಟೋರಿಯೊಂದನ್ನು ಹೇಳುತ್ತೇವೆ…

     ಅಮಂಡಾ ಲಿಯೋನ್ ಮಾಡೆಲ್ ಎನ್ನುವ ಯುವತಿಯೊಬ್ಬಳು ತನ್ನ ಕೂದಲು ಮಾರಾಟ ಮಾಡಿ 25 ಲಕ್ಷ ರೂಪಾಯಿ ಸಂಪಾದಿಸಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತನ್ನಂತಹವರು ಮನೆಯಲ್ಲಿ ಕುಳಿತು ಈ ದಂಧೆ ಆರಂಭಿಸಿ ಲಕ್ಷಗಟ್ಟಲೆ ಸಂಪಾದಿಸಬಹುದು ಎನ್ನುತ್ತಾರೆ ಈ ಮಹಿಳೆ.

    ಅಮಂಡಾ ಸೋಶಿಯಲ್​​ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್​​ ಹೊಂದಿದ್ದಾರೆ. ಈಕೆಗೆ ಕೆಲವು ದಿನಗಳ ಹಿಂದೆ  ಅಭಿಮಾನಿಗೊಬ್ಬರು  ಸಂದೇಶ ಕಳುಹಿಸಿದರು, ನಿಮ್ಮ ಕೂದಲು ತುಂಬಾ ಸುಂದರವಾಗಿದೆ. ನೀವು ನನಗೆ ಈ ಎಳೆಗಳಲ್ಲಿ ಒಂದನ್ನು ನೀಡಬಹುದೇ, ಇದಕ್ಕಾಗಿ ನಾನು ನಿಮಗೆ  ಹಣ ಪಾವತಿ ಮಾಡುತ್ತೇನೆಂದು ಹೇಳಿದ್ದಾರೆ.  ಕೂದಲಿಗೆ ಇರುವ ಬೇಡಿಕೆಯಿಂದಾಗಿ ಈ ವ್ಯವಹಾರ ಕಲ್ಪನೆಯು ಬಂದಿದೆ. ಎಂದು ಕೂದಲು ಮಾತ್ರವಲ್ಲದೆ ದೇಹದ ಮೇಲಿನ ಕೂದಲನ್ನೂ ಖರೀದಿಸಲು ಎಷ್ಟು ಜನರು ಲಕ್ಷಗಳನ್ನು ಖರ್ಚು ಮಾಡಲು ಸಿದ್ಧರಾಗಿದ್ದಾರೆ ಎನ್ನುವುದನ್ನು ತಿಳಿದುಕೊಂಡಿದ್ದಾಳೆ.  ನಾನು ನನ್ನ ಕೂದಲನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾಳೆ. ಅಂದಿನಿಂದ ಆಕೆ ತನ್ನ ಕೂದಲನ್ನು ಮಾರಿ 24,000 ಪೌಂಡ್ (ಸುಮಾರು 25 ಲಕ್ಷ ರೂ.) ಗಳಿಸಿದ್ದಾಳೆ.

    View this post on Instagram

    A post shared by Amanda Leon (@euamandaleon_)

    ಮಹಿಳಾ ಅಭಿಮಾನಿಗಳೊಂದಿಗೆ  ವ್ಯವಹಾರ ಮಾಡುತ್ತಾರೆ. ಅಲ್ಲಿ ಗ್ರಾಹಕರು ಆಕೆಯ ದೇಹದ ಕೂದಲನ್ನು ಖರೀದಿಸಲು ಮಾಡುತ್ತಾರೆ. ಇದು ವಯಸ್ಕರ ತಾಣವಾಗಿದೆ. ಈ ರೀತಿಯ ವಿಚಿತ್ರ ದಂಧೆಯಿಂದ ಹೆಚ್ಚು ಹಣ ಗಳಿಸುತ್ತಿರುವ ಮಹಿಳೆ ಅಮಂಡಾ ಮಾತ್ರವಲ್ಲ, ಲಂಡನ್‌ನ 27 ವರ್ಷದ ಕ್ಯಾಮಿಲ್ ಅಲೆಕ್ಸಾಂಡರ್ ಕೂಡ ತನ್ನ ಕಂಕುಳಿನ ಕೂದಲನ್ನು ಮಾರಾಟ ಮಾಡುವ ಮೂಲಕ ದೊಡ್ಡ ಮೊತ್ತವನ್ನು ಗಳಿಸುತ್ತಿದ್ದಾಳೆ. ಕೆಲವರಿಗೆ ಅವರ ವ್ಯವಹಾರ ವಿಚಿತ್ರ ಎನಿಸಬಹುದು. ಆದರೆ  ಇದು ನಿಜ ಎಂದಿದ್ದಾಳೆ.

    ಕೂದಲನ್ನು ಮಾರಾಟ ಮಾಡುವುದು ಒಂದು ವ್ಯವಹಾರವಾಗಿದೆ ಮತ್ತು ಭಾರತದಲ್ಲಿಯೂ ಸಹ ಅನೇಕ ಜನರು ಅದನ್ನು ಉತ್ತಮ ರೀತಿಯಲ್ಲಿ ಗಳಿಸುತ್ತಿದ್ದಾರೆ. ಭಾರತದಲ್ಲಿ ಮನುಷ್ಯನ ಕೂದಲು ಕೆಜಿಗೆ 25 ರಿಂದ 30 ಸಾವಿರ ರೂಪಾಯಿಗೆ ಮಾರಾಟವಾಗುತ್ತದೆ. ಜನರು ಕೂದಲು ಖರೀದಿಸಿ ವಿದೇಶಕ್ಕೆ ಕಳುಹಿಸುತ್ತಾರೆ. ಭಾರತದಿಂದ ಕೂದಲನ್ನು ಚೀನಾ, ಮಲೇಷ್ಯಾ, ಥೈಲ್ಯಾಂಡ್, ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್, ಬರ್ಮಾ ದೇಶಗಳಿಗೆ ಕಳುಹಿಸಲಾಗುತ್ತದೆ. ಇಲ್ಲಿ ಅವುಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ನಂತರ ವಿಗ್ಗಳನ್ನು ತಯಾರಿಸಲಾಗುತ್ತದೆ. ಇದನ್ನು ಬ್ರಷ್‌ಗಳು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts