More

    ಟ್ರಂಪ್​ ಹೆಸರಲ್ಲಿ ಬಂದ ಪತ್ರದಲ್ಲಿ ಪ್ರಾಣಘಾತಕ ವಿಷ: ಕಳಿಸಿದ್ಯಾರು? ಆತಂಕದಲ್ಲಿ ಶ್ವೇತಭವನ!

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಲ್ಲಿ ಅನಾಮಿಕ ಪತ್ರವೊಂದು ಬಂದಿದ್ದು, ಇದರಲ್ಲಿ ವಿಷಕಾರಕ ಅಂಶವಿರುವುದು ಪತ್ತೆಯಾಗಿದೆ.

    ಶ್ವೇತಭವನದ ವಿಳಾಸಕ್ಕೆ ಈ ಪತ್ರ ಬಂದಿದೆ. ಇದರಲ್ಲಿ ಹಾನಿಕಾರಕ ರಿಸಿನ್ ವಿಷವಿರುವುದನ್ನು ಸಿಬ್ಬಂದಿ ಪತ್ತೆ ಮಾಡಿದ್ದು, ಎರಡು ಪರೀಕ್ಷೆಗಳ ನಂತರ ಇದು ದೃಢಪಟ್ಟಿದೆ. ಈ ಪತ್ರವು ಕೆನಡಾದಿಂದ ಬಂದಿದೆ ಎನ್ನಲಾಗಿದೆ.

    ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು, ಪತ್ರ ಬಂದಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಶ್ವೇತಭವನಕ್ಕೆ ಬರುವ ಎಲ್ಲಾ ಪತ್ರಗಳನ್ನು ವಿಂಗಡಿಸಿ ಅವುಗಳನ್ನು ಮೊದಲು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಷಕಾರದ ರಿಸಿನ್ ಅಂಶ ಇರುವುದು ತಿಳಿದಿದೆ.

    ನಂತರ ಯುಎಸ್ ಸಿಕ್ರೇಟ್ ಸರ್ವೀಸ್ ಅಧಿಕಾರಿಗಳು ಇನ್ನೊಂದು ಪರೀಕ್ಷೆಯನ್ನು ಮಾಡಲಾಗಿದ್ದು, ಇದರಲ್ಲಿ ವಿಷ ಇರುವುದು ಖಚಿತವಾಗಿದೆ. ಭಯೋತ್ಪಾದನೆ ದಾಳಿಗಳಲ್ಲಿ ಬಳಸಲಾದ ಕ್ಯಾಸ್ಟರ್ ಬೀನುಗಳಿಂದ ತೆಗೆದ ಒಂದು ಅತ್ಯಂತ ವಿಷಕಾರಿ ವಸ್ತು ರಿಸಿನ್. ಇದನ್ನು ಪೌಡರ್, ಮಿಸ್ಟ್, ಪೆಲೆಟ್ ಅಥವಾ ಆಮ್ಲದ ರೂಪದಲ್ಲಿ ಬಳಸಬಹುದು. ಇದನ್ನು ಸೇವಿಸಿದರೆ ವಾಂತಿ ಉಂಟಾಗುತ್ತದೆ. ಮಾತ್ರವಲ್ಲದೇ ಇದು ಹೊಟ್ಟೆ ಮತ್ತು ಕರುಳುಗಳ ರಕ್ತಸ್ರಾವಕ್ಕೂ ಕಾರಣವಾಗಬಹುದು. ಯಕೃತ್ತು ಮತ್ತು ಮೂತ್ರಪಿಂಡಗಳ ವೈಫಲ್ಯ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ಕುಸಿತದಿಂದ ವ್ಯಕ್ತಿಯ ಪ್ರಾಣಕ್ಕೂ ಅಪಾಯ ಉಂಟಾಗುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ತಂದೆಯ ನಿಧನದ ನಂತರ ತಾಯಿ ತನ್ನಿಚ್ಛೆಯಂತೆ ಆಸ್ತಿ ಭಾಗ ಮಾಡಬಹುದಾ?

    36 ರಿಂದ 72 ಗಂಟೆಗಳ ಅವಧಿಯಲ್ಲಿ ವ್ಯಕ್ತಿಯ ಸಾವಿಗೆ ಕಾರಣವಾಗಬಲ್ಲ ರಿಸಿನ್ ವಿಷವನ್ನು, ಜೈವಿಕ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

    ಅಮೆರಿಕದಲ್ಲಿ ಈ ವಿಷ ಬಳಸಿ ಪತ್ರಗಳನ್ನು ರವಾನಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಈ ಹಿಂದೆಯೂ ಇಂಥ ಘಟನೆಗಳು ಸಂಭವಿಸಿದೆ. 2014ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಹೆಸರಲ್ಲಿ ರಿಸಿನ್ ವಿಷಲೇಪಿತ ಪತ್ರಗಳನ್ನು ರವಾನಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.

    2018ರಲ್ಲಿ ವಿಲಿಯಂ ಕ್ಲೈಡ್ ಅಲೆನ್ ಎಂಬ ವ್ಯಕ್ತಿ ಟ್ರಂಪ್ ಹಾಗೂ ಎಫ್‌ಬಿಐ ನಿರ್ದೇಶಕ ಸ್ಟೋಫರ್ ವ್ರೇ ಸೇರಿದಂತೆ ಇತರ ಫೆಡರಲ್ ಅಧಿಕಾರಿಗಳ ಹೆಸರಲ್ಲಿ ರಿಸಿನ್ ಲೇಪಿತ ಪತ್ರಗಳನ್ನು ರವಾನಿಸಿರುವುದಾಗಿ ಬೆದರಿಕೆ ಹಾಕಿದ್ದ ಎಂದು ಮೂಲಗಳು ಹೇಳಿವೆ.

    ಅತ್ಯಾಚಾರ ಮಾಡಿದರೆ ‘ಅದಕ್ಕೇ’ ಬೀಳತ್ತೆ ಕತ್ತರಿ!​​ ಈ ದೇಶದಲ್ಲಿ ಬಂತು ಹೊಸ ಕಾನೂನು…

    ಕರೊನಾ ಬಂದಿದೆ, ಬದುಕಿರಲಾರೆ ಎಂದು ಪತ್ನಿಗೆ ಹೇಳಿ ಮನೆಬಿಟ್ಟವ ಇನ್ನೊಬ್ಬಳ ತೆಕ್ಕೆಯಲ್ಲಿ ಸಿಕ್ಕಿಬಿದ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts