More

    ಏಷ್ಯಾದ ಅತಿದೊಡ್ಡ ಸುರಂಗ ಮಾರ್ಗ ಶೀಘ್ರ ಮುಕ್ತಾಯ: ಚೀನಾ-ಪಾಕ್‌ ಗಡಿಯಲ್ಲಿರೋ ಇದಕ್ಕಿದೆ ಹಲವಾರು ವಿಶೇಷತೆ

    ಶ್ರೀನಗರ: ಇದು ಭಾರತದ ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಗಡಿಯಲ್ಲಿ ನಿರ್ಮಾಣವಾಗಿರುವ ಏಷ್ಯಾದ ಅತಿ ಉದ್ದದ ಸುರಂಗ ಮಾರ್ಗ. ಇದರ ಹೆಸರು ಝೊಜಿಲಾ. ಚೀನಾ ಮತ್ತು ಪಾಕಿಸ್ತಾನ ಗಡಿಯ ಸನಿಹದಲ್ಲಿರುವ ಈ ಸುರಂಗಮಾರ್ಗಕ್ಕೆ ಇಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿ ನೀಡಲಿದ್ದು ಪರಿಶೀಲನೆ ನಡೆಸಲಿದ್ದಾರೆ.

    ಈ ಸುರಂಗ ಮಾರ್ಗ ಸಂಪೂರ್ಣಗೊಂಡರೆ 30 ವರ್ಷಗಳಿಂದ ಲಡಾಖ್ ಜನರು ನಿರೀಕ್ಷಿಸಿದ್ದ ಕನಸು ನನಸಾಗಲಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ನಿರ್ಮಾಣ ಎನಿಸಿಕೊಂಡಿದೆ. 14.15 ಕಿ.ಮೀ ಸುರಂಗಮಾರ್ಗ ಇದಾಗಿದ್ದು, ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಕಂಪೆನಿಯು ಇದರ ನಿರ್ವಣೆ ಹೊತ್ತುಗೊಂಡಿದೆ.

    ಸುರಂಗದಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ, ಭಾರದ ವಾಹನಗಳನ್ನು ಗುರುತಿಸುವ ವ್ಯವಸ್ಥೆ, ಸ್ವಯಂಚಾಲಿತ ಬೆಂಕಿ ಗುರುತಿಸುವ ವ್ಯವಸ್ಥೆ, ಬೆಂಕಿ ಅಲಾರಾಂ ಸೇರಿದಂತೆ ಹಲವು ಸೌಕರ್ಯಗಳಿವೆ.
    ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸುವ ಆತ್ಮನಿರ್ಭರ್ ಭಾರತ ಪರಿಕಲ್ಪನೆಗೂ ಈ ಸುರಂಗ ಪೂರಕವಾಗಿದೆ. ಸುರಂಗ ನಿರ್ಮಾಣದ ನಂತರ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಹೊಸ ಬಲ ಸಿಗಲಿದೆ. ಗಡಿ ಪ್ರದೇಶದಲ್ಲಿರುವ ಈ ಸುರಂಗ ಮಾರ್ಗವು ತುರ್ತು ಪರಿಸ್ಥಿತಿಯಲ್ಲಿ ಸೇನಾಪಡೆ, ಯುದ್ಧೋಪಕರಣಗಳು ಮತ್ತು ಯುದ್ಧ ಟ್ಯಾಂಕ್​ಗಳನ್ನು ಗಡಿಯಲ್ಲಿ ನಿಯೋಜಿಸಲು ಅನುಕೂಲ ಕಲ್ಪಿಸಲಿದೆ.

    ಕಳೆದ ವರ್ಷ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಯೋಜನೆಗೆ ಚಾಲನೆ ನೀಡಿದ್ದರು. ಸಂಚಾರದ ಅವಧಿಯನ್ನು 3.15 ತಾಸು ಕಡಿಮೆ ಮಾಡುತ್ತದೆ. 6800 ಕೋಟಿ ರೂ. ವೆಚ್ಚದ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮೇ 2018ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಈ ಸುರಂಗವು ಶ್ರೀನಗರ ಕಣಿವೆ ಮತ್ತು ಲೇಹ್ ನಡುವೆ ಸರ್ವಋತು ಸಂಪರ್ಕ ಕಾಪಾಡಲು ನೆರವಾಗುತ್ತದೆ. ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಒಂದು ಎನಿಸಿಕೊಂಡಿರುವ ಈ ರಸ್ತೆಯಲ್ಲಿ ಸಂಚರಿಸುವುದು ಸವಾಲಿನ ವಿಷಯವಾಗಿತ್ತು. ಚೀನಾ ಮತ್ತು ಪಾಕಿಸ್ತಾನದ ಗಡಿಯ ಸನಿಹದಲ್ಲಿರುವ ಈ ಸುರಂಗ ಮಾರ್ಗವು ದೇಶದ ಭದ್ರತೆ ದೃಷ್ಟಿಯಿಂದ ಪ್ರಾಮುಖ್ಯ ಪಡೆದಿದೆ.

    2013ರ ಯುಪಿಎ ಆಡಳಿತದಲ್ಲಿಯೇ ಈ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ನಾಲ್ಕು ಬಾರಿ ಟೆಂಡರ್ ಕರೆಯಲಾಗಿತ್ತು. ಸಮುದ್ರಮಟ್ಟದಿಂದ 11,578 ಅಡಿ ಎತ್ತರದಲ್ಲಿ ಈ ರಸ್ತೆಯನ್ನು ನಿರ್ಮಿಸುವುದು ದೊಡ್ಡ ಸವಾಲಾಗಿತ್ತು. ಇದೀಗ ನರೇಂದ್ರ ಮೋದಿ ಅಧಿಕಾರ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿತು. ಸುರಂಗಕ್ಕಾಗಿ ಆರಂಭದಲ್ಲಿ 10,643 ಕೋಟಿ ರೂ. ವೆಚ್ಚವನ್ನು ಅಂದಾಜು ಮಾಡಲಾಗಿತ್ತು. ರಸ್ತೆ ಮತ್ತು ಸುರಂಗವನ್ನು ಪ್ರತ್ಯೇಕವಾಗಿ ನಿರ್ಮಿಸುವ ಮೂಲಕ 3,835 ಕೋಟಿ ರೂ. ಉಳಿತಾಯವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ.

    ಏನು ಹೇಳೋದಮ್ಮಾ ನಿಮ್ಮಂಥೋರಿಗೆ? ಮೆಸೇಜ್‌ ಮಾಡ್ತಿರೋನು ಯುವಕನೇ ಅಂತ ಕನ್‌ಫರ್ಮ್‌ ಇದ್ಯಾ?

    ಬ್ಲಾಕ್‌ನಲ್ಲಿ ಟಿಕೆಟ್‌ ಮಾರಾಟ: ಇದುವರೆಗೆ ಹೇಳಿರದ ಬಹುದೊಡ್ಡ ಸೀಕ್ರೆಟ್‌ ರಟ್ಟು ಮಾಡಿದ ಚನ್ನಣ್ಣನವರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts