More

    VIDEO| ನಮ್ಮ ಯೋಧರನ್ನು ಕೊಂದ ಚೀನಾಗೆ ಪಾಠ ಕಲಿಸಲು ಗಡಿಯತ್ತ ಬಾಲಕರ ಪ್ರಯಾಣ: ಮುಂದೇನಾಯ್ತು?

    ನವದೆಹಲಿ: ಕಳೆದ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ನಡುವೆ ಲಡಾಖ್​ ಗಡಿಯ ಗಾಲ್ವಾನ್​ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದರು. ಚೀನಾದ 35 ಯೋಧರನ್ನು ಸಹ ನಮ್ಮ ಸೇನೆ ಹೊಡೆದುರುಳಿಸಿತು. ಇದು ಐದು ದಶಕಗಳ ಬಳಿಕ ನಡೆದ ಬಹುದೊಡ್ಡ ಘರ್ಷಣೆಯಂದೇ ಹೇಳಲಾಗುತ್ತಿದೆ.

    1967ರಲ್ಲಿ ನಾಥು ಲಾ ಗಡಿಯಲ್ಲಿ ಈ ರೀತಿಯ ಘರ್ಷಣೆ ಉಭಯ ದೇಶಗಳ ನಡುವೆ ನಡೆದಿತ್ತು. ಈ ವೇಳೆ ಭಾರತದ 80 ಯೋಧರು ಮತ್ತು ಚೀನಾದ 300 ಸೈನಿಕರು ಸಾವಿಗೀಡಾಗಿದ್ದರು. ಕಳೆದ ಸೋಮವಾರ ನಡೆದ ಘರ್ಷಣೆಯ ಬಳಿಕ ಗಡಿಯಲ್ಲಿ ಭಾರಿ ಉದ್ವಿಘ್ನತೆ ನೆಲೆಸಿತ್ತು. ಇದರ ಮಧ್ಯೆ ಉಭಯ ರಾಷ್ಟ್ರಗಳ ನಾಯಕರ ನಡುವೆ ಮಾತುಕತೆ ನಡೆದಿದ್ದು, ಪರಿಸ್ಥಿತಿ ತಿಳಿಯಾಗಿದೆ. ಇದನ್ನೂ ಓದಿ: ವ್ಹೀಲಿಂಗ್​ ಮಾಡುವಾಗ ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿ ಮೂವರ ಸಾವು

    ಚೀನಾದ ಕುಂತಂತ್ರಿ ಬುದ್ಧಿಯ ವಿರುದ್ಧ ರೊಚ್ಚಿಗೆದ್ದಿರುವ ಭಾರತೀಯರು ಅನೇಕ ಪ್ರತಿಭಟನೆಗಳನ್ನು ನಡೆಸಿದ್ದು, ಇದೀಗ ಚೀನಾ ವಸ್ತಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನವನ್ನು ನಡೆಸುವ ಮೂಲಕ ದೇಶಪ್ರೇಮ ಮೆರೆಯುತ್ತಿದ್ದಾರೆ. ಬಾಯ್ಕಾಟ್​ ಚೀನಾ ಗೂಡ್ಸ್​ (ಚೀನಾ ವಸ್ತುಗಳನ್ನು ಬಹಿಷ್ಕರಿಸಿ) ಎಂಬ ಹ್ಯಾಶ್​ಟ್ಯಾಗ್​ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದೆ.

    ಅನೇಕರು ದೇಶಪ್ರೇಮವನ್ನು ಹೊರಗಾಕುತ್ತಿರುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಬಾಲಕರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಿಜವಾದ ದೇಶಪ್ರೇಮ ಏನೆಂದು ತೋರಿಸಿದ್ದಾರೆ. ನಮ್ಮ ಯೋಧರನ್ನು ಹತ್ಯೆಗೈದ ಚೀನಾ ಸೈನಿಕರನ್ನು ಬಿಡಬಾರದೆಂದು ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಬಾಲಕರ ದೇಶಪ್ರೇಮವನ್ನು ಮೆಚ್ಚಲೇಬೇಕು.

    ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋದಲ್ಲಿ, ಉತ್ತರ ಪ್ರದೇಶದ ಆಲಿಗಢ ಮೂಲದ ಹತ್ತು ಬಾಲಕರು ಭಾರತ-ಚೀನಾ ಗಡಿಗೆ ಪಾದಾಯಾತ್ರೆ ಮಾಡಲು ಯೋಜನೆ ರೂಪಿಸಿ, ಹೆದ್ದಾರಿ ಮಾರ್ಗವಾಗಿ ಸಾಗುತ್ತಿರುತ್ತಾರೆ. ಈ ವೇಳೆ ಅವರನ್ನು ಪೊಲೀಸರು ತಡೆದು ವಿಚಾರಿಸಿದಾಗ, ನಮ್ಮ ಯೋಧರನ್ನು ಕೊಂದ ಚೀನಾಗೆ ನಾವು ಪಾಠ ಕಲಿಸಲು ಹೋಗುತ್ತಿದ್ದೇವೆ ಎಂದಿದ್ದಾರೆ. ಇದರಿಂದ ಪ್ರಭಾವಗೊಂಡ ಪೊಲೀಸರು​ ಬಾಲಕರನ್ನು ಹೊಗಳಿ, ಅವರನ್ನು ಸಂತೈಸಿ, ಪರಸ್ಪರ ಸಮಾಲೋಚನೆ ನಡೆಸಿ ವಾಪಸ್​ ಕಳುಹಿಸುತ್ತಾರೆ. ಇದನ್ನೂ ಓದಿ: ಯುವತಿಯರೇ ಹುಷಾರ್​ ಇಂಥವರು ಇರ್ತಾರೆ: ಈತನ ಖತರ್ನಾಕ್​ ಬುದ್ಧಿ ಗೊತ್ತಾದ್ರೆ ಬೆರಗಾಗ್ತೀರಾ…!

    ಏನೇ ಆಗಲಿ ಬಾಲಕರ ಧೈರ್ಯಕ್ಕೆ ಹಾಗೂ ಅಪ್ರತಿಮ ದೇಶಪ್ರೇಮಕ್ಕೆ ಒಂದು ಸಲಾಂ ಹೇಳಲೇ ಬೇಕು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts