More

    ಗಂಡನಿಲ್ಲದೇ ಬದುಕಲಾರೆ, ಮನೆ ಮಾರಿ ಸಾಲ ತೀರಿಸಿ- ಮಕ್ಕಳನ್ನು ಉರುಳಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

    ಬೆಂಗಳೂರು: ಕರೊನಾದಿಂದ ಪತಿ ಮೃತಪಟ್ಟ ನಂತರ ವರ್ಷದವರೆಗೆ ಒಂಟಿಯಾಗಿದ್ದ ಮಹಿಳೆಯೊಬ್ಬರು, ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಮನೆ ಮೇಲೆ ಸಾಲ ಮಾಡಿಕೊಂಡು ಸಾಲ ತೀರಿಸಲಾಗದೇ, ಪತಿಯೂ ಇಲ್ಲದೇ ಖಿನ್ನತಗೆ ಜಾರಿದ್ದೇ ಇಂಥ ಭಯಾನಕ ಕೃತ್ಯಕ್ಕೆ ಕಾರಣವಾಗಿದೆ.

    ನೆಲಮಂಗಲದ ಮಾದನಾಯಕನ ಹಳ್ಳಿ ಬಳಿಯ ಪ್ರಕೃತಿ ಬಡಾವಣೆ ವಸಂತಾ (40), ಯಶವಂತ್ (15) ಹಾಗೂ ನಿಶ್ಚಿತಾ (6) ಮೃತಪಟ್ಟವರು. ಒಂದು ರೂಮಿನಲ್ಲಿ ಮಗನನ್ನು ನೇಣಿಗೆ ಹಾಕಿ, ಇನ್ನೊಂದು ಕೊಠಡಿಯಲ್ಲಿ ಮಗಳ ಜತೆ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೈಸೂರು ಪಿಯಾಪಟ್ಟಣ ಮೂಲದ ಪತಿ ಪ್ರಸನ್ನ ಕುಮಾರ್, ಬಿಎಂಟಿಸಿಯ ಚಾಲಕ‌ ಕಂ ನಿರ್ವಾಹಕನಾಗಿದ್ದರು. ಮೂರು ವರ್ಷದ ಹಿಂದೆ ಮನೆ ಖರೀದಿಗೆ 20 ಲಕ್ಷದಷ್ಟು ಸಾಲ ಮಾಡಿದ್ದರು. ಪ್ರಸನ್ನ ಕುಮಾರ ಅವರು 2020ರ ಆಗಸ್ಟ್ ತಿಂಗಳ 7 ರಂದು ಕರೊನಾಗೆ ಬಲಿಯಾದರು. ಅಂದಿನಿಂದ ವಸಂತಾ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಇದೀಗ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
    ನನ್ನ ಗಂಡನನ್ನ ಕಳೆದುಕೊಂಡ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನವರು ಅಂತ ಯಾರೂ ಇಲ್ಲ, ನಾನು ಮತ್ತು ನನ್ನ ಮಕ್ಕಳು ಯಾರಿಗೂ ಭಾರವಾಗುವುದಿಲ್ಲ. ನಮ್ಮ ಸಾವಿಗೆ ನಮ್ಮ ಸ್ವಾಭಿಮಾನವೇ ಕಾರಣ ಈ ಮನೆ ಮಾರಾಟ ಮಾಡಿ ನಮ್ಮ ಸಾಲ ತೀರಿಸಿಬಿಡಿ, ಹಣ ಉಳಿದರೆ ಅನಾಥಾಶ್ರಮಕ್ಕೆ ನೀಡಿ ಎಂದು ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಇಬ್ಬರು ಮಕ್ಕಳೊಂದಿಗೆ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮನೆ ಖರೀದಿಗೆ ಬ್ಯಾಂಕ್ ಸಾಲ ಹಾಗೂ ಬಡ್ಡಿಗೆ ಸಾಲ ಪಡೆದಿದ್ದರು. ಅರ್ಧದಷ್ಟು ಮನೆ ಸಾಲವನ್ನು ಪ್ರಸನ್ನಕುಮಾರ್ ತೀರಿಸಿದ್ದರು. ಆದರೆ ಪತಿಯ ಹಠಾತ್ ಸಾವಿನಿಂದ ನೊಂದು ವಸಂತ ಮನೆಯಲ್ಲೇ ಏಕಾಂಗಿಯಾಗಿರುತ್ತಿದ್ದರು. ಅಕ್ಕಪಕ್ಕದವರ ಜೊತೆಗೆ ಮಾತನಾಡುವುದನ್ನ ಬಿಟ್ಟಿದ್ದ ವಸಂತಾ ಹೀಗೆ ಮಾಡಿಕೊಂಡಿದ್ದಾರೆ.

    ಎರಡು ತಿಂಗಳ ಹಿಂದೆ ಹೆಸರುಗಟ್ಟೆ ಕೆರೆ ಬಳಿ ಆತ್ಮಹತ್ಯೆಗೆ ಇವರು ಮಗಳು ಕಿರುಚಾಡಿದ್ದರಿಂದ ಸಾರ್ವಜನಿಕರು ಕಾಪಾಡಿದ್ದರು. ಆದರೆ ಈಗ ಆತ್ಮಹತ್ಯೆಗೆ ಶರಣಾಗುವ ಮುನ್ನ ಮನೆಯನ್ನು ಲಾಕ್ ಮಾಡಿದ್ದರು. ಆರಂಭದಲ್ಲಿ ಮಗನಿಗೆ ನೇಣು ಹಾಕಿಕೊಳ್ಳಲು ಪ್ರಚೋದಿಸಿದ ಬಳಿಕ ಇನ್ನೊಂದು ಕೊಠಡಿಯಲ್ಲಿ ಮಗಳಿಗೆ ನೇಣು ಹಾಕಿ ಕೊನೆಗೆ ವಸಂತ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಭಾರತದಲ್ಲಿ 50 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌: ಮಾಸಿಕ ವರದಿಯಲ್ಲಿ ವಿಷಯ ಬಹಿರಂಗ

    ಕರ್ನಾಟಕದಲ್ಲಿ ನಾನು ಭಿಕ್ಷುಕಿ, ಎಲ್ಲಾದಕ್ಕೂ ಭಿಕ್ಷೆ ಬೇಡ್ಲೇಬೇಕಿದೆ… ನನ್ನ ಸಮಾಧಿ ಇಲ್ಲೇ ಆಗಬೇಕು ಎಂದ ನಟಿ ವಿಜಯಲಕ್ಷ್ಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts