More

    ಈ ಲೇಡಿ ಪೊಲೀಸ್​ ಓಡದಿದ್ದರೆ ಆತನ ಪ್ರಾಣವೇ ಹೋಗ್ತಿತ್ತು! ವಿಡಿಯೋ ನೋಡಿ…

    ಹೈದರಾಬಾದ್: ಚಲಿಸುತ್ತಿದ್ದ ರೈಲನ್ನು ಹತ್ತುವ ಭರದಲ್ಲಿ ಅಥವಾ ರೈಲು ಚಲಿಸುತ್ತಿರುವಾಗಲೇ ಇಳಿಯುವ ಅವಸರದಲ್ಲಿ ಪ್ರಾಣವನ್ನು ಕಳೆದುಕೊಳ್ಳುವವರು ಇದ್ದಾರೆ. ಅಂಥದ್ದೇ ಒಂದು ಘಟನೆ ಇಲ್ಲಿಯೂ ನಡೆಯುತ್ತಿತ್ತು. ಆದರೆ ಅಲ್ಲಿದ್ದ ಲೇಡಿ ಪೊಲೀಸ್​ ಒಬ್ಬರು ವ್ಯಕ್ತಿಯ ಪ್ರಾಣವನ್ನು ಕಾಪಾಡಿದ್ದಾರೆ.

    ಆಂಧ್ರಪ್ರದೇಶದ ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಾಲುಜಾರಿ ಕೆಳಗೆ ಬಿದ್ದ ವ್ಯಕ್ತಿ ಪ್ರಾಣವನ್ನು ರೈಲ್ವೆ ರಕ್ಷಣಾ ಪಡೆಯ ಮಹಿಳಾ ಕಾನ್ಸ್‌ಟೆಬಲ್ ಉಳಿಸಿದ್ದಾರೆ. ಈ ಕುರಿತು ರೈಲ್ವೆ ಸಚಿವಾಲಯವು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಹಿಳಾ ಕಾನ್ಸ್‌ಟೆಬಲ್ ಕಾರ್ಯವನ್ನು ಶ್ಲಾಘಿಸಿದೆ. ಪರರ ಪ್ರಾಣವನ್ನು ಉಳಿಸುವುದು ಮೊದಲ ಕರ್ತವ್ಯ ಎಂದು ಶೀರ್ಷಿಕೆ ನೀಡಲಾಗಿದೆ.

    ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲನ್ನು ಏರಲು ಮುಂದಾಗಿ ಕಾಲು ಜಾರಿ ಕೆಳಗೆ ಬೀಳುತ್ತಾನೆ. ಇದನ್ನು ಗಮನಿಸಿದ ಅಲ್ಲೇ ಇದ್ದ ಮಹಿಳಾ ಕಾನ್ಸ್‌ಟೆಬಲ್ ಓಡಿ ಹೋಗಿ ಪ್ರಯಾಣಿಕನನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾರೆ. ಇಲ್ಲದಿದ್ದರೆ ಆ ಪ್ರಯಾಣಿಕ ರೈಲಿನ ಅಡಿ ಆಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು.

    ಮಹಿಳಾ ಕಾನ್ಸ್‌ಟೆಬಲ್ ಅವರನ್ನು ಮೇರಿ ಸಾಹೇಲಿ ಎಂದು ಗುರುತಿಸಲಾಗಿದ್ದು, ಆರ್​ಪಿಎಫ್​ ಕಾನ್ಸ್​ಟೆಬಲ್​ ಆಗಿರುವ ಮೇರಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಚಲಿಸುವ ರೈಲನ್ನು ಹತ್ತುವಾಗ ಹಾಗೂ ಇಳಿಯುವಾಗ ಎಷ್ಟು ಜಾಗೃತರಾಗಿರಬೇಕು ಎನ್ನುವುದನ್ನು ಈ ವಿಡಿಯೋ ತೋರಿಸುತ್ತದೆ. ಎಲ್ಲರಿಗೂ ಈ ಪ್ರಯಾಣಿಕನಂತೆ ಅದೃಷ್ಟ ಸಿಗದೇ ಹೋಗಬಹುದಲ್ಲವೆ?

    ರೈತ ಮುಖಂಡರಿಂದ ಜೀವಕ್ಕೆ ಅಪಾಯವಿದೆ- ಹಿಂಸಾಚಾರದ ಕುರಿತು ನಟ ದೀಪ್​ ಸಿಧು ಹೇಳಿರುವ ಮಾಹಿತಿ ಇಲ್ಲಿದೆ…

    ಮುದ್ದು ಕಂದನ ಜೀವ ಉಳಿಸಲು ₹6 ಕೋಟಿ ಜಿಎಸ್​ಟಿ ಮನ್ನಾ ಮಾಡಿದ ಪ್ರಧಾನಿ ಮೋದಿ

    ರೈತರ ವಿಷಯದಲ್ಲಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದ ಕೆನಡಾ ಪ್ರಧಾನಿ ಮಾಡಿಕೊಂಡರೊಂದು ಕಳಕಳಿಯ ಮನವಿ…

    ಕಾರಿನ ಹ್ಯಾಂಡ್​ಬ್ರೇಕ್​ ಹಾಕದೇ ಮೂತ್ರವಿಸರ್ಜನೆಗೆ ಹೋದ ಚಾಲಕ- ನಾಲ್ವರ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts