More

    VIDEO| ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಳಿಯಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ: ಸಾಹಿತಿ ಎಸ್​.ಎಲ್​.ಭೈರಪ್ಪ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಳಿಯಲು ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು, ಮೋದಿ ಅಭಿವೃದ್ಧಿಯನ್ನು ಸಹಿಸದೇ ಇರುವವರಿಂದ ದೇಶದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಹಿರಿಯ ಸಾಹಿತಿ ಎಸ್​.ಎಲ್​.ಭೈರಪ್ಪ ತಿಳಿಸಿದರು.

    ಮೈಸೂರಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದರು. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿ, ಧೈರ್ಯವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಜನಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಮುಂದಿನ ಚುನಾವಣೆಯಲ್ಲಿಯೂ ಗೆದ್ದುಬಿಡುತ್ತಾರೆಂಬ ಆತಂಕ ಮನೆ ಮಾಡಿರುವುದರಿಂದ ಎಲ್ಲವನ್ನು ಒಟ್ಟುಗೂಡಿಸಿ ಮೋದಿಯವರನ್ನು ಹೇಗಾದರೂ ಇಳಿಸಬೇಕೆಂಬ ಪಿತೂರಿ ನಡೆಸುತ್ತಿದ್ದಾರೆ ಎಂದು ಮೋದಿ ವಿರೋಧಿಗಳಿಗಳನ್ನು ಜರಿದರು.

    ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಯನ್ನು ನೆಪವಾಗಿಸಿಕೊಂಡು ಹಿಂಸಾಚಾರ ನಡೆಸುತ್ತಿದ್ದಾರೆ. ಗಲಾಟೆ ಹಬ್ಬಿಸುವುದಕ್ಕೆ ಜೆಎನ್​ಯುನಲ್ಲಿ ಇರುವವರಿಗೆ ಕುಮ್ಮಕ್ಕೂ ನೀಡಿದ್ದಾರೆ. ಜೆಎನ್​ಯುನಲ್ಲಿ ಇರುವವರಿಗೆ ಸದಾ ಇದೇ ಕೆಲಸವಾಗಿದೆ. ಸರ್ಕಾರ ವಿಶ್ವವಿದ್ಯಾಲಯಗಳನ್ನು ನಡೆಸಲು ಇಂತಿಷ್ಟು ಹಣವನ್ನು ನೀಡುತ್ತಿದೆ. ಅದರಲ್ಲಿ ಜೆಎನ್​ಯುಗೆ ಹೆಚ್ಚಿನ ಹಣ ನೀಡಲಾಗುತ್ತಿದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಣವನ್ನು ಪಡೆದು ಇಂತಹ ಕೃತ್ಯಗಳನ್ನು ಕೆಲ ವರ್ಗದವರು ಮಾಡುತ್ತಾ ಬಂದಿದ್ದಾರೆ. ಅದು ಅವರ ಚಾಳಿಯಾಗಿದೆ. ಇದು ಮೈಸೂರು ವಿವಿಗೂ ತಟ್ಟಿದೆ ಎಂದು ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶನ ವಿಚಾರವಾಗಿ ಆಕ್ರೋಶ ಹೊರಹಾಕಿದರು.

    ಯಾವುದೇ ವಿಶ್ವವಿದ್ಯಾಲಯವಾದರೂ ಅದು ತೆರಿಗೆದಾರರ ಹಣದಿಂದಾಗಿದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕಾದರೆ ವಿದ್ಯಾರ್ಥಿಗಳು ಕುಳಿತುಕೊಂಡು ಸರಿಯಾಗಿ ಓದಬೇಕು. ವಿದ್ಯಾರ್ಥಿಗಳು ಕೇಳಬೇಕಾಗಿರುವುದು ಓದುವುದಕ್ಕೆ ನಮಗೆ ಸಾಕಷ್ಟು ಪುಸ್ತಕಗಳು ಲೈಬ್ರರಿಯಲ್ಲಿ ಇಲ್ಲ. ಅದನ್ನು ಒದಗಿಸಿ ಎಂದು. ಅದನ್ನು ಬಿಟ್ಟು ಬೇಡದ ವಿಚಾರಕ್ಕೆ ತಲೆಹಾಕಬಾರದು. ಇದು ಒಂದು ವರ್ಗದವರ ಕೆಲಸವಾಗಿದೆ. ಇದಕ್ಕೆ ರಾಜಕಾರಣಿಗಳ ಬೆಂಬಲವಿದೆ. ಹೀಗಾಗಿ ವಿವಿಯಲ್ಲಿ ಗದ್ದಲ ಮಾಡಿಕೊಂಡಿದ್ದಾರೆ ಎಂದರು.

    ನಾನು ಕೂಡ ಉಪಾಧ್ಯಾಯನಾಗಿ ನಿವೃತ್ತನಾದವನು. ಬಹಳ ಬಡತನದಿಂದ ವಿದ್ಯಾಭ್ಯಾಸ ಮಾಡಿದವನು. ಇಂದು ನಾನು ಲೇಖಕನಾಗಿಬೇಕಾದರೆ, ಅದು ನಾನು ಅಂದು ಓದಿನಲ್ಲಿ ತೋರಿದ ಶಿಸ್ತು. ಈ ಗುಣ ಇರದೇ ಹೊದರೆ ಏನು ಮಾಡಲು ಸಾಧ್ಯವಿಲ್ಲ. ಪ್ರಪಂಚದ ಪ್ರಮುಖ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಯಾವೊಂದು ವಿಶ್ವವಿದ್ಯಾಲಯವು ಇಲ್ಲದಿರುವುದನ್ನು ನೋಡಿದರೆ ನಾಚಿಕೆಯಾಗುವುದಿಲ್ಲವಾ? ಇಷ್ಟು ದುಡ್ಡೇಕೆ ಖರ್ಚು ಮಾಡಬೇಕು? ಇದನ್ನು ವಿದ್ಯಾರ್ಥಿಗಳು ಆಲೋಚನೆ ಮಾಡಬೇಕು ಎಂದು ಭೈರಪ್ಪ ಅವರು ನಿನ್ನೆ ವಿವಿಯಲ್ಲಿ ನಡೆದ ಘಟನೆಯನ್ನು ವಿರೋಧಿಸಿ ಟೀಕಿಸಿದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts