More

    ಕೊಪ್ಪಳ ಟು ಅಯೋಧ್ಯಾ- ಇಂದು ಜನ್ಮ ಸಾರ್ಥಕವಾಯ್ತು ಎಂದ ಶಂಶುದ್ದೀನ್‌

    ಕೊಪ್ಪಳ: ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರೆ ಮೋದಿಯವರು ಭೂಮಿಪೂಜೆ ಸಲ್ಲಿಸುತ್ತಿದ್ದಂತೆಯೇ ಧರ್ಮದ ಭೇದ ಮರೆತು ಇದನ್ನು ಕಣ್ತುಂಬಿಸಿಕೊಂಡವರು ಹಲವರು. ಈ ಮಂದಿರ ನಿರ್ಮಾಣಕ್ಕೆಂದು ಇಲ್ಲಿಯವರೆಗೆ ಬೇಡಿಕೊಳ್ಳುತ್ತಿದ್ದವರು ಅದೆಷ್ಟೋ ಮಂದಿ.

    ಅಂಥವರ ಪೈಕಿ ಕೊಪ್ಪಳದ ಆಟೋ ಚಾಲಕ ಶಂಶುದ್ದೀನ್‌ ಕೂಡ ಒಬ್ಬರು. ಬಾಬರಿ ಮಸೀದಿ ಹಾಗೂ ರಾಮ ಮಂದಿರ ಇವೆರಡರ ನಡುವೆ ಹೋರಾಟದ ಕಿಚ್ಚು ಹುಟ್ಟಿ ಅದು ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗಲೇ ಈ ಯುವಕ ಕೊಪ್ಪಳದಿಂದ ಅಯೋಧ್ಯೆಗೆ ತೆರಳಿ ಇಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲಿ ಎಂದು ಬೇಡಿಕೊಂಡಿದ್ದರಂತೆ.

    ಮಂದಿರ ನಿರ್ಮಾಣವಾಗುವ ಕನಸು ಕಂಡಿದ್ದ ಇವರು,  2017ರಲ್ಲಿಯೇ ಒಂದು ಚೀಲ ಸಿಮೆಂಟ್‌ ಅನ್ನು ಹೊತ್ತು ತಮ್ಮೂರು ಕೊಪ್ಪಳದ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಿಂದ ಅಯೋಧ್ಯೆಗೆ ತೆರಳಿ ರಾಮಮಂದಿರ ನಿರ್ಮಾಣವಾದರೆ ಈ ಸಿಮೆಂಟ್‌ ಬಳಕೆಯಾಗಲಿ ಎಂದು ಬೇಡಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

    ಇದನ್ನೂ ಓದಿ: ಮೂಲ ಸಂವಿಧಾನದಲ್ಲಿದೆ ಅಯೋಧ್ಯೆಯ ರಾಮ- ಸಚಿವರಿಂದ ಚಿತ್ರ ಟ್ವೀಟ್‌

    ಇದೀಗ ರಾಮಮಂದಿರಕ್ಕೆ ಭೂಮಿ ಪೂಜೆ ಆಗುವ ಮೂಲಕ ನನ್ನ ಕನಸು ಈಡೇರಿದೆ. ಜನ್ಮ ಸಾರ್ಥಕವಾಯಿತು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 2017ರ ಏಪ್ರಿಲ್ 27ರಂದು ಕೊಪ್ಪಳದಿಂದ ರೈಲು ಮೂಲಕ ಅಯೋಧ್ಯೆಗೆ ಹೋಗಿದ್ದೆ. ಮೇ 1 ರಂದು ಅಯೋಧ್ಯೆಯಲ್ಲಿದ್ದೆ. ಅಂದೇ ಟ್ರಸ್ಟ್‌ಗೆ ಒಂದು ಚೀಲ ಸಿಮೆಂಟ್ ನೀಡಿದ್ದೆ, ಜತೆಗೆ ಶ್ರೀರಾಮ ಮಂದಿರ ಶೀಘ್ರವೇ ನಿರ್ಮಾಣವಾಗಲೆಂದು ಬೇಡಿಕೊಂಡಿದ್ದೆ ಎಂದಿದ್ದಾರೆ ಶಂಶುದ್ದೀನ್.

    ಕಳೆದ ವರ್ಷ ಅಯೋಧ್ಯೆಯ ಕುರಿತು ಸುಪ್ರೀಂಕೋರ್ಟ್‌ ತೀರ್ಪು ನೀಡುತ್ತಲೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂತಸ ಪಟ್ಟಿದ್ದರು. ”ಈ ತೀರ್ಪು ದೇಶವು ಖುಷಿ ಪಡುವ ವಿಚಾರ. ಹಿಂದೂ-ಮುಸ್ಲಿಮರು ಭಾವೈಕ್ಯದಿಂದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವೀಕರಿಸಿದ್ದಾರೆ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಬದುಕಬೇಕಿದೆ. ಕೊಪ್ಪಳ ಜಿಲ್ಲೆಯ ವತಿಯಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಹೋಗಿ ರಾಮ ಮಂದಿರ ನಿರ್ಮಾಣಕ್ಕೆ ಒಂದು ಚೀಲ ಸಿಮೆಂಟ್ ನೀಡಿ ಬಂದಿದ್ದೇನೆ. ಈ ಕೆಲಸ ಇಂದು ಸಾರ್ಥಕ ಅನಿಸುತ್ತಿದೆ’ ಎಂದು ಹೇಳಿದ್ದರು.

    ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಸುಪ್ರೀಂಕೋರ್ಟ್ ನೀಡಿದೆ. ಅಯೋಧ್ಯೆಯ ತೀರ್ಪನ್ನು ತಲೆಬಾಗಿ ಸ್ವೀಕರಿಸಿದ್ದೇವೆ ಎಂದು ಅವರು ತಿಳಿಸಿದ್ದರು.

    ಅಲ್ಲಿ ಹಿಂದೆಯೂ ಬಾಬರಿ ಮಸೀದಿ ಇತ್ತು, ಮುಂದೆಯೂ ಇರಲಿದೆ- ಯಾವ ತೀರ್ಪೂ ಲೆಕ್ಕಕ್ಕಿಲ್ಲ ಎಂದು ಟ್ವೀಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts