More

    ಬಿ.ಇ, ಬಿಟೆಕ್‌ ಪದವೀಧರರಿಗೆ ಕೊಂಕಣ ರೈಲ್ವೆಯಲ್ಲಿದೆ ತಾಂತ್ರಿಕ ಸಹಾಯಕರ ಹುದ್ದೆ: ಅರ್ಜಿ ಆಹ್ವಾನ

    ಕೊಂಕಣ್ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್​ನಲ್ಲಿ (ಕೆಆರ್​ಸಿಎಲ್) ಖಾಲಿ ಇರುವ 18 ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (ಸಿಗ್ನಲ್ ಆಂಡ್ ಟೆಲಿಕಮ್ಯುನಿಕೇಷನ್) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

    ಜಮ್ಮು ಕಾಶ್ಮೀರದಲ್ಲಿ ಪ್ರಾರಂಭಿಸುತ್ತಿರುವ ಉದಮ್ುರ್- ಶ್ರೀನಗರ- ಬಾರಾಮುಲ್ಲ- ರೈಲ್ ಲಿಂಕ್ (ಯುಎಸ್​ಬಿಆರ್​ಎಲ್) ಯೋಜನೆಯನ್ನು ಕೊಂಕಣ ರೈಲ್ವೆ ನಿರ್ವಹಿಸುತ್ತಿದೆ. ಇದಕ್ಕಾಗಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಜಮ್ಮು- ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಆರಂಭದಲ್ಲಿ 2 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು. ನಂತರ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು. ಸಾಮಾನ್ಯವರ್ಗದ ಅಭ್ಯರ್ಥಿಗೆ 9 ಸ್ಥಾನ, ಎಸ್ಸಿಗೆ 3, ಎಸ್ಟಿಗೆ 2 ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 4 ಸ್ಥಾನ ಮೀಸಲಿರಿಸಲಾಗಿದೆ.

     

    ಶೈಕ್ಷಣಿಕ ಅರ್ಹತೆ: ಎಐಸಿಟಿಇಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿ ಕಮ್ಯುನಿಕೇಷನ್/ ಕಮ್ಯುನಿಕೇಷನ್/ ಇನ್​ಸ್ಟ್ರುಮೆಂಟೇಷನ್​ನಲ್ಲಿ ಬಿಇ/ ಬಿ.ಟೆಕ್ ಪದವಿ ಪಡೆದಿದ್ದು, ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.

     
    ವಯೋಮಿತಿ: 1.12.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 25 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

     
    ವೇತನ: ಮೊದಲ ವರ್ಷ ಮಾಸಿಕ 30,000 ರೂ. ಇದ್ದು, 2ನೇ ವರ್ಷಕ್ಕೆ ಶೇ.10 ವೇತನ ಹೆಚ್ಚಳವಾಗಲಿದೆ. ಮನೆ ಬಾಡಿಗೆ ಭತ್ಯೆ, 25 ಲಕ್ಷ ರೂ.ನ ಇನ್​ಶುರೆನ್ಸ್, ಮೆಸ್ ಭತ್ಯೆ, ಮಾಸಿಕ 750 ರೂ.ನ ವೈದ್ಯಕೀಯ ಭತ್ಯೆ ನೀಡಲಾಗುವುದು.
    ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅಧಿಸೂಚನೆ ಜತೆ ನೀಡಲಾಗಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ತರಬೇಕು. ಅಲ್ಲದೇ ಶೈಕ್ಷಣಿಕ, ವಯಸ್ಸು, ಜಾತಿ ಪ್ರಮಾಣಪತ್ರ ಸೇರಿ ಎಲ್ಲ ದಾಖಲೆಗಳ ಮೂಲ ಪ್ರತಿಯನ್ನು ತರಬೇಕು. ಹಾಗೂ ಅರ್ಜಿ ಜತೆ ದಾಖಲೆಗಳ ಪ್ರತಿಯನ್ನು ಸೇರಿಸಿರಬೇಕು. ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು 2-3 ದಿನ ಅಲ್ಲೇ ಉಳಿಯಲು ವ್ಯವಸ್ಥೆ ಮಾಡಿಕೊಂಡು ಬರುವುದಕ್ಕೆ ಸೂಚಿಸಲಾಗಿದೆ.

     

    ಸಂದರ್ಶನಕ್ಕೆ ನಡೆಯುವ ದಿನಾಂಕ: ಡಿಸೆಂಬರ್ 13 ರಿಂದ 17ರ ವರೆಗೆ ಬೆಳಗ್ಗೆ 9 ರಿಂದ 3 ಗಂಟೆ ವರೆಗೆ.

    ಸಂದರ್ಶನ ನಡೆಯುವ ಸ್ಥಳ:  USBRL Project Head Office, Konkan Railway Corporation Ltd., Satyam Complex, Marble Market, Extension- Trikuta Nagar, Jammu, Jammu & Kashmir. Pin 180011

     

    ಅಧಿಸೂಚನೆಗೆ: https://bit.ly/3cG5z2o

    ಮಾಹಿತಿಗೆ: http://www.konkanrailway.com

    ಸ್ನಾತಕ ಪದವೀಧರರಿಗೆ ಬ್ಯಾಂಕ್ ಆಫ್ ಬರೋಡಾದಲ್ಲಿದೆ 376 ರಿಲೇಷನ್​ಷಿಷ್ ಮ್ಯಾನೇಜರ್ ಪೋಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts