More

    ನಿರುದ್ಯೋಗಿಗೆ ಉದ್ಯೋಗಮೇಳ ಸಹಕಾರಿ

    ಬೈಲಹೊಂಗಲ: ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಪಡೆಯಲು ಇಂತಹ ಮೇಳಗಳು ಸಹಕಾರಿಯಾಗುತ್ತವೆ ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು.

    ಪಟ್ಟಣದ ಕೆಆರ್‌ಸಿಎಸ್ ಪದವಿ ಕಾಲೇಜಿನಲ್ಲಿ ಡಾ.ವಿಶ್ವನಾಥ ಪಾಟೀಲ ಅಭಿಮಾನಿ ಬಳಗದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
    ಇಂದಿನ ದಿನಗಳಲ್ಲಿ ಪದವಿ ಪಡೆದ ಯುವಕರು ಸಾಕಷ್ಟಿದ್ದಾರೆ. ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಉದ್ಯೋಗಕ್ಕಾಗಿ ಅಲೆಯುತ್ತಿರುವ ವಿದ್ಯಾವಂತ ಯುವಕರಿಗೆ ಉದ್ಯೋಗ ಮೇಳಗಳು ಬದುಕು ರೂಪಿಸಿಕೊಳ್ಳುವಲ್ಲಿ ಸಹಾಯಕವಾಗುತ್ತವೆ. ಮೇಳದಲ್ಲಿ ಹಲವು ಪ್ರತಿಷ್ಠಿತ ಕಂಪನಿಗಳು ಪಾಲ್ಗೊಂಡಿದ್ದು, ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಕಾರ್ಯಕ್ರಮ ಆಯೋಜಕ ಸಂತೋಷ ಹರಕುಣಿ ಮಾತನಾಡಿ, ಮೇಳದಲ್ಲಿ 20 ಕಂಪನಿಗಳು ಭಾಗವಹಿಸಿದ್ದವು. 2,500 ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದು, ಇದರಲ್ಲಿ 870 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಹಾಗೂ 500 ಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಪಡೆದಿದ್ದಾರೆ ಎಂದು ತಿಳಿಸಿದರು.

    ಪ್ರಾಧ್ಯಾಪಕ ಡಾ. ಎಸ್.ಎಂ.ಲೋಕಾಪೂರ ಹಾಗೂ ಮಹಾಂತಯ್ಯ ಶಾಸಿ ಮಾತನಾಡಿದರು. ಕಾಲೇಜ್ ಉಪಸಮಿತಿ ಅಧ್ಯಕ್ಷ ವಿ.ವಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಅಮಿತ ಪಾಟೀಲ, ವಿನಯ ಪಾಟೀಲ, ಪ್ರತಾಪ ಹಡಗಿನಾಳ, ರಾಹುಲ ಮಲ್ಲಾಪುರ, ಪ್ರಕಾಶ ಹೋಟಿ, ಪ್ರತಾಪ ಹಡಗಿನಾಳ, ಎಂ.ಬಿ.ತಲ್ಲೂರ, ಬಿಬಿಎ ಕಾಲೇಜು ಪ್ರಾಚಾರ್ಯ ಎಸ್.ಎ.ದೇಶಮುಖ, ಡಾ. ಎಂ.ಎಸ್.ಗಡೆನ್ನವರ, ಸೋಮನಾಥ ಸೊಪ್ಪಿಮಠ, ಶಾಂತಾ ಮಡ್ಡಿಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts