More

    ನೀಚಂಗೆ ದೊರೆತನವು, ಹೇಡಿಂಗೆ ಹಿರಿತನವೂ… ಮಂಡ್ಯದಲ್ಲಿ ಕೋಡಿಶ್ರೀ ಭಯಾನಕ ಭವಿಷ್ಯ…

    ಮಂಡ್ಯ: ದೇಶ, ವಿದೇಶ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದಂತೆ ಇದಾಗಲೇ ಹಲವಾರು ಬಾರಿ ಭವಿಷ್ಯ ನುಡಿದು ಪ್ರಸಿದ್ಧಿ ಪಡೆದಿರುವ ಕೋಡಿಮಠದ ಶ್ರೀಗಳು ಮಂಡ್ಯದಲ್ಲಿ ಇಂದು ಮತ್ತಷ್ಟು ಭಯಾನಕ ಭವಿಷ್ಯ ನುಡಿದಿದ್ದಾರೆ.

    ವರುಣದ ರೌದ್ರಾವತಾರದ ಕುರಿತು ಮಾತನಾಡಿರುವ ಅವರು, ‘ಮಳೆ ಅನಾಹುತ ಇನ್ನೂ ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ. ಸುನಾಮಿ ಸಹ ಬರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ. ಇದೇ ವೇಳೆ ನೀರು ನೀರು ಎಂದು ಈಗ ನೀರೇ ಬೇಡ ಎನ್ನುವ ಹಾಗೆ ಜನರು ಮಾತನಾಡುತ್ತಿದ್ದಾರೆ, ಆದರೆ ಇನ್ನು ಕೆಲವೇ ವರ್ಷಗಳಲ್ಲಿ ನೀರಿಗಾಗಿ ಹಾಹಾಕಾರ ಪಡುವ ದಿನಗಳೂ ಬರುತ್ತವೆ ಎಂದಿದ್ದಾರೆ.

    ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಇವರು ಮಾತನಾಡುತ್ತಿದ್ದರು. ಭೂಮಿಯಿಂದ ಹೊಸ ಹೊಸ ವಿಷಜಂತುಗಳು ಉದ್ಭವಿಸಲಿವೆ. ಜನರು ಮನೆಯಿಂದ ಹೊರಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ ಎಂದು ಕೋಡಿಶ್ರೀ ಹೇಳಿದ್ದಾರೆ.

    ‘ಕರೊನಾದ ಬಗ್ಗೆ ಈ ಹಿಂದೆ ನಾನು ಹೇಳಿದ್ದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಬಗ್ಗೆಯೂ ಹೇಳಿದ್ದೆ. ಎಲ್ಲಾ ಮಾತುಗಳು ನಿಜವಾಗಿವೆ. ಇದಕ್ಕಿಂತಲೂ ಹೆಚ್ಚಿನ ಕಷ್ಟ ಕಾಲ ಎದುರಾಗಲಿದೆ. ಕರೊನಾ ಇನ್ನೊಂದು ವರ್ಷದಲ್ಲಿ ಹೋಗುತ್ತದೆ, ಆದರೆ ಹೋಗುವ ಮೊದಲು ವಿಪರೀತ ಕಷ್ಟಗಳನ್ನು ಕೊಟ್ಟು ಹೋಗಲಿದೆ’ ಎಂದು ಅವರು ಭವಿಷ್ಯ ನುಡಿದಿದ್ದಾರೆ.

    ಇದಕ್ಕೆ ಪರಿಹಾರವನ್ನೂ ಸೂಚಿಸಿದ್ದಾರೆ ಶ್ರೀಗಳು. ಅದೇನೆಂದರೆ, ದೇವರನ್ನು ಪೂಜಿಸಬೇಕು ಎನ್ನುವುದು. ‘ಇತ್ತೀಚಿಗೆ ಭಗವಂತನ ಪೂಜೆ ಆಡಂಬರವಾಗಿದೆ. ಯೋಗ್ಯ ಸಾಧುಗಳಿದ್ದಾರೆ, ಗದ್ದುಗೆಗಳಿವೆ. ಎಲ್ಲರೂ ಸೇರಿ ಪ್ರಾರ್ಥಿಸಿದರೆ ಶೇ.10ರಷ್ಟು ಪರಿಹಾರ ಸಿಗಲಿದೆ’ ಎಂದು ಕೋಡಿಶ್ರೀ ಹೇಳಿದ್ದಾರೆ.

    ಇನ್ನು ಮುರುಘಾಮಠದ ಸ್ವಾಮೀಜಿ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆಯೂ ಶ್ರೀಗಳು ಮಾತನಾಡಿ, ಮಾರ್ಮಿಕವಾಗಿ ಉತ್ತರಿಸಿದ್ದಾರೆ. ‘ನೀಚಂಗೆ ದೊರೆತನವು, ಹೇಡಿಂಗೆ ಹಿರಿತನವೂ, ಮೂಡಂಗೆ ಗುರುತನವೂ ಸಿಕ್ಕಿರುವುದು ಈ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಆರೋಪಗಳು ಮುಂದೆ ಮತ್ತಷ್ಟು ಹೆಚ್ಚಾಗಲಿದೆ’ ಎಂದಿರುವ ಕೋಡಿಶ್ರೀ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತ್ರ ಮಾತನಾಡಲು ನಿರಾಕರಿಸಿದ್ದಾರೆ (ದಿಗ್ವಿಜಯ ನ್ಯೂಸ್​)

    ಕನ್ನಡದಲ್ಲಿ ಬರೆದ ಚೆಕ್​ ಅಮಾನ್ಯ: ಎಸ್​ಬಿಐಗೆ ಧಾರವಾಡದ ಗ್ರಾಹಕರ ಕೋರ್ಟ್​ನಿಂದ ದಂಡ

    ಎಲಿಜಬೆತ್ ಕಿರೀಟ ಅಲಂಕರಿಸಿದ್ದ ಕೊಹಿನೂರು ವಜ್ರದತ್ತ ಎಲ್ಲರ ಚಿತ್ತ! ಇದರ ಉತ್ತರಾಧಿಕಾರಿ ಇವರೇನಾ?

    ಅವಳಿ ಮಕ್ಕಳಿಗೆ ಜನ್ಮ ನೀಡಿದ ಯುವತಿ, ಆದ್ರೆ ಅಪ್ಪ ಮಾತ್ರ ಬೇರೆ ಬೇರೆ… ಇದೆಂಥ ವಿಚಿತ್ರ ಅಂತೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts