More

    15 ಕ್ವಿಂಟಾಲ್‌ ಹೂವಿನಿಂದ ಕಂಗೊಳಿಸುತ್ತಿದೆ ಕೇದಾರನಾಥ: ಆರು ತಿಂಗಳು ಉರಿಯುವ ದೀಪವೇ ಇಲ್ಲಿಯ ವಿಶೇಷತೆ

    ಕೇದಾರನಾಥ (ಉತ್ತರಾಖಂಡ): ಜಗತ್ಪ್ರಸಿದ್ಧವೂ ಆಗಿ, ಚಾರ್‌ಧಾಮ್‌ಗಳಲ್ಲಿ ಒಂದಾಗಿರುವ ಉತ್ತರಾಖಂಡದ ಕೇದಾರನಾಥ ದೇವಾಲಯದ ಬಾಗಿಲು ಇಂದು ಬೆಳಗ್ಗೆ ತೆರೆಯಲಾಗಿದೆ. ಕೇದಾರನಾಥನು ಶಿವನ ಮುಖ್ಯ ದ್ವಾದಶ ಜ್ಯೋತಿರ್ಲಿಂಗದ 11 ನೇ ಜ್ಯೋತಿರ್ಲಿಂಗ. ಇಲ್ಲಿ ಶಿವನನ್ನು ವಿಗ್ರಹ ರೂಪದಲ್ಲಿ ಪೂಜಿಸಲಾಗುತ್ತಿದ್ದು, ಭಕ್ತರು ಈ ದಿನಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ.

    ದೇವಾಲಯದ ಬಾಗಿಲುಗಳನ್ನು ಮುಚ್ಚುವಾಗ ದೀಪವನ್ನು ಹೊತ್ತಿಸಲಾಗುತ್ತದೆ ಮತ್ತು ನಂತರ 6 ತಿಂಗಳ ನಂತರ ದೇವಾಲಯದ ಬಾಗಿಲು ತೆರೆದಾಗ ದೀಪವು ಉರಿಯುತ್ತಿರುವುದು ಕಂಡುಬರುತ್ತದೆ. ಇದೇ ಈ ದೇವಾಲಯದ ವಿಶೇಷತೆ. ಈ ದೇವಾಲಯವು ಸಂದರ್ಶಕರಿಗೆ ಒಂದು ವರ್ಷದಲ್ಲಿ ಕೇವಲ 6 ತಿಂಗಳುಗಳವರೆಗೆ ಮಾತ್ರ ತೆರೆದಿರುತ್ತದೆ ಮತ್ತು ಉಳಿದ 6 ತಿಂಗಳುಗಳವರೆಗೆ ಮುಚ್ಚಲ್ಪಟ್ಟಿರುತ್ತದೆ. ಏಕೆಂದರೆ ಇಲ್ಲಿ ಆರು ತಿಂಗಳು ಸಾಕಷ್ಟು ಹಿಮಪಾತವಾಗುತ್ತದೆ ಮತ್ತು ಇಡೀ ದೇವಾಲಯವು ಹಿಮದಿಂದ ಆವೃತವಾಗಿರುತ್ತದೆ. ಈ ದೇವಾಲಯವನ್ನು ವೈಶಾಖಿಯ ನಂತರ ತೆರೆಯಲಾಗುತ್ತದೆ ಮತ್ತು ದೀಪಾವಳಿಯ ನಂತರ ಪಡ್ವಾ ತಿಥಿಯನ್ನು ಮುಚ್ಚಲಾಗುತ್ತದೆ. ಈ ಸಂದರ್ಭದಲ್ಲಿ ಉರಿಯುವ ದೀಪವನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ಜಗತ್ತಿನ ಮೂಲೆಮೂಲೆಗಳಿಂದ ಆಮಿಸುತ್ತಾರೆ.

    ಯಾರು ಕೇದರನಾಥ ಧಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಮರಣವನ್ನು ಹೊಂದುತ್ತಾರೋ ಅವರಿಗೆ ಮೋಕ್ಷದ ಬಾಗಿಲು ನೇರವಾಗಿ ತೆರೆದು ಶಿವಲೋಕದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆಯೂ ಇದ್ದು, ಎಷ್ಟೋ ಮಂದಿ ತಮ್ಮ ಇಳಿಸಂಜೆಯ ಹೊತ್ತಿನಲ್ಲಿ ಇದೇ ಕಾರಣಕ್ಕೆ ಇಲ್ಲಿಗೆ ಭೇಟಿ ನೀಡುವುದೂ ಇದೆ.

    ಮಂದಾಕಿನಿ ನದಿಯ ದಡದಲ್ಲಿ ನೆಲೆಗೊಂಡಿರುವ ಈ ಧಾಮದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಗಿದೆ. ಬೆಳಗ್ಗೆ 6:25ಕ್ಕೆ ಧಾರ್ಮಿಕ ವಿಧಿಗಳು ಮತ್ತು ವೈದಿಕ ಪಠಣಗಳೊಂದಿಗೆ ಯಾತ್ರಾರ್ಥಿಗಳಿಗೆ ತೆರೆಯಲಾಯಿತು. ಉತ್ತರಾಖಂಡದ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ಪತ್ನಿ ಸಮೇತ ಕೇದಾರನಾಥ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.
    ದೇವಾಲಯವನ್ನು 15 ಕ್ವಿಂಟಾಲ್ ಹೂವುಳಿಂದ ಅಲಂಕರಿಸಲಾಗಿದ್ದು, ಕೇದಾರನಾಥನನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಬೆಳಗ್ಗೆ ದೇಗುಲವನ್ನು ತೆರೆಯುವ ವೇಳೆ ಜಗತ್ತಿನ ಮೂಲೆಮೂಲೆಗಳಿಂದ 10 ಸಾವಿರಕ್ಕೂ ಅಧಿಕ ಭಕ್ತರು ಶಿವನ ದರ್ಶನಕ್ಕಾಗಿ ಕಾಯುತ್ತಿದುದು ವಿಶೇಷ.

    ಕೇದರನಾಥ್ ನ ಧಾಮ್ ಅನ್ನು ಕಟ್ಯುಹಾರಿ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಕಂದು ಮತ್ತು ದೊಡ್ಡ ಕಲ್ಲುಗಳನ್ನು ಬಳಸಲಾಗಿದೆ ಮತ್ತು ದೇವಾಲಯದ ಮೇಲ್ ಛಾವಣಿಯನ್ನು ಮರದಿಂದ ತಯಾರಿಸಲಾಗಿದೆ. ಕಲಾಶ್ ಶಿಖರದಲ್ಲಿ ಚಿನ್ನದಿಂದ ಮಾಡಲಾಗಿದೆ.

    ಪ್ರಿಯತಮೆ ಜತೆ ಮದುವೆಯಾಗುವಾಗ್ಲೇ ಎಂಟ್ರಿ ಕೊಟ್ಟಳೊಬ್ಬ ಮಹಿಳೆ! ವಧು ಜತೆ ತೀರ್ಥಹಳ್ಳಿಯ ವರ ಎಸ್ಕೇಪ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts