More

    ನಿದ್ದೆಗೆಡಿಸಿದ ನಕಲಿ ಎಸಿಬಿ ಗ್ಯಾಂಗ್‌: ‘ಮರ್ಯಾದೆ’ ಉಳಿಸಿಕೊಳ್ಳಲು ಕೇಳಿದವರಿಗೆ ದುಡ್ಡು ಕೊಡ್ತಿರೋ ಅಧಿಕಾರಿಗಳು!

    ರಾಯಚೂರು: ಭ್ರಷ್ಟ ಅಧಿಕಾರಿಗಳ ನಿದ್ದೆಕೆಡಿಸುವ ಎಸಿಬಿ ಯನ್ನೇ ಬಂಡವಾಳ ಮಾಡಿಕೊಂಡ ನಕಲಿ ಎಸಿಬಿ ಗ್ಯಾಂಗ್ ರಾಯಚೂರು ಜಿಲ್ಲೆಯ ಅಧಿಕಾರಿಗಳ ನಿದ್ದೆಗೆಡಿಸಿದೆ.

    ರಾಯಚೂರು ಸೇರಿ ಯಾದಗಿರಿ, ಬೀದರ್ ಹಾಗೂ ಇತರೆಡೆ ದಾಳಿಯ ಬೆದರಿಕೆ ಹಾಕಿ ಖತರ್ನಾಕ್ ಟೀಂ ಹಣ ವಸೂಲಿ‌ ದಂಧೆ ನಡೆಸುತ್ತಿದೆ. ನೇರವಾಗಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೇ ಟಾರ್ಗೇಟ್ ಮಾಡಲಾಗುತ್ತಿದೆ. ರಾಯಚೂರು ಎಸಿಬಿ ಡಿವೈಎಸ್ ಪಿ ವಿಜಯಕುಮಾರ್ ಹೆಸರಲ್ಲಿ ಕರೆ ಮಾಡಲಾಗುತ್ತಿದೆ.

    ನಿಮ್ಮ ಇಲಾಖೆಯ ಅಧೀನ ಕಚೇರಿಯ ಇಂತಹ ಅಧಿಕಾರಿ ವಿರುದ್ಧ ಎಸಿಬಿಗೆ ದೂರು ಬಂದಿದೆ. ಅವರನ್ನು ವಿಚಾರಣೆ ಮಾಡಬೇಕು. ನಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಹೇಳಿ ಅಂತ ಹೇಳುತ್ತಿದ್ದಾರೆ ಖದೀಮರು. ಬಳಿಕ ಟಾರ್ಗೆಟ್ ಮಾಡಿರುವವರಿಗೆ ಕರೆ ಮಾಡಿ ಬಿ ರಿಪೋರ್ಟ್ ಹಾಕಲು ಹಣದ ಬೇಡಿಕೆ ಇಡುತ್ತಿದ್ದಾರೆ. ಹಣವನ್ನು ನೀಡಿದ್ರೆ ಕೇಸ್ ಕ್ಲೋಸ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ಹೆದರುವ ಕೆಲವರು ಭಯಗೊಂಡವರು ಹಣಕೊಡುತ್ತಿದ್ದು, ಕ್ಲೀನ್‌ಹ್ಯಾಂಡ್‌ ಇದ್ದು ಅನುಮಾನ ಬಂದವರು ಪೊಲೀಸ್ ಕೇಸ್ ದಾಖಲು ಮಾಡಿದ್ದಾರೆ

    ರಾಯಚೂರು ಜಿಲ್ಲಾ ಪಂಚಾಯತ್ ಸಿಇಓ ನೂರ್ ಜಹಾರ್ ಖಾನಂಗೆ ಕರೆ ಇವರು ಕರೆ ಮಾಡಿದ್ದರು. ಜಿಪಂ ಯೋಜನಾಧಿಕಾರಿ ಹಾಗೂ ರಾಯಚೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ವಿರುದ್ಧ ದೂರು ಬಂದಿದೆ ಎಂದು ಹೇಳಿದ್ದರು. ಇದೇ ಇದೇ ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ನಾಯಕ್‌ ಅವರಿಗೂ ಕರೆ ಬಂದಿತ್ತು. ವಲಯ ಅಬಕಾರಿ ನಿರೀಕ್ಷಕ ಹನಮಂತ ಗುತ್ತೆದಾರ ವಿರುದ್ಧ ಎಸಿಬಿಗೆ ದೂರು ಬಂದಿದೆ ಎಂದು ಗ್ಯಾಂಗ್‌ನವರು ಹೇಳಿದ್ದರು. ಅವರನ್ನು ವಿಚಾರಣೆ ಮಾಡಬೇಕು, ನನ್ನ ನಂಬರ್‌ಗೆ ಕರೆ ಮಾಡಲು ಹೇಳಿ ಎಂದು ನಕಲಿ ಗ್ಯಾಂಗ್‌ ಹೇಳಿತ್ತು. ಕೊನೆಗೆ ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ಹಣದ ಬೇಡಿಕೆ ಇಡಲಾಗಿತ್ತು.

    ಹಣ ಕೊಡದಿದ್ದರೆ ಮತ್ತೊಂದು ದಾಳ:
    ಹಣ ಕೊಡದಿದ್ದಾಗ ಮತ್ತೊಂದು ದಾಳ ಬೀಸುತ್ತಿರುವ ಈ ನಕಲಿ ಎಸಿಬಿ ಗ್ಯಾಂಗ್, ’ಮನೆ, ಕಚೇರಿ ಮೇಲೆ ದಾಳಿ ಮಾಡಲು ಕೇಂದ್ರ ಕಚೇರಿಯಿಂದ ಆದೇಶ ಬಂದಿದೆ, ದಸ್ತಗಿರಿ ಮಾಡುತ್ತೇವೆ, ಇದು ಬೇಕಾ ನಿನಗೆ ಎಂದು ಧಮ್ಕಿ ಹಾಕುತ್ತಿದೆ.

    ಇಬ್ಬರು ಎಸಿಬಿ ಅಧಿಕಾರಿಗಳು ಶ್ರೀಲಂಕಾ, ಮಾನಸ ಸರೋವರ ಟ್ರಿಪ್ ಹೋಗುತ್ತಿದ್ದಾರೆ. ಹಾಗಾಗಿ ತಲಾ 75 ಸಾವಿರದಂತೆ ಒಟ್ಟು 1 ಲಕ್ಷ 50 ಸಾವಿರ ಹಣ ಹಾಕಿ ಎಂದು ಬೇಡಿಕೆ ಒಡ್ಡಲಾಗಿತ್ತು. ಕೇಂದ್ರ ಕಚೇರಿ ಸ್ಟೆನೋ ನವೀನ್ ಕುಮಾರ್ , ಉಮೇಶ್ ಕುಮಾರ್ ನಂಬರ್‌ಗೆ ಫೋನ್ ಪೇ, ಗೂಗಲ್ ಪೇ ಮಾಡಿ, ಮಾಡದಿದ್ದರೆ ಮುಂದಿನ ಪರಿಣಾಮ ಎದುರಿಸುತ್ತೀರಿ ಅಂತ ಬೆದರಿಕೆ ಹಾಕಲಾಗಿತ್ತು.

    ನಕಲಿ ಎಸಿಬಿ ಬೆದರಿಕೆ ಕರೆಗೆ ಹೆದರಿ ಕೆಲ ಅಧಿಕಾರಿಗಳು ಹಣವನ್ನ ನೀಡಿದ್ದಾರೆ ಅನ್ನೋ ಮಾಹಿತಿಯಿದೆ.

    ಕೆಪಿಎಸ್‌ಸಿಯಿಂದ ಮತ್ತೊಂದು ಹಗರಣ? ಉತ್ತರ ಪತ್ರಿಕೆ ಕೊಡದೇ ನುಣುಚಿಕೊಳ್ಳೋ ಪ್ರಯತ್ನ- ಸಿಎಂಗೆ ದೂರು

    ಪಿಎಸ್‌ಐ ಪರೀಕ್ಷೆ ಗೋಲ್‌ಮಾಲ್‌: ಹತ್ತು ಲಕ್ಷ ರೂ. ಇತ್ತ ತಳ್ಳಿ, ಅಕ್ರಮ ಮಾಡ್ಕೊಂಡು ತಣ್ಣಗಿರಿ ಎಂದಿದ್ದ ಡಿವೈಎಸ್ಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts