More

    ಹೆಸರೆತ್ತಿದರೆ ಖಾತೆ ಕಟ್, ಪತ್ರಿಕೆಯಲ್ಲಿ ಸಂಭಾವ್ಯರ‌ ಹೆಸರು ಬಂದರೆ ಅಂತಹವರ ಆಕಾಂಕ್ಷೆಗೆ ಕೊಕ್ಕೆ !

    ಬೆಂಗಳೂರು: ಪ್ರತಿಪಕ್ಷಗಳು ಪ್ರೀತಿಯಿಂದ ಯಾರದ್ದಾದರೂ ಹೆಸರೆತ್ತಿದರೆ ಖಾತೆಯೇ ಕಟ್ ಆಗುತ್ತದೆ. ಸಚಿವ ಸಂಪುಟ‌ ರಚನೆಯ ವೇಳೆ ಇಂತಹವರು ಸಂಭಾವ್ಯ ಸಚಿವರ ಹೆಸರುಗಳು ಪತ್ರಿಕೆಗಳಲ್ಲಿ ಪ್ರಕಟವಾದರೆ ಅಂತಹವರ ಸಚಿವ ಸ್ಥಾನದ ಆಕಾಂಕ್ಷೆಗೆ ಕೊಕ್ಕೆ ಬೀಳುವುದು ಗ್ಯಾರಂಟಿ !

    ಇಂತಹದೊಂದು ಸ್ವಾರಸ್ಯಕರ ಚರ್ಚೆಗೆ ವಿಧಾನ ಪರಿಷತ್ ಸೋಮವಾರ ಸಾಕ್ಷಿಯಾಯಿತು.

    ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್​ನ ಯು.ಬಿ.ವೆಂಕಟೇಶ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ಹೆಗಲಿಗೆ ಹಲವಾರು ಖಾತೆಗಳಿವೆ, ಜತೆಗೆ ಸಚಿವರನ್ನು ನಿಭಾಯಿಸಬೇಕಾಗಿದೆ. ಇಂತಹುದರಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಅವರ ಬಳಿಯೇ ಇದೆ. ಅರವಿಂದ ಲಿಂಬಾವಳಿ ಅಂತಹವರಿಗೆ ಕೊಟ್ಟರೆ ಕೈಹಿಡಿದು‌ ಕೆಲಸ ಮಾಡಿಸಬಹುದು. ವಿಶ್ವದ‌ ಪ್ರತಿಷ್ಠಿತ ನಗರಗಳಲ್ಲಿ ಒಂದಾದ ಬೆಂಗಳೂರು ನಿರೀಕ್ಷೆಯಂತೆ ಅಭಿವೃದ್ಧಿಯತ್ತ‌ ಸಾಗಬಹುದು ಎಂದರು.

    ಅವರ ಮಾತನ್ನು ಅರ್ಧದಲ್ಲೇ ತಡೆದ ಸಚಿವ ಅರವಿಂದ ಲಿಂಬಾವಳಿ, ನೀವೇನೋ ನನ್ನ ಮೇಲಿನ ಪ್ರೀತಿಯಿಂದ ಹಾಗೆ ಹೇಳಿರಬಹುದು. ಇದೇ ಕಾರಣಕ್ಕೆ ಸಿಎಂ ತಮ್ಮ ಮನಸ್ಸು ಬದಲಾಯಿಸಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ನನಗೆ ಕೊಡಬೇಕೆಂದಿದ್ದನ್ನು ಕೈ ಬಿಡಬಹುದು ಎಂದು ನಗೆ ಚಟಾಕಿ ಹಾರಿಸಿದರು.

    ಕಾಂಗ್ರೆಸ್ ನ ಮತ್ತೊಬ್ಬ ಸದಸ್ಯ ಎಂ.ನಾರಾಯಣಸ್ವಾಮಿ, ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ನೀವು ( ಲಿಂಬಾವಳಿ) ಪ್ರತಿನಿಧಿಸುವ ಮಹದೇವಪುರ. ಹೀಗಾಗಿಯೇ ಬೆಂಗಳೂರು ನಗರಾಭಿವೃದ್ಧಿ ಖಾತೆ ನಿಮಗೆ ಸಿಗಲೆಂದು ಬಯಸುತ್ತಿದ್ದಾರೆ ಎಂದು ನಸುನಕ್ಕರು.

    ಮಧ್ಯೆ ಪ್ರವೇಶಿಸಿದ ಬಿಜೆಪಿಯ ಲೆಹರ್ ಸಿಂಗ್ ಸಿರೊಯಿ ಅವರು, ಮೊನ್ನೆ ಉತ್ತರಾಖಂಡದಲ್ಲಿ ಹೀಗೆ ಆಯಿತು. ಹೊಸದಾಗಿ ಸಚಿವ‌ ಸಂಪುಟ ರಚನೆಗಾಗಿ ಚರ್ಚೆ ನಡೆದಿತ್ತು. ಪತ್ರಿಕೆಯಲ್ಲಿ ಸಂಭಾವ್ಯ 6 ಸಚಿವರ‌ ಹೆಸರುಗಳು ಪ್ರಕಟವಾಗಿದ್ದವು. ಸಚಿವ ಸಂಪುಟ ರಚನೆಯ ಕಾಲಕ್ಕೆ ಈ 6 ಹೆಸರುಗಳನ್ನು ಕೈಬಿಡಲಾಯಿತು. ಹಾಗಾಗಿ ಲಿಂಬಾವಳಿಗೆ‌ ನೀವು ಹೇಳಿದ ಖಾತೆ ಸಿಗಲಿ ಬಿಡಿ, ಇಲ್ಲಿ ಹೆಸರೆತ್ತುವುದು ಬೇಡವೆಂದರು.

    ಮೇಲ್ಮನೆಗೆ ನುಸುಳಿದ ದ್ರೌಪದಿ… ಕಾಂಗ್ರೆಸ್​- ಬಿಜೆಪಿ ನಡುವೆ ಮಾತಿನ ಚಕಮಕಿ…

    ವಿವಿಧ ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿದೆ 25 ಹುದ್ದೆಗಳು- 45 ವರ್ಷಗಳವರೆಗೂ ಇದೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts