More

     ನಾಲ್ಕನೇ ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಕಂಗನಾ​- ಮಣಿಕರ್ಣಿಕಾ, ಪಂಗಾ ಚಿತ್ರಗಳಿಗೆ ಪ್ರಶಸ್ತಿ ಗರಿ…

    ನವದೆಹಲಿ: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, 2019ನೇ ಸಾಲಿನ ಅತ್ಯುತ್ತಮ ನಟಿಯಾಗಿ ಕಂಗನಾ ರಣಾವತ್​ ಹೊರಹೊಮ್ಮಿದ್ದಾರೆ. ಇದಾಗಲೇ ಮೂರು ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ಕಂಗನಾ ಅವರಿಗೆ ಇದು ನಾಲ್ಕನೆಯ ರಾಷ್ಟ್ರೀಯ ಪ್ರಶಸ್ತಿಯಾಗಿದೆ.

    ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇಂದು ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. ‘ಮಣಿಕರ್ಣಿಕಾ’ ಹಾಗೂ ‘ಪಂಗಾ’ ಚಿತ್ರದ ನಟನೆಗೆ ಈ ಬಾರಿ ಪ್ರಶಸ್ತಿ ಕಂಗನಾ ಅವರ ಪಾಲಾಗಿದೆ. ಸುಶಾಂತ್​ ಸಿಂಗ್​ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ ಚಿಚೋರ್​ ಅತ್ಯುತ್ತಮ ಹಿಂದಿ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮನೋಜ್ ಬಾಜಪೇಯಿ ಮತ್ತು ಧನುಷ್ ಕ್ರಮವಾಗಿ ಭೋಂಸ್ಲೆ ಮತ್ತು ಅಸುರನ್ ಚಿತ್ರಗಳಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

    ಇನ್ನೂ ಬಿಡುಗಡೆಯಾಗಬೇಕಿರುವ ಮಲಯಾಳದ ಚಿತ್ರ ಮರಕ್ಕರ್: ಅರಬಿಕಡಲಿಂಟೆ ಸಿಂಹಮ್ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಚಿತ್ರವನ್ನು ಮೋಹನ್ ಲಾಲ್ ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ.

    ತಮಿಳಿನ ಅಸುರನ್ ಮತ್ತು ತೆಲುಗಿನ ಜರ್ಸಿ ಅತ್ಯುತ್ತಮ ಚಿತ್ರ ಪಶಸ್ತಿ ಪಡೆದುಕೊಂಡಿದೆ. ಸೂಪರ್ ಡಿಲಕ್ಸ್‌ಗಾಗಿ ವಿಜಯ್ ಸೇತುಪತಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.

    ಬಾಲ್ಡಿಯ ವಿಗ್​ ತೆಗೆಸಿದ್ರು… ಅಂಡರ್​ವೇರನ್ನೂ ಬಿಚ್ಚಿಸಿದರು… ಗುದನಾಳವನ್ನೂ ಪರೀಕ್ಷಿಸಿದರು…

    ಕರೊನಾ ಎರಡನೆಯ ಅಲೆಗೆ ಕಾಲೇಜು ಬಂದ್​ ಆಗಲಿದೆಯೆ? ಇಲ್ಲಿದೆ ನೋಡಿ ಡಿಸಿಎಂ ಸ್ಪಷ್ಟ ಉತ್ತರ…

    ಆಟವಾಡುತ್ತ ಧಾನ್ಯದ ಡಬ್ಬದೊಳಗೆ ಹೊಕ್ಕ ಐದು ಕಂದಮ್ಮಗಳು ಹೊರಬಂದರು ಶವವಾಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts