More

    ಅಂತರರಾಷ್ಟ್ರೀಯ ಜೂಡೋ ಫೆಡರೇಶನ್‌ನಿಂದ ಪುತಿನ್ ಅಮಾನತು! ‘ಬ್ಲ್ಯಾಕ್‌ ಬೆಲ್ಟ್‌’ ಅಧ್ಯಕ್ಷನಿಗೆ ಭಾರಿ ಹಿನ್ನಡೆ

    ಕೀವ್‌: ಯೂಕ್ರೇನ್ ಮೇಲೆ ದಾಳಿಯ ಹಿನ್ನೆಲೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರನ್ನು ಅಂತರರಾಷ್ಟ್ರೀಯ ಜೂಡೋ ಫೆಡರೇಶನ್ (ಐಜೆಎಫ್) ಗೌರವ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿದೆ. ಈ ಕುರಿತು ಕ್ರೀಡಾ ಆಡಳಿತ ಮಂಡಳಿ ಪ್ರಕಟಿಸಿದೆ.

    ಯೂಕ್ರೇನ್ ಮೇಲಿನ ಆಕ್ರಮಣ ವಿರೋಧಿಸಿದ ಕ್ರೀಡಾ ಆಡಳಿತ ಮಂಡಳಿ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ. ಜೂಡೋ ಬ್ಲ್ಯಾಕ್ ಬೆಲ್ಟ್ ಆಗಿರುವ 69 ವರ್ಷದ ಪುತಿನ್ ಶಿಸ್ತಿನ ತೀಕ್ಷ್ಣ ಅಭ್ಯಾಸಿಯಾಗಿದ್ದು, “ಜೂಡೋ: ಹಿಸ್ಟರಿ, ಥಿಯರಿ, ಪ್ರಾಕ್ಟೀಸ್” ಎಂಬ ಪುಸ್ತಕದ ಸಹ-ಲೇಖಕರೂ ಆಗಿದ್ದಾರೆ.

    ಜಾಗತಿಕ ಅಶಾಂತಿಗೆ ಕಾರಣವಾಗುತ್ತಿರುವ ರಷ್ಯಾ – ಉಕ್ರೇನ್ ಯುದ್ಧದ ಮಧ್ಯೆ ರಷ್ಯಾ ಜಾಗತಿಕ ಮಟ್ಟದಲ್ಲಿ ಇದೀಗ ದೊಡ್ಡ ಪ್ರಮಾಣದ ಪ್ರತಿರೋಧವನ್ನು ಎದುರಿಸುತ್ತಿದೆ. ಆರ್ಥಿಕ ನಿರ್ಬಂಧ ವಿಧಿಸಲು ಬ್ರಿಟನ್ ಸೇರಿ ಹಲವು ರಾಷ್ಟ್ರಗಳು ಮುಂದಾಗಿವೆ. ಇದರ ನಡುವೆಯೇ ಇದೀಗ ಮಹತ್ವದ ಸ್ಥಾನವೊಂದನ್ನು ಪುತಿನ್‌ ಕಳೆದುಕೊಂಡಿದ್ದಾರೆ.

    VIDEO: ‘ಭಾರತದ ಧ್ವಜ ಪ್ರಾಣ ಕಾಪಾಡಿತು, ಚೆಕ್‌ ಮಾಡದೇ ಬಿಟ್ಟುಬಿಟ್ಟರು- ಭಾರತೀಯ ಎನ್ನಲು ಹೆಮ್ಮೆ ಆಗ್ತಿದೆ’

    ಯುದ್ಧ ನಿಲ್ಲಿಸಿ ಸಂಧಾನ ಮಾಡಿಕೊಳ್ಳಲು ರಷ್ಯಾ ಕರೆದರೂ ಯೂಕ್ರೇನ್‌ ನಿರಾಕರಣೆ- ಕಾರಣವಿಷ್ಟೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts