More

    ಸೀರೆಯುಟ್ಟ ಪತ್ರಕರ್ತೆಯಿಂದ ರೆಸ್ಟೋರೆಂಟ್‌ ಕ್ಲೋಸ್‌: ಎಡವಟ್ಟು ಮಾಡಿದ ಓನರ್‌ಗೆ ಗ್ರಹಚಾರ!

    ನವದೆಹಲಿ: ದೆಹಲಿಯ ಅಕ್ವಿಲಾ ಎಂಬ ಐಷಾರಾಮಿ ರೆಸ್ಟೋರೆಂಟ್‌ ಬಗ್ಗೆ ಕೆಲ ದಿನಗಳಿಂದ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಅದೇನೆಂದರೆ ಸೀರೆಯುಟ್ಟ ಪತ್ರಕರ್ತೆಯೊಬ್ಬಳು ಈ ರೆಸ್ಟೋರೆಂಟ್‌ಗೆ ಹೋಗಿದ್ದರು. ಆದರೆ ಸೀರೆಯುಟ್ಟವರಿಗೆ ಇಲ್ಲಿ ಪ್ರವೇಶ ಕೊಡುವುದಿಲ್ಲ. ಇದು ನಮ್ಮ ಸಂಪ್ರದಾಯವಲ್ಲ ಎನ್ನುವ ಮೂಲಕ ರೆಸ್ಟೋರೆಂಟ್‌ ಸಿಬ್ಬಂದಿ ಅವಹೇಳನ ಮಾಡಿ ಕಳುಹಿಸಿದ್ದರು.

    ಇದರಿಂದ ಸಿಟ್ಟಿಗೆದ್ದಿದ್ದ ಪತ್ರಕರ್ತೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸೀರೆಯುಡುವುದು ಭಾರತೀಯ ಸಂಪ್ರದಾಯವಲ್ಲದ ಮೇಲೆ ನಮ್ಮ ಸಂಪ್ರದಾಯ ಇನ್ನಾವುದು? ಮಿನಿ, ಮಿಡಿ, ಪ್ಯಾಂಟ್‌ ಹಾಕಿ ಮೆರೆಯುವುದೇ ಎಂದು ಪ್ರಶ್ನಿಸಿದ್ದರು.

    ಇವರ ಈ ವಿಡಿಯೋ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ರೆಸ್ಟೋರೆಂಟ್‌ ವಿರುದ್ಧ ದೊಡ್ಡ ಅಭಿಯಾನವೇ ಶುರುವಾಗಿತ್ತು. ಇದರ ಬೆನ್ನಲ್ಲೇ ಇದೀಗ ಅಕ್ವಿಲಾ ರೆಸ್ಟೋರೆಂಟ್‌ ಅನ್ನು ಅಧಿಕಾರಿಗಳು ಬಂದ್‌ ಮಾಡಿಸಿದ್ದಾರೆ. ಅಲ್ಲಿಯ ಸಿಬ್ಬಂದಿ ಬೀದಿಗೆ ಬಂದಿದ್ದಾರೆ!

    ಅಷ್ಟಕ್ಕೂ ಸೀರೆಯುಟ್ಟವರಿಗೆ ಪ್ರವೇಶವಿಲ್ಲ ಎನ್ನುವ ಕಾರಣಕ್ಕೆ ರೆಸ್ಟೋರೆಂಟ್‌ ಬಂದ್‌ ಮಾಡಿಸಿಲ್ಲ. ಬದಲಿಗೆ ಈ ಸುದ್ದಿ ಭಾರಿ ವೈರಲ್‌ ಆಗುತ್ತಿದ್ದಂತೆಯೇ ರೆಸ್ಟೋರೆಂಟ್‌ ಬಗ್ಗೆ ಮಾಹಿತಿ ಕಲೆ ಹಾಕಿದಾಗ ದೆಹಲಿಯ ಅಧಿಕಾರಿಗಳಿಗೆ ತಿಳಿದದ್ದು ಏನೆಂದರೆ ಈ ರೆಸ್ಟೋರೆಂಟ್‌ ಪರವಾನಗಿ ಇಲ್ಲದೆಯೇ ನಡೆಸುತ್ತಿದೆ ಎನ್ನುವುದು! ಆರೋಗ್ಯ ವ್ಯಾಪಾರ ಲೈಸೆನ್ಸ್ ಇಲ್ಲದೆ ರೆಸ್ಟೋರೆಂಟ್ ನಡೆಸುತ್ತಿರುವುದು ಇಷ್ಟು ವರ್ಷಗಳ ಬಳಿಕ ಅಧಿಕಾರಿಗಳಿಗೆ ತಿಳಿದಿದೆ.

    ಈ ಹಿನ್ನೆಲೆಯಲ್ಲಿ ಅದನ್ನು ಬಂದ್‌ ಮಾಡಲಾಗಿದೆ. ರೆಸ್ಟೋರೆಂಟ್ ಮುಚ್ಚಿಸಿದ್ದಕ್ಕೂ, ಸೀರೆ ಘಟನೆಗೂ ಯಾವುದೇ ಸಂಬಂಧವಿಲ್ಲ. ಆರೋಗ್ಯ ವ್ಯಾಪಾರ ಪರವಾನಗಿ ಇಲ್ಲದಿದ್ದಕ್ಕೆ ಈ ರೆಸ್ಟೋರೆಂಟ್ ಅನ್ನು ಮುಚ್ಚಿಸಿದ್ದೇವೆ ಎಂಬ ಸ್ಪಷ್ಟನೆಯನ್ನೂ ಆರೋಗ್ಯ ಅಧಿಕಾರಿಗಳು ನೀಡಿದ್ದಾರೆ.

    ಸೆಪ್ಟೆಂಬರ್ 21ರಂದು ಆರೋಗ್ಯಾಧಿಕಾರಿಗಳ, ಹಾಗೂ ಮುನ್ಸಿಪಾಲಿಟಿ ಅಧಿಕಾರಿಗಳು ಈ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ದರು. ಇದೇ ವೇಳೆ ಆರೋಗ್ಯ ಪರವನಾಗಿ ಇಲ್ಲದಿರುವುದು ಬೆಳಕಿಗೆ ಬಂದಿದೆ. ಅನಾರೋಗ್ಯಕರ ವಾತಾವರಣದಲ್ಲಿ ಇದನ್ನು ನಡೆಸಲಾಗುತ್ತಿದೆ. ಮಾತ್ರವಲ್ಲದೇ ಸಾರ್ವಜನಿಕರ ಭೂಮಿಯನ್ನು ಅತಿಕ್ರಮಣ ಮಾಡಿ ರೆಸ್ಟೋರೆಂಟ್ ಕಟ್ಟಿಸಲಾಗಿದೆ ಎನ್ನುವುದು ಅಧಿಕಾರಿಗಳಿಗೆ ಈಗ ತಿಳಿದಿದೆ. ಒಟ್ಟಿನಲ್ಲಿ ಸೀರೆಯುಟ್ಟ ಪತ್ರಕರ್ತೆಯನ್ನು ಹೊರಕ್ಕೆ ಹಾಕಿದ ರೆಸ್ಟೋರೆಂಟ್‌ಗೆ ಗ್ರಹಚಾರ ಒಕ್ಕರಿಸಿತು.

    ಏನಿದು ಗಲಾಟೆ?: 

    VIDEO: ಸೀರೆ ಉಟ್ಟಿದ್ದೀರಿ, ನಿಮ್ಮಂಥವರಿಗೆ ಪ್ರವೇಶವಿಲ್ಲ- ದೆಹಲಿ ಹೋಟೆಲ್‌ ಸಿಬ್ಬಂದಿ ಧಮ್ಕಿ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts