More

    ಸರ್ಕಾರಿ ನೌಕರಿ ಹುಡುಕುತ್ತಿರುವಿರಾ? ವಿವಿಧ ಪದವೀಧರರಿಗೆ ಆಹಾರ ಪ್ರಾಧಿಕಾರದಲ್ಲಿದೆ 254 ಹುದ್ದೆಗಳು

    ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ 254 ಗ್ರೂಪ್ ಎ, ತಾಂತ್ರಿಕ ಅಧಿಕಾರಿ, ಸಹಾಯಕ, ಮ್ಯಾನೇಜರ್ ಇತ್ಯಾದಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

    ಹುದ್ದೆ ವಿವರ:
    ಸಾಮಾನ್ಯ 233 ಹುದ್ದೆಗಳು
    ಗ್ರೂಪ್‌ ಎ 21 ಹುದ್ದೆಗಳು
    ಒಟ್ಟು 254 ಹುದ್ದೆಗಳು

    ಶೈಕ್ಷಣಿಕ ಅರ್ಹತೆ:
    ಪದವಿ; ಕಾನೂನಿನಲ್ಲಿ ಪದವಿ; ರಸಾಯನಶಾಸ್ತ್ರ ಅಥವಾ ಜೀವರಸಾಯನಶಾಸ್ತ್ರ ಅಥವಾ ಆಹಾರ ತಂತ್ರಜ್ಞಾನ ಅಥವಾ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ತತ್ಸಮಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಅದಕ್ಕೆ ಸಮನಾದ ಪದವಿ

    ಪತ್ರಿಕೋದ್ಯಮ ಅಥವಾ ಸಮೂಹ ಸಂವಹನ ಅಥವಾ ಸಾರ್ವಜನಿಕ ಸಂಬಂಧದಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಅಥವಾ ಮಾರ್ಕೆಟಿಂಗ್‌ನಲ್ಲಿ ಎಂಬಿಎ;

    ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಬಿಇ/ಬಿಟೆಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವುದರ ಜೊತೆಗೆ ಎಫ್‌ಎಸ್‌ಎಸ್‌ಎಐ ಅಧಿಸೂಚನೆ 2021 ರಲ್ಲಿ ನಿರ್ದಿಷ್ಟಪಡಿಸಿದಂತೆ ಕೆಲಸದ ಅನುಭವ ಹೊಂದಿರಬೇಕು

    ಆಯ್ಕೆ ಪ್ರಕ್ರಿಯೆ
    ಕಂಪ್ಯೂಟರ್ ಆಧಾರಿತ ಪರೀಕ್ಷೆ (ಹಂತ I/ಹಂತ II)/ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಶುಲ್ಕ: ನಿಗದಿತ ಮೊತ್ತ 1,500/-ರೂ (ಜನ್/ಒಬಿಸಿ)
    ರೂ. 500/- (SC/ST/ಮಹಿಳೆಯರು/Ex -SM/PwBD/EWS) 
    ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬಹುದು.

    ಕೊನೆಯ ದಿನ: ಆನ್‌ಲೈನ್ ಅರ್ಜಿಯು ಅಕ್ಟೋಬರ್‌ 8ರಿಂದ ಶುರುವಾಗಲಿದ್ದು, ನವೆಂಬರ್‌ 7ರ ವರೆಗೆ ಇರಲಿದೆ.


    ಹುದ್ದೆಗಳ ಸಂಪೂರ್ಣ ವಿವರಗಳಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್ಕಿಸಿ:


    ಗ್ರೂಪ್ ಎ ಹುದ್ದೆಗಳ ನೇಮಕಾತಿಗೆ ಈ ಲಿಂಕ್ ಕ್ಲಿಕ್ಕಿಸಿ: https://bit.ly/3msG0Gu

    ಜನರಲ್ ಹುದ್ದೆಗಳ ನೇಮಕಾತಿಗೆ ಈ ಲಿಂಕ್ ಕ್ಲಿಕ್ಕಿಸಿ: https://bit.ly/3ozzT5Z

    ಎಫ್‌ಎಸ್‌ಎಸ್‌ಎಐ ಹುದ್ದೆಗಳ ನೇಮಕಾತಿಗೆ ಈ ಲಿಂಕ್ ಕ್ಲಿಕ್ಕಿಸಿ: https://bit.ly/3AamWlm

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts