More

    ಎಸ್‌ಎಸ್‌ಎಲ್‌ಸಿ, ಐಟಿಐ ಉತ್ತೀರ್ಣರಿಗೆ ಭರ್ಜರಿ ಅವಕಾಶ: ರೈಲ್ವೆಯಲ್ಲಿ 4 ಸಾವಿರ ಹುದ್ದೆಗಳಿಗೆ ಆಹ್ವಾನ

    ನವದೆಹಲಿ: ದಕ್ಷಿಣ ಮಧ್ಯ ರೈಲ್ವೆ ಸುಮಾರು 4000 ಅಪ್ರೆಂಟಿಸ್​​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

    ಹುದ್ದೆಗಳ ವಿವರ ಹೀಗಿವೆ:
    ಫಿಟ್ಟರ್​​ – 1460 ಹುದ್ದೆ

    ಎಸಿ ಮೆಕ್ಯಾನಿಕ್​ – 250 ಹುದ್ದೆ

    ಬಡಗಿ – 18 ಹುದ್ದೆ

    ಡಿಸೇಲ್​ ಮೆಕ್ಯಾನಿಕ್​ – 531 ಹುದ್ದೆ​

    ಎಲೆಕ್ಟ್ರಿಷಿಯನ್​ – 1019 ಹುದ್ದೆ

    ಎಲೆಕ್ಟ್ರೋನಿಕ್​ ಮೆಕ್ಯಾನಿಕ್​ – 92 ಹುದ್ದೆ

    ಮಷಿನಿಸ್ಟ್​ – 71 ಹುದ್ದೆ

    ಎಂಎಂಟಿಎಂ – 5 ಹುದ್ದೆ

    ಪೇಂಟರ್​ – 80 ಹುದ್ದೆ

    ವೆಲ್ಡರ್​ – 533 ಹುದ್ದೆ

    ಶೈಕ್ಷಣಿಕ ಅರ್ಹತೆ:

    ಅಭ್ಯರ್ಥಿಗಳು 10ನೇ ತರಗತಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ (10+2 ಪರೀಕ್ಷಾ ವ್ಯವಸ್ಥೆಯ ಅಡಿಯಲ್ಲಿ) ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಲ್ಲದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

    ವಯಸ್ಸಿನ ಮಿತಿ
    2021ರ ಅಕ್ಟೋಬರ್​ 4ನೇ ತಾರೀಖಿಗೆ ಅನ್ವಯವಾಗುವಂತೆ ಅಭ್ಯರ್ಥಿಗೆ ಕನಿಷ್ಠ 15 ಹಾಗೂ ಗರಿಷ್ಠ 25 ವರ್ಷ ವಯಸ್ಸಾಗಿರಬೇಕು. ಎಸ್‌ಸಿಎಸ್‌ಟಿಯವರಿಗೆ ಐದು ವರ್ಷ ಹಾಗೂ ಓಬಿಸಿಗೆ 3 ವರ್ಷಗಳ ಸಡಿಲಿಕೆ ಇವೆ.

    ಕೊನೆಯ ದಿನಾಂಕ : ನವೆಂಬರ್​ 3

    ಈ ಸಂಬಂಧ ಅಧಿಸೂಚನೆಯನ್ನು http://scr.indianrailways.gov.in ನಲ್ಲಿ ಪ್ರಕಟಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಹೆಚ್ಚಿನ ಮಾಹಿತಿ ಹಾಗೂ ಸಂಪೂರ್ಣ ವಿವರ: http://20.198.104.232/Act_App_Notification-04102021.pdf

    ಐಟಿಐ ವಿದ್ಯಾರ್ಥಿಗಳಿಗೆ ಕೈಗಾ ಅಣುಶಕ್ತಿ ನಿಗಮದಲ್ಲಿ ಸ್ಟೈಪೆಂಡ್‌ ಜತೆ ತರಬೇತಿ- 75 ಮಂದಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts