More

    ವಿವಿಧ ಪದವೀಧರರಿಗೆ ಹೋಮಿಯೋಪಥಿ ಸಂಸ್ಥೆಯಿಂದ ಅರ್ಜಿ ಆಹ್ವಾನ: 1.12 ಲಕ್ಷ ರೂ.ವರೆಗೆ ಸಂಬಳ

     
    ಆಯುಷ್ ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆ ರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆಯಲ್ಲಿ ನರ್ಸ್ ಹಾಗೂ ಇತರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಭಾರತೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು 2 ವರ್ಷ ಪ್ರೊಬೆಷನರಿ ಅವಧಿಗೆ ಒಳಪಡಿಸಲಾಗುವುದು.

     ಒಟ್ಟು ಹುದ್ದೆಗಳು – 12

    ಹುದ್ದೆ ವಿವರ

    * ನರ್ಸ್ (ಗ್ರೇಡ್2) (ಸ್ಟಾಫ್ ನರ್ಸ್) – 6

    * ನರ್ಸ್ (ಗ್ರೇಡ್ 1) (ನರ್ಸಿಂಗ್ ಸಿಸ್ಟರ್) – 1

    * ಜೂನಿಯರ್ ಅಕೌಂಟಂಟ್ – 2

    * ರಿಸೆಪ್ಷನಿಸ್ಟ್ ಕಮ್ ಟೆಲಿಫೋನ್ ಆಪರೇಟರ್ – 2

    * ರೇಡಿಯೋಗ್ರಾಫರ್ – 1

    ಶೈಕ್ಷಣಿಕ ಅರ್ಹತೆ: ರೇಡಿಯೋಗ್ರಫಿಯಲ್ಲಿ ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸ್ ಜತೆಗೆ ಸೈನ್ಸ್​ನಲ್ಲಿ ಪದವಿ, ನರ್ಸಿಂಗ್​ನಲ್ಲಿ ಬಿಎಸ್ಸಿ ಮಾಡಿದ್ದು, ನರ್ಸಿಂಗ್ ಕೌನ್ಸಿಲ್​ನಲ್ಲಿ ನೋಂದಾಯಿತರಾಗಿರಬೇಕು. ಕಾಮರ್ಸ್ ಪದವಿ ಜತೆ ಹಿಂದಿ, ಇಂಗ್ಲಿಷ್ ಟೈಪಿಂಗ್ ತಿಳಿದಿರಬೇಕು. ರಿಸೆಪ್ಷನಿಸ್ಟ್ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು. ಎಲ್ಲ ಹುದ್ದೆಗೂ ವೃತ್ತಿ ಅನುಭವ ಕೇಳಲಾಗಿದೆ.

    ವಯೋಮಿತಿ: ನರ್ಸ್ ಗ್ರೇಡ್ 1ಗೆ ಗರಿಷ್ಠ 35 ವರ್ಷ, ನರ್ಸ್ ಗ್ರೇಡ್ 2ಗೆ ಗರಿಷ್ಠ 30 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮಿಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ವೇತನ: 7ನೇ ವೇತನ ಆಯೋಗದ ಅನ್ವಯ ರೇಡಿಯೋಗ್ರಾಫರ್ ಮತ್ತು ನರ್ಸ್ ಗ್ರೇಡ್ 1ಗೆ ಮಾಸಿಕ 35,400-1,12,400 ರೂ., ನರ್ಸ್ ಗ್ರೇಡ್2ಗೆ ಮಾಸಿಕ 29,200- 92,300 ರೂ., ಉಳಿದ ಹುದ್ದೆಗಳಿಗೆ 25,500-81,100 ರೂ. ವೇತನ ಇದೆ.

    ಸೂಚನೆ: ಅಭ್ಯರ್ಥಿಗಳು ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದ್ದು, ಬೇರೆ ಯಾವುದೇ ಮೂಲದಿಂದ ಬಂದ ಅರ್ಜಿಯನ್ನು ತಿರಸ್ಕರಿಸಲಾಗುವುದು. ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಎಂದು ಸ್ಪಷ್ಟವಾಗಿ ನಮೂದಿಸಲು ಸೂಚಿಸಲಾಗಿದೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 1,000 ರೂ. ಅರ್ಜಿಶುಲ್ಕ ಸಲ್ಲಿಸಬೇಕಿದೆ.

     

    ಅರ್ಜಿ ಸಲ್ಲಿಸಲು ಕೊನೇ ದಿನ: 24.12.2021

    ಅರ್ಜಿ ಸಲ್ಲಿಕೆ ವಿಳಾಸ: The Director, National Institute of Homoeopathy, Block-GE, Sector-3, Salt lake, Kolkata – 700 106

    ಅಧಿಸೂಚನೆಗೆ: https://bit.ly/3lrQ8Qd

    ಮಾಹಿತಿಗೆ: www.nih.nic.in

    ಭಾರತೀಯ ವಾಯುಪಡೆಯಲ್ಲಿದೆ 317 ಕಮಿಷನ್ಡ್ ಆಫೀಸರ್ ಹುದ್ದೆ: 1.70 ಲಕ್ಷ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts