More

    ಅನಾಥ ಮನೆ, ಘೋರ ನಿಃಶ್ಶಬ್ದ… ಪತ್ನಿ-ಮಕ್ಕಳ ನೆನೆದು ಕಣ್ಣೀರಾದ ಜೋ ಬೈಡೆನ್​

    ವಾಷಿಂಗ್ಟನ್: ಅದು 1972. ಕ್ರಿಸ್​ಮಸ್​ ದಿನ. ನಾನು, ನನ್ನ ಪತ್ನಿ ಮತ್ತು ಮೂವರು ಮಕ್ಕಳು ಕಾರಿನಲ್ಲಿ ಹೋಗುತ್ತಿದ್ದೆವು. ಕಾರು ಭೀಕರ ಅಪಘಾತಕ್ಕೀಡಾಯಿತು. ನಾನು ನನ್ನ ಪತ್ನಿ ಮತ್ತು ಪುತ್ರಿಯನ್ನು ಅದರಲ್ಲಿ ಕಳೆದುಕೊಂಡೆ. ನನ್ನ ಮಗ ಬ್ಯೂ 2015ರಲ್ಲಿ ಮೆದುಳು ಕ್ಯಾನ್ಸರ್​ನಿಂದ ಮೃತಪಟ್ಟ. ನನ್ನವರನ್ನು ಕಳೆದುಕೊಂಡ ದುಃಖ ನನಗೂ ಗೊತ್ತಿದೆ ಎಂದು ಭಾವುಕರಾದ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್​.

    ಅನಾಥ ಮನೆ, ಖಾಲಿ ಖುರ್ಚಿ, ಮನೆಯಲ್ಲಿನ ಘೋರ ನಿಃಶ್ಶಬ್ದ ಎಲ್ಲವನ್ನೂ ನಾನು ಬಲ್ಲೆ. ಅಂಥ ನೋವು ಯಾರಿಗೂ ಬರಬಾರದು ಎಂದು ಅವರು ಹೇಳಿದರು.

    ಅಮೆರಿಕದಲ್ಲಿ ಕರೊನಾ ವೈರಸ್​ ಇನ್ನೂ ಭೀಕರ ಸ್ವರೂಪದ ತಾಳುತ್ತಲೇ ಹೋಗಿದೆ. ಇದಾಗಲೇ 2.62 ಲಕ್ಷಕ್ಕಿಂತ ಹೆಚ್ಚು ಮಂದಿ ವೈರಸ್​ನಿಂದ ಮೃತಪಟ್ಟಿದ್ದಾರೆ. ಇದೀಗ ಮತ್ತೆ ಈ ವೈರಸ್​ ರೌದ್ರಾವತಾರ ತೋರುತ್ತಿದೆ. ಕರೊನಾ ವೈರಸ್​ನಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬೈಡೆನ್​, ಸಾವಿನ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.

    ಇದನ್ನೂ ಓದಿ: ಅಮೆರಿಕದ 231 ವರ್ಷಗಳಲ್ಲೇ ಹೊಸ ದಾಖಲೆ ಬರೆದ ಜಿಲ್ ಬೈಡೆನ್​

    ದೇಶದ ಹೋರಾಟವು ನನಗೆ ತಿಳಿದಿದೆ. ಆದರೆ, ನಾವು ನೆನಪಿಟ್ಟುಕೊಳ್ಳಬೇಕು, ನಾವು ವೈರಸ್‌ನೊಂದಿಗೆ ಯುದ್ಧ ಮಾಡುತ್ತಿದ್ದೇವೆ, ಪರಸ್ಪರರ ಜತೆ ಅಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕು, ಹೋರಾಟದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಬೈಡೆನ್ ಹೇಳಿದ್ದಾರೆ.

    ಸಾಂಕ್ರಾಮಿಕ ರೋಗದ ಕಾರಣದಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ಕಂಬನಿ ಮಿಡಿದಿರುವ ಬೈಡೆನ್, ಈ ಕಠಿಣ ಪರಿಸ್ಥಿತಿ ಅಂತ್ಯವಾಗಿ ಬೆಳಕಿನ ಹಾಗೂ ಏಕತೆಯ ವರ್ಷಕ್ಕೆ ಅನುವು ಮಾಡಿಕೊಡಲಿದೆ ಎಂಬ ವಿಶ್ವಾಸವಿದೆ ಎಂದು ನುಡಿದರು.

    ಅಂದಹಾಗೆ ಜೋ ಬೈಡೆನ್​ ಅವರು ನಂತರ ಜಿಲ್​ ಅವರನ್ನು ವಿವಾಹವಾಗಿದ್ದು, ಅವರು ಎರಡನೆಯ ಪತ್ನಿಯಾಗಿದ್ದಾರೆ.

    ಹೊಟ್ಟೆನೋವಿನಿಂದ ಕುಸಿದೆ, ಮಗು ಕಳೆದುಕೊಳ್ಳುತ್ತಿರುವ ಅರಿವಾಯ್ತು- ರಾಜಕುಮಾರಿ ಬಿಚ್ಚಿಟ್ಟ ನೋವಿನ ಘಟನೆ

    ಬಿಜೆಪಿಗೆ ಭರ್ಜರಿ ಜಯ: ಸುಪ್ರೀಂಕೋರ್ಟ್​ ಮೆಟ್ಟಿಲೇರಿತು ಇವಿಎಂ- ವಕೀಲರಿಂದ ಅರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts