More

    ರಾಜ್ಯಕ್ಕೆ ಬರಬೇಕಿದ್ದ ಆಕ್ಸಿಜನ್ ಮಹಾರಾಷ್ಟ್ರಕ್ಕೆ ಹೋಗಿದೆ- ಸುಮಲತಾಗೆ ಜೆಡಿಎಸ್‌ ಶಾಸಕ ತರಾಟೆ

    ಮಂಡ್ಯ: ರಾಜ್ಯಕ್ಕೆ ಬರಬೇಕಿದ್ದ ಆಕ್ಸಿಜನ್ ಮಹಾರಾಷ್ಟ್ರಕ್ಕೆ ಹೋಗಿದೆ. ಈ ಬಗ್ಗೆ ನೀವ್ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ಸಂಸದೆ ಸುಮಲತಾ ಅವರನ್ನು ಶ್ರೀರಂಗಪಟ್ಟಣದ ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಂಡ್ಯದಲ್ಲಿ ನಡೆದ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯಲ್ಲಿ ಶಾಸಕರು ಈ ರೀತಿ ಪ್ರಶ್ನೆ ಎತ್ತುವ ಮೂಲಕ ಸಂಸದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ರಾಜ್ಯದಲ್ಲಿ ಜನರ ಸಾವಿನ ಸರಣಿ ಆಗುತ್ತಿದೆ. ಈ ಸರ್ಕಾರ ಆಕ್ಸಿಜನ್ ಪೂರೈಸಲು ಮುಂದಾಗುತ್ತಿಲ್ಲ. ಸರ್ಕಾರ ಜನರ ಶವ ಸುಡೋಕೆ ಸೌದೆ ಹುಡುಕುತ್ತಿದೆ. ಸರಿಯಾಗಿ ಸೌದೆ ಕೂಡ ಸಿಗದೆ ಅರ್ಧಂಬರ್ಧ ಶವ ಸುಡಲಾಗುತ್ತಿದೆ. ಆದರೆ ಆಕ್ಸಿಜನ್ ಪೂರೈಸುವಲ್ಲಿ ಕೇಂದ್ರದಿಂದ ತಾರತಮ್ಯ ಮಾಡುತ್ತಿದ್ದು, ರಾಜ್ಯದ ಬಿಜೆಪಿ ಸಂಸದರು, ಪಕ್ಷೇತರ ಸಂಸದರಾದ ನೀವ್ಯಾರು ಪ್ರಶ್ನೆ ಮಾಡ್ತಿಲ್ಲ ಎಂದು ಅವರು ಗಂಭೀರವಾದ ಆರೋಪ ಮಾಡಿದರು.

    ನೀವು 15 ಕೆಎಲ್‌ ಆಕ್ಸಿಜನ್ ಸಿಲಿಂಡರ್ ಕೊಡಿಸಿದ್ದೀರ. ಆ ನಿಮ್ಮ ಕಾರ್ಯಕ್ಕೆ ನಮ್ಮ ಪ್ರಶಂಸೆ ಇದೆ ಎಂದೂ ಹೇಳುವ ಮೂಲಕ ಕರ್ನಾಟಕಕ್ಕೆ ಆಕ್ಸಿಜನ್‌ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ಎಂದರು.

    ರಾಷ್ಟ್ರಪತಿಗಳ ಗಮನಕ್ಕೆ ತಂದು ರಾಜ್ಯಕ್ಕೆ ನ್ಯಾಯ ಕೊಡಿಸಿ ಎಂದೂ ಈ ವೇಳೆ ಆಗ್ರಹಿಸಿದರು. ಮಂಡ್ಯ ಜಿಲ್ಲಾ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ಸಭೆಯಲ್ಲಿ ಅವರು ಆಗ್ರಹ.
    ಇದಕ್ಕೆ ಉತ್ತರ ನೀಡಿದ ಸುಮಲತಾ ಅವರು, ಕೇವಲ ಆರೋಪ, ಆಕ್ರೋಶ ವ್ಯಕ್ತಪಡಿಸಿದರೆ ಸಾಲದು. ಪರಿಹಾರಯುತವಾದ ಚರ್ಚೆಗೆ ಅವಕಾಶ ನೀಡಿ ಎಂದು ಕೇಳಿಕೊಂಡರು.

    ಆಕ್ಸಿಜನ್‌ ಪೂರೈಕೆ ಮಾಡ್ತೇನೆಂದು ಲೇಡಿ ಪೊಲೀಸ್‌ಗೇ ಟೋಪಿ ಹಾಕಿದ ಖದೀಮ- 9 ಸಾವಿರ ಗುಳುಂ

    ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ ವಿಜೇತ ಸರ್ಟಿಫಿಕೇಟ್‌ ನೀಡಿದ ಅಧಿಕಾರಿ- ಬೆಂಕಿ ಇಟ್ಟ ನಂತರ ಎಫ್‌ಐಆರ್‌!

    ಇಂಜಿನಿಯರ್‌ ಪದವೀಧರರಿಗೆ ಎನ್‌ಎಚ್‌ಎಐನಲ್ಲಿ ಉದ್ಯೋಗಾವಕಾಶ: 41 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts