More

    VIDEO: ಜನತಾ ಕರ್ಫ್ಯೂಗೆ ಒಂದು ವರ್ಷ- ಕರೊನಾ ಯೋಧರಿಗೆ ಗೌರವ ಸಲ್ಲಿಸಿದವರು ಹಲವರು, ಹುಚ್ಚಾಟ ಮಾಡಿದರು ಕೆಲವರು…

    ನವದೆಹಲಿ: ಕರೊನಾ… ಈ ಹೆಸರು ಕೇಳಿದರೆ ಬಹುಶಃ ಈಗ ಹೆದರುವವರು ಬಹಳ ಕಮ್ಮಿ ಎಂದೇ ಹೇಳಬೇಕು. ಎರಡನೇ ಅಲೆ ಬಂದರೂ ಕ್ಯಾರೇ ಮಾಡದೇ ಜನ ಸಹಜವಾಗಿಯೇ ಇದ್ದಾರೆ. ಆದರೆ ಕಳೆದ ವರ್ಷ ಇದೇ ಸಮಯವನ್ನು ಒಮ್ಮೆ ನೆನಪಿಸಿಕೊಳ್ಳಿ…!

    ಅಬ್ಬಾ ಅದೆಂಥ ಭಯ, ಅದೆಂಥ ಹೊಯ್ದಾಟ, ಅದೆಂಥ ಆತಂಕ… ಕರೊನಾ ಎಂಬ ಹೆಸರು ಕೇಳಿದರೆ ಬೆಚ್ಚಿಬೀಳುವ ದಿನಗಳವು. ಆಗ ತಾನೇ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದ ಕರೊನಾದಿಂದಾಗಿ ಕ್ಷಣ ಕ್ಷಣವೂ ಆತಂಕ ಸೃಷ್ಟಿಯಾಗಿತ್ತು. ಕರೊನಾದ ಕರಿನೆರಳು ತನ್ನ ವಿಶಾಲ ರೂಪ ಪಡೆಯುವುದನ್ನು ಮನಗಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಲಾಕ್​ಡೌನ್​ಗಿಂತ ಮುಂಚಿತವಾಗಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದರು.

    ಈ ಕರೆ ಕೊಟ್ಟಿದ್ದ ಹಿಂದಿನ ಉದ್ದೇಶ ಮನೆಯಿಂದ ಹೊರಕ್ಕೆ ಹೋದರೆ ಅಪಾಯ ಕಟ್ಟಿಟ್ಟದ್ದು ಎನ್ನುವ ಕಾರಣಕ್ಕೆ. ಮಾತ್ರವಲ್ಲದೇ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವ ಕರೊನಾ ಯೋಧರಿಗೆ ಗೌರವ ಸೂಚಿಸಲು ಮನೆಯಲ್ಲಿಯೇ ನಿಂತು ಚಪ್ಪಾಳೆ ತಟ್ಟಿ ಎಂದು ಕರೆ ಕೊಟ್ಟಿದರು.

    ಪ್ರತಿ ಹಂತದಲ್ಲಿಯೂ ಆತಂಕ ಎದುರಿಸುತ್ತಿದ್ದ ಜನರು ಒಂದೆಡೆಯಾದರೆ, ಜೀವವನ್ನೇ ಒತ್ತೆಯಿಟ್ಟು, ಭಯಾನಕ ಸೆಖೆಯ ನಡುವೆಯೂ ಭಯಂಕರ ಎನಿಸುವ ಪಿಪಿಇ ಕಿಟ್​ ಧರಿಸಿ ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕರೊನಾ ವಾರಿಯರ್ಸ್​ ಮತ್ತೊಂದೆಡೆ… ಇಂಥ ವಾರಿಯರ್ಸ್​ಗೆ ನಿಜವಾಗಿಯೂ ಪ್ರೀತಿ, ಗೌರವ ಸಲ್ಲಿಸುವ ಸಲುವಾಗಿ ಪ್ರಧಾನಿ ಮೋದಿಯವರು ಕೊಟ್ಟ ಕರೆಗೆ ಕೋಟ್ಯಂತರ ಮಂದಿ ಸ್ಪಂದಿಸಿದ್ದರು. ನಿಜವಾಗಿಯೂ ಮಾನವೀಯತೆಯುಳ್ಳ ಜನರು ಕರೊನಾ ವಾರಿಯರ್ಸ್​ಗೆ ಮನೆಯಲ್ಲಿಯೇ ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದರು.

    ಮಾರ್ಚ್ 22, 2020ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪ್ರಧಾನಿ ಮೋದಿಯವರ ಸಲಹೆಯಂತೆ ವೈದ್ಯರು, ಆರೋಗ್ಯ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಧನ್ಯವಾದ ಸಲ್ಲಿಸಿದರು. ಸಂಜೆ 5 ಗಂಟೆಗೆ ಸರಿಯಾಗಿ ಬಾಗಿಲು ಅಥವಾ ಬಾಲ್ಕನಿಯಲ್ಲಿ ನಿಂತು ಐದು ನಿಮಿಷ ಕರೊನಾ ವಾರಿಯರ್ಸ್ ಗೌರವಾರ್ಥವಾಗಿ ಚಪ್ಪಾಳೆ ತಟ್ಟಿದರು.

    ಅದೇ ಇನ್ನೊಂದೆಡೆ, ಕೆಲವರು ಇದರ ಒಳಾರ್ಥವನ್ನು ಅರ್ಥ ಮಾಡಿಕೊಳ್ಳದೇ ವ್ಯಂಗ್ಯವಾಗಿದ್ದೂ ನಡೆಯಿತು. ಹಲವರು ಅರ್ಥಮಾಡಿಕೊಳ್ಳದೇ ವ್ಯಂಗ್ಯ ಮಾಡಿದರೆ, ಇನ್ನು ಕೆಲವು ಬುದ್ಧಿವಂತರು ಉದ್ದೇಶಪೂರ್ವಕವಾಗಿ ಇದಕ್ಕೆ ಟೀಕೆ ಮಾಡಿ ಕೆಟ್ಟದ್ದಾಗಿ ವರ್ತಿಸಿದ್ದೂ ನಡೆಯಿತು. ಚಪ್ಪಾಳೆ ತಟ್ಟಿದರೆ ಕರೊನಾ ಓಡಿಹೋಗುತ್ತದೆ ಎಂಬ ಅಸಭ್ಯ ಮಾತುಗಳನ್ನು ಹೇಳುತ್ತಾ ಟೀಕೆ ಮಾಡಿದವರಿಗೇನೂ ಕಮ್ಮಿ ಇಲ್ಲ.

    ಜನತಾ ಕರ್ಫ್ಯೂ ಹೆಸರಿನಲ್ಲಿ ನಡೆದ ಕೆಲವು ಅಸಮಂಜಸ ಹಾಗೂ ಅಸಭ್ಯ ಎನಿಸುವ ಮೋಜುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವರು ಚಪ್ಪಾಳೆ ತಟ್ಟುವ ಉದ್ದೇಶ ತಿಳಿಯದೇ ತಮಗನಿಸಿದಂತೆ ಮಾಡಿದರೆ, ಇನ್ನು ಕೆಲವರು ಉದ್ದೇಶಪೂರ್ವಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಂಥ ಕೆಲವು ವಿಡಿಯೋಗಳ ತುಣುಗಳು ಇಲ್ಲಿವೆ ನೋಡಿ…

    ಶರಣಾಗಿ ಎಂದರೆ ಗುಂಡಿನ ದಾಳಿ ನಡೆಸಿದ ಜೈಶ್​ ಸಂಘಟನೆಯ ಉಗ್ರರನ್ನು ಮಣ್ಣುಮುಕ್ಕಿಸಿದ ಯೋಧರು

    ಸ್ನೇಹಿತೆಯ ಜತೆ ಸೇರಿದಾಗ ಅವಳಿಗೆ ನಾನು ಮೊದಲಿನವನಲ್ಲ ಎನ್ನಿಸಿತು- ಸಂದೇಹ ಪರಿಹಾರ ಹೇಗೆ ಮಾಡಿಕೊಳ್ಳಲಿ?

    ‘ಮೇ 1ರಂದು ನಾಲ್ಕು ಕೊಲೆ- ಸಿ.ಟಿ ರವಿ ಕೊಲೆಯಾದ್ರೆ ನಾನ್​ ಉಳೀತೇನೆ, ನನ್ನ ಕೊಲೆಯಾದ್ರೆ ಅವ್ರು ಉಳೀತಾರೆ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts