More

    ಗುಜರಾತ್​ನಲ್ಲಿ ಕಾಂಗ್ರೆಸ್​-ಬಿಜೆಪಿ ನಡುವೆ ಸೀಕ್ರೆಟ್​ ಲವ್​ , ಎರಡೂ ಶೀಘ್ರವೇ ವಿಲೀನ: ಬಾಂಬ್​ ಸಿಡಿಸಿದ ಕೇಜ್ರಿವಾಲ್​

    ವಡೋದರ (ಗುಜರಾತ್​): ಗುಜರಾತ್ ಕಾಂಗ್ರೆಸ್ ಶೀಘ್ರದಲ್ಲೇ ಗುಜರಾತ್ ಬಿಜೆಪಿ ಘಟಕದೊಂದಿಗೆ ವಿಲೀನವಾಗಲಿದೆ, ಇವೆರಡರ ನಡುವೆ ಸೀಕ್ರೆಟ್​ ಲವ್​ ನಡೀತಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೊಸ ಬಾಂಬ್​ ಸಿಡಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಬಿಜೆಪಿ-ಕಾಂಗ್ರೆಸ್ ನಡುವಿನ ಗುಪ್ತ ಪ್ರೇಮ ಹೊರಬರಲಿದೆ. ಗುಜರಾತ್ ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಪ್ರೀತಿ ಉಕ್ಕಿ ಹರಿಯುತ್ತಿರುವುದರಿಂದ ಶೀಘ್ರವೇ ಎರಡೂ ಪಕ್ಷಗಳು ವಿಲೀನ ಆಗಲಿವೆ. ಗುಜರಾತ್ ಚುನಾವಣೆ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ನಡೆಯಲಿದೆ ಎಂದಿದ್ದಾರೆ.

    ಬಿಜೆಪಿ ತನ್ನ ‘ಸ್ನೇಹಿತರ’ 10 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ. ಬಿಜೆಪಿ ಏಕೆ ಈ ಕ್ರಮ ಕೈಗೊಂಡಿತು?. ಇದಕ್ಕಾಗಿ ಆ ‘ಸ್ನೇಹಿತರು’ ದಾನವಾಗಿ ಬಿಜೆಪಿಗೆ ಎಷ್ಟು ಹಣ ನೀಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಕೇಜ್ರಿವಾಲ್​ ಒತ್ತಾಯಿಸಿದರು.

    ಗುಜರಾತ್​ನಲ್ಲಿ ಬಿಜೆಪಿ 27 ವರ್ಷಗಳ ಕಾಲ ದುರಾಡಳಿತ ನಡೆಸಿದೆ. , ನಮ್ಮ ಪಕ್ಷ ಆಪ್​ನ ಹೊಸ ರಾಜಕೀಯವಿದೆ. ಜನರಿಗೆ ಯಾವುದಕ್ಕೆ ಮತದಾನ ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಚಿತ್ರಣವಿದೆ ಎಂದ ಕೇಜ್ರಿವಾಲ್​, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗುಜರಾತ್ ರಾಜ್ಯದಲ್ಲಿ ಆರೋಗ್ಯ ಸೇವೆ ಸುಧಾರಣೆ, ಉಚಿತ ವಿದ್ಯುತ್ ಪೂರೈಕೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದರು.

    ಗುಜರಾತ್​ನಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಉಚಿತವಾಗಿ ವಿದ್ಯುತ್ ಪೂರೈಕೆ ಹಾಗೂ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಕೇಜ್ರಿವಾಲ್ ಘೋಷಿಸಿದ್ದಾರೆ. ದೆಹಲಿಯಲ್ಲಿ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದ್ದು, ಪಂಜಾಬಿನಲ್ಲಿ ಇತ್ತೀಚಿಗೆ 25 ಲಕ್ಷ ಕುಟುಂಬಗಳು ವಿದ್ಯುತ್ ಶುಲ್ಕ ಕಟ್ಟದಂತಾಗಿದೆ. ಆದೇ ರೀತಿಯಲ್ಲಿ ಗುಜರಾತ್ ನಲ್ಲಿಯೂ ಎಲ್ಲಾ ವೇಳೆಯಲ್ಲೂ ವಿದ್ಯುತ್ ಪೂರೈಸಲಾಗುವುದು ಎಂದು ಅವರು ಹೇಳಿದರು.

    ಗುಜರಾತ್‌ನಲ್ಲಿ ವಿದ್ಯುತ್​ ಬಿಲ್‌ಗಳು ಕೂಡ ಹೆಚ್ಚಾಗಿವೆ. ಜನರು ಸಂಕಷ್ಟದಲ್ಲಿದ್ದಾರೆ. ಯುವಕರು ಜೀವನೋಪಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ನಾವು ದೆಹಲಿಯಲ್ಲಿ ಕೆಲವೇ ವರ್ಷಗಳಲ್ಲಿ 12 ಲಕ್ಷ ಯುವಕರಿಗೆ ಉದ್ಯೋಗ ಒದಗಿಸಿದ್ದೇವೆ. ಉದ್ಯೋಗ ಸಿಗುವವರೆಗೆ ತಿಂಗಳಿಗೆ 3,000 ರೂಪಾಯಿಗಳ ಭತ್ಯೆ ನೀಡಲಾಗುತ್ತಿದೆ ಎಂದು ತಿಳಿಸಿದರು. (ಏಜೆನ್ಸೀಸ್​)

    ಒಟ್ಟಿಗೇ ವಿಮಾನ ಹಾರಿಸಿ ಇತಿಹಾಸ ಸೃಷ್ಟಿಸಿದ ಅಮ್ಮ-ಮಗಳು: ವೈರಲ್​ ವಿಡಿಯೋಗೆ ಕಮೆಂಟ್ಸ್​ಗಳ ಸುರಿಮಳೆ

    ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡ ನಟಿ! ಖಾಸಗಿ ಅಂಗಗಳ ನೋವು ಬಿಚ್ಚಿಟ್ಟಿದ್ದು ಹೀಗೆ…

    ಟ್ಯಾಟೂ ಪ್ರಿಯರೇ ಎಚ್ಚರ… ಹಚ್ಚೆ ಹಾಕಿಸಿಕೊಂಡವರಿಗೆ ಎಚ್​ಐವಿ ಸೋಂಕು- ಆಗಿದ್ದು ಹೀಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts