More

    ‘25 ಯುವಕರ ಜತೆ ಸಂಬಂಧ ಹೊಂದಿದ್ದಾಳೆ ನನ್ ಪತ್ನಿ; ಆದ್ರೂ ಅವಳು ಬೇಕು, ಪ್ಲೀಸ್‌ ಹುಡುಕಿಕೊಡಿ’

    ಗುವಾಹಟಿ: ಒಬ್ಬಳು ಹೆಂಡತಿ ಇರುವಾಗ ಅಥವಾ ಒಬ್ಬ ಗಂಡ ಇರುವಾಗ ಇನ್ನೊಬ್ಬರ ಪ್ರವೇಶವಾದರೆ ದಂಪತಿ ನಡುವೆ ಆಗುವ ಗಲಾಟೆ, ಕಿತ್ತಾಟ, ರಂ‍ಪಾಟ ಅಷ್ಟಿಷ್ಟಲ್ಲ. ಒಂದು ವೇಳೆ ಇದು ಅತಿರೇಕಕ್ಕೆ ಹೋದರೆ ಒಂದೋ ವಿಚ್ಛೇದನವಾಗುತ್ತದೆ, ಇಲ್ಲವೇ ಒಬ್ಬರ ಕೊಲೆಯಾಗುತ್ತದೆ.

    ಪರಿಸ್ಥಿತಿ ಹೀಗಿರುವಾಗ ಮಹಿಳೆಯೊಬ್ಬಳು 25 ಪುರುಷರ ಜತೆ ಸಂಬಂಧ ಬೆಳೆಸಿದ್ದರೂ, ಆಗಾಗ್ಗೆ ಪರಪುರಷರ ಜತೆ ಮನೆಬಿಟ್ಟು ಹೋಗುವ ಚಾಳಿ ಬೆಳೆಸಿಕೊಂಡಿದ್ದರೂ, ಆಕೆಯ ಗಂಡ ಮಾತ್ರ ಪತ್ನಿಗಾಗಿ ಇನ್ನೂ ಕಾಯುತ್ತಿದ್ದಾನಂತೆ. ಇಂಥದ್ದೊಂದು ಸುದ್ದಿ ಇದೀಗ ಬಹಿರಂಗಗೊಂಡಿದ್ದು, ತನ್ನ ಪತ್ನಿಗಾಗಿ ಇನ್ನೂ ಪ್ರೀತಿಯಿಂದಲೇ ಸ್ವಾಗತಿಸುವುದಾಗಿ ಹೇಳುತ್ತಿದ್ದಾನೆ ಈ ಗಂಡ.

    ಇಂಥದ್ದೊಂದು ಘಟನೆ ನಡೆದಿರುವುದು ಅಸ್ಸಾಂನಲ್ಲಿ. ಈ ಮಹಿಳೆ ಕಳೆದ 10 ವರ್ಷದಲ್ಲಿ ಸುಮಾರು 25 ಪುರುಷರ ಜತೆ ಅಕ್ರಮ ಸಂಬಂಧ ಇಟ್ಟುಕೊಂಡು ಅವರ ಜತೆ ಓಡಿ ಹೋಗಿದ್ದಾಳಂತೆ. ಷಫಿ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆಗೆ ಈಗ 40 ವರ್ಷ. ಮೊದಲು ಈಕೆ ಮದುವೆಯಾದದ್ದು ಮಫೀಜುದ್ದೀನ್ ಎಂಬ ಡ್ರೈವರ್ ಜತೆ. ಅಲ್ಲಿಂದಲೇ ಇವಳ ಓಡಿಹೋಗುವ ಅಭ್ಯಾಸ ಮುಂದವರೆದೆಯಂತೆ. ಪ್ರತಿಬಾರಿ ಓಡಿ ಹೋದಾಗಲೂ ಗಂಡ ವಾಪಸ್‌ ಕರೆಸಿಕೊಳ್ಳುತ್ತಿದ್ದು, ಅತ್ತೆ-ಮಾವ ಕೂಡ ಆಕೆಯ ಮೇಲೆ ಕೋಪ ಮಾಡಿಕೊಳ್ಳುತ್ತಿರಲಿಲ್ಲವಂತೆ.

    ಇವಳಿಗೆ ಇಂಥ ಖಯಾಲಿ ಏಕೆ ಎಂದು ತಿಳಿದಿಲ್ಲ. ಆದರೆ ಪ್ರತಿ ಬಾರಿ ಓಡಿ ಹೋದಾಗಲೂ ವಾಪಸ್‌ ಬಂದು ಪುನಃ ಹೀಗೆ ಮಾಡುವುದಿಲ್ಲ ಎನ್ನುತ್ತಿದ್ದಳು. ಆದ್ದರಿಂದ ನಾನು ಆಕೆಯನ್ನು ನಂಬುತ್ತಿದ್ದೆ. ಪ್ರತಿಸಲ ಹೋಗುವಾಗಲೂ ಬೇರೆ ಏನೇನೋ ಸಬೂಬು ಹೇಳುತ್ತಿದ್ದಳು. ಅಂದರೆ, ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ಹೇಳುತ್ತಿದ್ದಳು. ಇನ್ನು ಕೆಲವೊಮ್ಮೆ ಅಪ್ಪ-ಅಮ್ಮನಿಗೆ ಹುಷಾರಿರಲಿಲ್ಲ ಅದಕ್ಕೆ ಹೋಗಿದ್ದೆ ಎನ್ನುತ್ತಿದ್ದಳು. ಆದರೆ ಆಮೇಲೆ ನನಗೆ ತಿಳಿಯುತ್ತಿದ್ದುದು ಏನೆಂದರೆ ಈಕೆಗೆ ತುಂಬಾ ಅಕ್ರಮ ಸಂಬಂಧ ಇದ್ದು, ಅವರ ಜತೆಯಲ್ಲಿ ವಾಸಿಸಲು ಇವಳು ಹೋಗುತ್ತಿದ್ದಳು ಎಂದು. ನನಗೆ ಮೂವರು ಮಕ್ಕಳಿದ್ದಾರೆ ದೊಡ್ಡವಳಿಗೆ 6 ವರ್ಷ, ಎರಡನೆಯ ಮಗುವಿಗೆ 3 ವರ್ಷ ಹಾಗೂ ಮೂರನೆಯ ಮಗುವಿಗೆ 3 ತಿಂಗಳು. ಆ ಮಕ್ಕಳ ಮುಖ ನೋಡಿ ಪ್ರತಿಬಾರಿಯೂ ಅವಳ ತಪ್ಪನ್ನು ಮನ್ನಿಸುತ್ತಾ ಬಂದಿದ್ದೇನೆ ಎನ್ನುತ್ತಾನೆ ಮಫೀಜುದ್ದೀನ್.

    ಅಂದಹಾಗೆ, ಈಕೆ ಪ್ರತಿಬಾರಿಯೂ ಓಡಿಹೋಗಿ ಅಕ್ರಮ ಸಂಬಂಧ ಬೆಳೆಸುವುದು ತನಗಿಂತ ವಯಸ್ಸಿನಲ್ಲಿ ಚಿಕ್ಕವರಾದ ಯುವಕರ ಜತೆಯಂತೆ. ಈಗ ಪುನಃ ಆಕೆ ಮೂರು ಮಕ್ಕಳನ್ನು ಬಿಟ್ಟು ಮತ್ತೆ ಓಡಿಹೋಗಿದ್ದಾಳೆ. ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಾಗ ನನ್ನ ಅಪ್ಪನಿಂದ ಈ ವಿಷಯ ಗೊತ್ತಾಯಿತು. ಈ ಬಾರಿ ಪತ್ನಿ 22 ಸಾವಿರ ರೂ. ಹಣ, ಚಿನ್ನಾಭರಣ ಕದ್ದುಕೊಂಡು ಹೋಗಿದ್ದಾಳೆ. ಮಗು ಎದೆಹಾಲು ಬೇಕೆಂದು ಹಠ ಹಿಡಿಯುತ್ತಿದೆ. ನನಗೂ ಸಾಕಾಗಿ ಹೋಗಿದೆ. ಇದು 25ನೇ ಬಾರಿ ಈಕೆ ಹೀಗೆ ಮಾಡಿರುವುದು ಎಂದು ಗಂಡ ಕಷ್ಟ ಹೇಳಿಕೊಂಡಿದ್ದಾನೆ. ಸದ್ಯ ಆಕೆಗಾಗಿ ಹುಡುಕಾಟ ನಡೆಸಿರುವ ಪತಿ, ಪತ್ನಿಯನ್ನು ಹುಡುಕಿ ಕೊಡುವಂತೆ ಎಲ್ಲರ ಮೊರೆ ಹೋಗಿದ್ದಾನೆ.

    VIDEO: ಗಣೇಶನ ಎದುರು ನರ್ತಿಸುತ್ತಲೇ ಕುಸಿದುಬಿದ್ದು ಮೃತಪಟ್ಟ ಯುವಕ- ವಿಡಿಯೋ ವೈರಲ್‌

    VIDEO: ಮದುಮಕ್ಕಳಿಗೆ ಸ್ನೇಹಿತರು ಮಂಟಪದಲ್ಲೇ ಇಂಥ ಗಿಫ್ಟ್‌ ಕೊಡೋದಾ? ಮುಜುಗರದಲ್ಲಿ ವಧು-ವರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts