More

    ಪತಿ ಅಕ್ರಮ ಸಂಬಂಧ ಹೊಂದಿರುವುದು ತಿಳಿದರೆ ಕಾನೂನಡಿ ಪತ್ನಿಗಿರುವ ಹಕ್ಕುಗಳೇನು? ಇಲ್ಲಿದೆ ಮಾಹಿತಿ…

    ಪತಿ ಅಕ್ರಮ ಸಂಬಂಧ ಹೊಂದಿರುವುದು ತಿಳಿದರೆ ಕಾನೂನಡಿ ಪತ್ನಿಗಿರುವ ಹಕ್ಕುಗಳೇನು? ಇಲ್ಲಿದೆ ಮಾಹಿತಿ...ವ್ಯಕ್ತಿಯೊಬ್ಬ ವಿಚ್ಛೇದನ ಪಡೆಯದೆ ಇನ್ನೊಬ್ಬರ ಜತೆ ಲೈಂಗಿಕ ಸಂಪರ್ಕ ಹೊಂದಿ ಮಗು ಪಡೆದರೆ ಅದು ಅಪರಾಧ ಆಗುತ್ತದೆಯೇ? ಆಕೆಯೂ ಅವನ ಪತ್ನಿಯಾಗುತ್ತಾಳಾ? ಮೊದಲನೇ ಹೆಂಡತಿಗೆ ಇರುವ ಕಾನೂನಿನ ಅವಕಾಶಗಳು ಏನು ತಿಳಿಸಿ.

    ಉತ್ತರ: ಹಿಂದೂ ವಿವಾಹಿತ ವ್ಯಕ್ತಿ ತನ್ನ ಪತ್ನಿಯಿಂದ ವಿಚ್ಛೇದನ ಪಡೆಯದೆ ಆಕೆಯ ಜೀವಿತ ಕಾಲದಲ್ಲಿ ಮತ್ತೊಂದು ಮದುವೆ ಆದರೆ, ಹಾಗೆ ಮದುವೆ ಆಗಿರುವುದನ್ನು ಸಾಬೀತುಪಡಿಸಿದರೆ ಆಗ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅದು ವಿಚ್ಛೇದನ ಪಡೆಯಲು ಒಂದು ಸಕಾರಣವೂ ಆಗುತ್ತದೆ. ವಿವಾಹಿತ ವ್ಯಕ್ತಿ ಮತ್ತೊಬ್ಬರ ಜತೆ ಲೈಂಗಿಕ ಸಂಬಂಧ ಮಾತ್ರ ಹೊಂದಿದ್ದರೆ ಅದು ಶಿಕ್ಷಾರ್ಹ ಅಪರಾಧ ಆಗುವುದಿಲ್ಲ.
    ವಿವಾಹವಾಗದೆ ವಿವಾಹಿತ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವ ಸ್ತ್ರೀ ವಿವಾಹಿತ ಪುರುಷನ ಪತ್ನಿ ಆಗುವುದಿಲ್ಲ.

    ಇನ್ನು ಮೊದಲ ಹೆಂಡತಿಗೆ ಇರುವ ಕಾನೂನಿನ ಕೆಳಗೆ ದೊರೆಯುವ ಅವಕಾಶಗಳು:-
    -ಮೊದಲನೇ ಹೆಂಡತಿ ತನಗೆ ಮತ್ತು ಮಕ್ಕಳಿಗೆ ಜೀವನಾಂಶ ಬೇಕೆಂದು ಪ್ರಕರಣ ದಾಖಲಿಸಬಹುದು.

    -ಪತಿಯ ಮನೆಯಿಂದ ಹೊರಗೆ ಬಂದು ಪ್ರತ್ಯೇಕವಾಗಿ ಜೀವಿಸಬಹುದು ಮತ್ತು ಪತಿ ಬೇರೆಯವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆ ಎಂದು ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಬಹುದು. ಈ ಪ್ರಕರಣದಲ್ಲಿಯೇ ಶಾಶ್ವತ ಜೀವನಾಂಶವನ್ನೂ ಕೇಳಬಹುದು. ಪತಿಯ ಆದಾಯ ಅಥವಾ ಸ್ವತ್ತುಗಳ ಮೇಲೆ ಅಟ್ಯಾಚ್ಮೆಂಟ್ ಕೇಳಬಹುದು.

    -ಒಂದು ವೇಳೆ ವಿಚ್ಛೇದನ ಪಡೆಯುವ ಇಷ್ಟವಿಲ್ಲದೇ ಇದ್ದು, ಪತಿ ತನ್ನ ಹತ್ತಿರ ಬರುತ್ತಿಲ್ಲ ಎನ್ನುವುದಾದರೆ, ಆಗ ಪತಿಯ ಸಾಂಗತ್ಯ ಪಡೆಯಲು “ದಾಂಪತ್ಯ ಜೀವನದ ಹಕ್ಕುಗಳ ಪುನರ್ ಸ್ಥಾಪನೆಗೆ “/ ರೆಸ್ಟಿಟ್ಯೂಷನ್ ಆಫ್ ಕಾಂಜುಗಲ್ ರೈಟ್ಸ್ ಗೆ ಪ್ರಕರಣ ದಾಖಲಿಸಬಹುದು.

    -ಪತಿಯಿಂದ ಕ್ರೂರತೆ ಆಗುತ್ತಿದ್ದರೆ ಐ.ಪಿ.ಸಿ ಯ ಕಾನೂನಿನ ಕೆಳಗೆ ಪೋಲೀಸರಿಗೆ ಫಿರ್ಯಾದನ್ನು ಕೊಡಬಹುದು.

    -ಬೇರೊಬ್ಬರ ಜೊತೆ ಸಹವಾಸ ಇಟ್ಟುಕೊಂಡು ಪತ್ನಿಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಕೊಡುತ್ತಿದ್ದರೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ಪತಿಯ ಮೇಲೆ ಪ್ರಕರಣ ದಾಖಲಿಸಬಹುದು. ಪತಿ ಮನೆಯಿಂದ ವಿವಾಹಿತ ಪತ್ನಿಯನ್ನು ಹೊರಹಾಕದಂತೆ ರಕ್ಷಣೆಯ ಆದೇಶವನ್ನೂ ಪಡೆಯಬಹುದು.

    ಇದೆಂಥ ಹೋಳಿ ಹಬ್ಬ? ಬಣ್ಣದ ಬದಲು ಪರಸ್ಪರ ಚಪ್ಪಲಿ ಎಸೆದುಕೊಂಡರು! ವಿಡಿಯೋ ವೈರಲ್

    ಹುಬ್ಬಳ್ಳಿ ಕಿಮ್ಸ್​ನಿಂದ ಪ್ರೊಫೆಸರ್, ಅಸಿಸ್ಟೆಂಟ್​ ಪ್ರೊಫೆಸರ್​ ಸ್ಟೆನೋಗ್ರಾಫರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts