More

    ಎರಡು ಡೋಸ್‌ ಲಸಿಕೆ ಇಲ್ಲದಿದ್ರೆ ಕಿಮ್ಸ್‌ನಲ್ಲಿ ನೋ ಎಂಟ್ರಿ: ರೋಗಿಗಳಿಗೆ, ಸಂಬಂಧಿಕರಿಗೆ ಎಲ್ಲರಿಗೂ ಕಡ್ಡಾಯ

    ಹುಬ್ಬಳ್ಳಿ: ಧಾರವಾಡದ ಎಸ್​​ಡಿಎಂ ಮೆಡಿಕಲ್‌‌ ಕಾಲೇಜಿನಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಕರೊನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್‌) ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಒಳಗಡೆ ಬಿಡಲು ಆಡಳಿತ ಮಂಡಳಿ ತೀರ್ಮಾನಿಸಿದೆ.

    ರೋಗಿಗಳು ಹಾಗೂ ರೋಗಿಗಳನ್ನು ನೋಡಲು ಬರುವವರು ಇಬ್ಬರಿಗೂ ಎರಡೂ ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ. ಕಿಮ್ಸ್ ಆಸ್ಪತ್ರೆಗೆ ಬರುವವರು ಲಸಿಕೆ ಪಡೆದಿದ್ದಾರೆ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಐದು ತಂಡಗಳನ್ನು ನಿಯೋಜನೆ ಮಾಡಲಾಗಿದೆ. ತುರ್ತು ಚಿಕಿತ್ಸಾ ವಿಭಾಗ, ಮಕ್ಕಳ ವಾರ್ಡ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಳಿಯಲ್ಲಿ ಐದು ತಂಡಗಳು ಪರೀಶಿಲನೆ ನಡೆಸಲಿವೆ.

    ಆದ್ದರಿಂದ ಆಸ್ಪತ್ರೆಗೆ ಬರುವವರು ಕಡ್ಡಾಯವಾಗಿ ಲಸಿಕೆ ಪಡೆದ ದಾಖಲೆ ತರಬೇಕು. ಇಲ್ಲದಿದ್ದರೇ ತುರ್ತು ಚಿಕಿತ್ಸೆ ಹೊರತುಪಡಿಸಿ, ಆಸ್ಪತ್ರೆಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಕಿಮ್ಸ್‌ ಹೇಳಿದೆ. ಹೊರ ರೋಗಿಗಳ ವಿಭಾಗ, ರೋಗಿಗಳ ಸಂಬಂಧಿಗಳು ಲಸಿಕೆ ಪಡೆಯದಿದ್ದರೆ ಅವರಿಗೂ ಕೂಡ ಆಸ್ಪತ್ರೆಯಲ್ಲಿಯೇ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹಾಗೂ ರೋಗಿಗಳು ಗೊಂದಲಕ್ಕೆ ಒಳಗಾಗಬಾರದು. ಎಲ್ಲರೂ ಲಸಿಕೆ ಪಡೆಯುವ ಉದ್ದೇಶ ನಮ್ಮದು ಎಂದಿದೆ ಆಡಳಿತ ಮಂಡಳಿ.

    ಸ್ಪೇನ್‌ನಿಂದ ಅಂಬಾನಿ ಮನೆಗೆ ಬಂತು ಎರಡು ಆಲಿವ್‌ ಮರ! ಇದಕ್ಕೆ ಕಾರಣವೂ ಕುತೂಹಲ

    ತಾಯಿಯ ಅಕ್ಕನ ಮಗನನ್ನು ಪ್ರೀತಿಸುತ್ತಿರುವೆ- ಮದುವೆಯಾದರೆ ಕಾನೂನಿನಡಿ ಅಪರಾಧವಾಗುತ್ತದೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts