More

    ಕೋಳಿ ಕಾಳಗಕ್ಕೆ ಕೊನೆಗೂ ಸಿಕ್ತು ಹೈಕೋರ್ಟ್‌ ಅನುಮತಿ: ಆದರೆ ಒಂದೇ ಒಂದು ‘ಬ್ಲೇಡ್‌’ ಷರತ್ತು!

    ಚೆನ್ನೈ(ತಮಿಳುನಾಡು): ತಮಿಳುನಾಡಿನಲ್ಲಿ ಭಾರಿ ಪ್ರಸಿದ್ಧಿ ಪಡೆದಿರುವ ಕೋಳಿ ಕಾಳಗಕ್ಕೆ ಇಲ್ಲಿಯ ಕೋರ್ಟ್‌ ಕೊನೆಗೂ ಅನುಮತಿ ನೀಡಿದೆ. ಥೇಣಿ ಜಿಲ್ಲೆಯ ಉತ್ತಮಪಾಲೈಯಂ ಗ್ರಾಮದಲ್ಲಿ ಇದೇ 17ರಂದು ಈ ಕಾಳಗ ನಡೆಯಲಿದ್ದು, ಇದರ ವಿವಾದ ಹೈಕೋರ್ಟ್‌ ಮೆಟ್ಟಿಲೇರಿತ್ತು.

    ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷ ಇಂಥದ್ದೊಂದು ಕಾಳಗವನ್ನು ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದಲ್ಲಿಯೂ ಹಲವೆಡೆ ನಡೆಸಲಾಗುತ್ತದೆ. ಆದರೆ ತಮಿಳುನಾಡಿನ ಥೇಣಿ ಜಿಲ್ಲೆಯ ಉತ್ತಮಪಾಳ್ಯದಲ್ಲಿ ಹುಂಜಗಳ ಕಾಲಿಗೆ ಬ್ಲೇಡ್‌ಗಳನ್ನು ಕಟ್ಟಿ ಭಾರಿ ಉತ್ಸಾಹದಿಂದ ಈ ಕಾಳಗವನ್ನು ನಡೆಸಲಾಗುತ್ತದೆ. ಆದರೆ ಇದು ಪಕ್ಷಿಗಳ ಕಾಲಿಗೆ ಬ್ಲೇಡುಗಳನ್ನು ಕಟ್ಟುವುದು ಹೀನಾಯವಾದದ್ದು ಎಂದು ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರು.

    ಆದರೆ ಎಲ್ಲಾ ರೀತಿಯ ಎಚ್ಚರಿಕೆಗಳನ್ನು ತೆಗೆದುಕೊಂಡು ಹಾಗೂ ಕಾನೂನಿನ ಅನ್ವಯ ಕೋಳಿ ಕಾಳಗ ನಡೆಸುವುದಾಗಿ ಆಯೋಜಕರು ಹೇಳಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್, ಕೋಳಿ ಕಾಳಗದ ಸಂದರ್ಭದಲ್ಲಿ ಹುಂಜಗಳ ಕಾಲಿಗೆ ಬ್ಲೇಡ್ ಅಥವಾ ಚಾಕುಗಳನ್ನು ಕಟ್ಟಬಾರದು. ಕಾದಾಡುತ್ತಿದ್ದ ಕೋಳಿಗಳು ಜೀವಂತವಾಗಿರಬೇಕು ಎಂದು ಸೂಚಿಸಿ ಕಾಳಗ ನಡೆಸಲು ಅನುಮತಿ ನೀಡಿದರು.

    ಲುಡೋ ಆಡುವಾಗ ಗಾಳ ಹಾಕಿದ ಪಾಕ್‌ ಯುವಕ: ಪ್ರಿಯಕರನ ಸಿಗಲು ಮಗುವನ್ನೂ ಬಿಟ್ಟುಹೋಗಿ ಸಿಕ್ಕಿಬಿದ್ದ ಅಮ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts