More

    ಇನ್ನೊಂದು ನಿರ್ಭಯಾ ಕೇಸ್​: ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ ಎಸ್​ಐಟಿ ತನಿಖೆಗೆ

    ನವದೆಹಲಿ: ಇನ್ನೊಂದು ನಿರ್ಭಯಾ ಪ್ರಕರಣ ಎಂದೇ ಬಿಂಬಿತವಾಗಿರುವ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿರುವ ಗ್ಯಾಂಗ್​ರೇಪ್​ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್​ಐಟಿ) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶಿಸಿದ್ದಾರೆ.

    ಈ ಪ್ರಕರಣದ ತನಿಖೆಯನ್ನು ಫಾಸ್ಟ್​ಟ್ರ್ಯಾಕ್​ ಕೋರ್ಟ್​ನಲ್ಲಿ ನಡೆಸುವಂತೆ ಆದೇಶಿಸಿದ್ದಾರೆ. ಗ್ಯಾಂಗ್​ರೇಪ್​ ಮಾಡಿದ್ದೂ ಅಲ್ಲದೇ ನಾಲಗೆಯನ್ನೇ ಕಟ್​ ಮಾಡಿ ವಿಕೃತಿ ಮೆರೆದಿರುವ ಪ್ರಕರಣ ಇದಾಗಿದೆ. ಎರಡು ವಾರಗಳ ಹಿಂದೆ 19 ವರ್ಷದ ಯುವತಿಯ ಮೇಲೆ ಆಗಿತ್ತು ಈ ಭಯಾನಕ ಘಟನೆ. ಸುಮಾರು 15 ದಿನ ಜೀವನ್ಮರಣಗಳ ನಡುವೆ ಹೋರಾಟ ಮಾಡಿದ ಸಂತ್ರಸ್ತೆ ನಿನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ!

    ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿತ್ತು. ನಾಲ್ವರು ಕಾಮುಕರು ಈಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದರು, ಉಸಿರುಕಟ್ಟಿಸುವ ಪ್ರಯತ್ನ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಕೆಯ ನಾಲಗೆ ಕೂಡ ಕಟ್​ ಆಗಿತ್ತು!

    ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಆಸ್ಪತ್ರೆಯಿಂದ ನಿನ್ನೆಯಷ್ಟೇ ಏಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

    ಸೆಪ್ಟೆಂಬರ್ 14ರಂದು ಹೊಲಕ್ಕೆ ಹೋಗಿದ್ದ ಈಕೆ ವಾಪಸ್​ ಆಗಿರಲಿಲ್ಲ. ಹುಡುಕಾಟ ನಡೆಸಿದಾಗ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ದುಪ್ಪಟ್ಟಾದಿಂದ ದುಷ್ಕರ್ಮಿಗಳು ತನ್ನನ್ನು ಎಳೆದುಕೊಂಡು ಹೋಗಿದ್ದರು, ಕತ್ತು ಹಿಸುಕಿದ್ದರು ಎಂದು ಯುವತಿ ಹೇಳಿಕೆ ನೀಡಿದ್ದಳು.

    ಇದನ್ನೂ ಓದಿ: ವಂಚನೆ ತಪ್ಪಿಸಲು ನಾಳೆಯಿಂದ ಡೆಬಿಟ್​-ಕ್ರೆಡಿಟ್​ ಕಾರ್ಡ್​ ಹೊಸ ರೂಲ್ಸ್​: ಏನಿದೆ ಇದರಲ್ಲಿ?

    ನಂತರ ಈಕೆಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಎರಡೂ ಕಾಲುಗಳು ನಿಷ್ಕ್ರಿಯಗೊಂಡಿದ್ದವು. ಈಕೆಯ ಕೈಗಳೂ ಸ್ವಲ್ಪಮಟ್ಟಿಗೆ ಸ್ವಾಧೀನ ಕಳೆದುಕೊಂಡಿದ್ದವು. ವೆಂಟಿಲೇಟರ್​ನಲ್ಲಿ ಇಡಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು.

    ಅತ್ಯಾಚಾರಿಗಳೆಂದು ಗುರುತಿಸಲಾಗಿರುವ ಸಂದೀಪ್, ರಾಮು, ಲವಕುಶ್ ಮತ್ತು ರವಿರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

    ಯುವತಿಯ ಸಾವನ್ನು ಖಂಡಿಸಿ ಅನೇಕ ಸಂಘಟನೆಯವರು ಮತ್ತು ಆಕೆಯ ಕುಟುಂಬಸ್ಥರು ಆಸ್ಪತ್ರೆಯ ಎದುರೇ ಪ್ರತಿಭಟನೆ ನಡೆಸಿದ್ದರು. ತೀವ್ರ ಪ್ರತಿಭಟನೆಯ ನಡುವೆಯೂ ಯುವತಿಯ ಶವವನ್ನು ನೀಡದೆ ತಾವೇ ಸಂಸ್ಕಾರ ಮಾಡಿರುವುದಕ್ಕೆ ಯುವತಿಯ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಉತ್ತರ ಪ್ರದೇಶದ ಪೊಲೀಸ್ ಇಲಾಖೆ, ಯುವತಿಯ ಕುಟುಂಬಸ್ಥರ ಅನುಮತಿ ಪಡೆದು ಆಕೆಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದಿದ್ದಾರೆ.

    ಘಟನೆಯ ಹಿನ್ನೆಲೆಯೇನು?:
    ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ 19 ವರ್ಷದ ಯುವತಿಯನ್ನು ಆಕೆಯ ದುಪಟ್ಟಾದಿಂದ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ ಕುತ್ತಿಗೆ ಹಿಸುಕಿದ್ದರಿಂದ ಆಕೆಯ ನಾಲಿಗೆ ಕಚ್ಚಿ, ಮಾತನಾಡಲು ಆಗದಂತಾಗಿತ್ತು. ಅರ್ಧ ಕತ್ತರಿಸಿದಂತಾಗಿದ್ದ ನಾಲಿಗೆಯ ನೋವು ಮತ್ತು ದೇಹದಲ್ಲಾದ ನೋವಿನಿಂದ ಯುವತಿಯ ಸ್ಥಿತಿ ಗಂಭೀರವಾಗಿತ್ತು. ಆಕೆಯನ್ನು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿರಿಸಲಾಗಿತ್ತು. ಆದರೂ ಆಕೆ ಚೇತರಿಸಿಕೊಳ್ಳದ ಕಾರಣ ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ನಿನ್ನೆ ಸಾವನ್ನಪ್ಪಿದ್ದಳು.

    ಈ ಕುರಿತು ಮಾತನಾಡಿರುವ ನಿರ್ಭಯಾ ತಾಯಿ, ಈ ಪ್ರಕರಣ ನನ್ನ ಮಗಳ ಕೊಲೆ ಪ್ರಕರಣವನ್ನು ನೆನಪಿಸಿತು. ಈ ಯುವತಿಯ ಸಾವಿನ ಹಿಂದೆ ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.

    ವಂಚನೆ ತಪ್ಪಿಸಲು ನಾಳೆಯಿಂದ ಡೆಬಿಟ್​-ಕ್ರೆಡಿಟ್​ ಕಾರ್ಡ್​ ಹೊಸ ರೂಲ್ಸ್​: ಏನಿದೆ ಇದರಲ್ಲಿ?

    ಅಕ್ಟೋಬರ್​ನಲ್ಲಿ 10 ದಿನಗಳು ಬ್ಯಾಂಕ್​ಗೆ ರಜೆ: ಇಲ್ಲಿದೆ ಮಾಹಿತಿ…

    ಇನ್ಮುಂದೆ ಈ ದೇಶದಲ್ಲಿ ಗೋಹತ್ಯೆ ಮಾಡುವಂತಿಲ್ಲ: ಜಾರಿಯಾಗಲಿದೆ ಹೊಸ ಕಾನೂನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts