More

    ವೆಜ್ಜು, ನಾನ್‌ವೆಜ್ಜು ಏನೇ ತಿನ್ನಿ… ಏನೂ ತೊಂದ್ರೆಯಿಲ್ಲ… ಆದ್ರೆ ಬೀದಿ ಬದಿ ಮಾಂಸಾಹಾರ ಮಾರಾಟ ಬೇಡ ಎಂದ ಗುಜರಾತ್‌ ಸಿಎಂ

    ಗಾಂಧಿನಗರ: ಬೀದಿಬದಿಗಳಲ್ಲಿ ಗಾಡಿಗಳ ಮೇಲೆ ಮಾಂಸಾಹಾರ ಮಾರಾಟ ಆಗುತ್ತಿರುವ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಬೀದಿಬದಿಯ ಮಾಂಸಾಹಾರ ಮಾರಾಟವನ್ನು ನಿಷೇಧಿಸಲಾಗಿದೆ.

    ಈ ನಿಷೇಧದ ಬೆನ್ನಲ್ಲೇ ಇದೀಗ ಭಾರಿ ವಿವಾದದ ಅಲೆ ಎದ್ದಿದೆ. ಮಾಂಸಾಹಾರವನ್ನೇ ಗುಜರಾತ್‌ ಮುಖ್ಯಮಂತ್ರಿ ನಿಷೇಧಿದ್ದಾರೆ ಎಂದು ಎಲ್ಲೆಡೆ ಸುದ್ದಿಹರಿದಾಡುತ್ತಿದ್ದು, ಇದೀಗ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ. ನಮ್ಮ ಆಹಾರ ಪದ್ಧತಿಯನ್ನು ಸರ್ಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದಾಗಿದೆ.

    ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ ವಿಧಿಸಿಲ್ಲ. ಆದರೆ ಬೀದಿ ಬದಿ ಗಾಡಿಗಳಲ್ಲಿ ಬೇಡ ಎಂದು ಹೇಳಲಾಗಿದೆಯಷ್ಟೇ. ಯಾರ ಆಹಾರ ಪದ್ಧತಿಯ ಬಗ್ಗೆಯೂ ನಮ್ಮ ಸರ್ಕಾರಕ್ಕೆ ಅಸಮಧಾನವಾಗಲೀ, ತೊಂದರೆಯಾಗಲೀ ಇಲ್ಲ. ಹಲವಾರ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

    ಒಂದಷ್ಟು ಜನರು ಸಸ್ಯಾಹಾರ ಸೇವಿಸುತ್ತಾರೆ. ಇನ್ನೊಂದಷ್ಟು ಮಂದಿ ಮಾಂಸಾಹಾರ ಸೇವನೆ ಮಾಡುತ್ತಾರೆ. ಆದರೆ ಯಾರ ಆಹಾರ ಪದ್ಧತಿಯ ಬಗ್ಗೆಯೂ ನಮ್ಮ ಸರ್ಕಾರಕ್ಕೆ ಅಸಮಾಧಾನ ಇಲ್ಲ. ಕೆಲವು ಸ್ಥಳಗಳಲ್ಲಿ ಇರುವ ಆಹಾರ ಮಾರಾಟ ಅಂಗಡಿ, ಕೈಗಾಡಿಗಳನ್ನು ತೆಗೆಯಬೇಕೆಂದು ಬೇಡಿಕೆ ಇದೆ. ಹೀಗಾಗಿ ಈ ಆದೇಶ ಜಾರಿಗೆ ತಂದಿದ್ದೇವೆ. ರಸ್ತೆ ಬದಿಯಲ್ಲಿ ಗಾಡಿಗಳಲ್ಲಿ ಆಹಾರ ತಯಾರಿಸಿ ಮಾರಾಟ ಮಾಡುವ ಅನೇಕರು ಸ್ವಚ್ಛತೆ ನಿರ್ವಹಣೆ ಮಾಡದಿರುವುದು ನಮಗೆ ಆತಂಕ ತಂದಿದೆ. ವಾಹನ ಮತ್ತು ಜನರ ಸಂಚಾರಕ್ಕೆ ಅನಾನೂಕೂಲ ಮಾಡುವ ಕೈಗಾಡಿಗಳನ್ನು ನಿರ್ಬಂಧಿಸುವ ನಿರ್ಧಾರ ತೆಗೆದುಕೊಂಡಿದ್ದು ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದು, ನೀವು ಯಾವುದೇ ಆಹಾರ ತಿನ್ನಿ ಎಂದಿದ್ದಾರೆ.

    ನಿಮ್ಮ ಒಂದು ಸಹಿ ಚಾಮುಂಡಿ ಬೆಟ್ಟವನ್ನು ಉಳಿಸಬಹುದು: ದಯವಿಟ್ಟು ಕೈಜೋಡಿಸಿ ಎಂದ ಯದುವೀರ್‌ ಒಡೆಯರ್‌

    ‘ಜೈ ಭೀಮ್‌‘ ಚಿತ್ರದ ನಾಯಕ ಸೂರ್ಯನ ಮೇಲೆ ಹಲ್ಲೆ ಮಾಡಿದ್ರೆ ಒಂದು ಲಕ್ಷ ರೂ. ಬಹುಮಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts