More

    ಗ್ಯಾಂಗ್‌ರೇಪ್‌ ಮಾಡಿ ಮಹಿಳೆಯ ಕೊಲೆ ಮಾಡಿದವನ ಮನೆ ಕೆಡವಿದ ಸರ್ಕಾರ- ಹೀಗೊಂದು ಶಿಕ್ಷೆ

    ಭೋಪಾಲ್: ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ 28 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಘಟನೆಯ ಪ್ರಮುಖ ಆರೋಪಿಯ ಮನೆಯನ್ನು ಮರುದಿನವೇ ಸರ್ಕಾರ ಕೆಡವಿ ಹಾಕಿದೆ!

    ಶಾದಾಬ್ ಉಸ್ಮಾನಿ, ರಾಜೇಶ್ ಸಿಂಗ್ ಮತ್ತು ಸೋನು ಜಾರ್ಜ್ ಎಂಬ ಮೂವರು ಸೇರಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಕ್ರಿಮಿನಲ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಬಿಜೆಪಿ ಸರ್ಕಾರದ ಮೇಲೆ ವಿಪಕ್ಷಗಳು ಭಾರಿ ವಾಗ್ದಾಳಿ ನಡೆಸಿದ್ದವು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಗ್ಯಾಂಗ್‌ ರೇಪ್‌ನ ಪ್ರಮುಖ ಆರೋಪಿ ಶಾದಾಬ್‌ ಉಸ್ಮಾನಿಯ ಮನೆಯನ್ನು ಕೆಡವಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳು ಬಾಡಿಗೆ ಮನೆಯಲ್ಲಿ ವಾಸವಾಗಿರುವುದಾಗಿ ಹೇಳಲಾಗಿದೆ.

    ಏನಿದು ಘಟನೆ?
    28 ವರ್ಷದ ಯುವತಿ ಹಾಗೂ ಆರೋಪಿ ಶಾದಾಬ್ ಉಸ್ಮಾನಿ ಒಂದೂವರೆ ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ ಕಳೆದ ಶನಿವಾರ ಈಕೆಯನ್ನು ಜಿಲ್ಲಾ ಕೇಂದ್ರವಾದ ಶಾಹದೋಲ್‌ನಿಂದ 20 ಕಿಮೀ ದೂರದಲ್ಲಿರುವ ಕ್ಷೀರಸಾಗರ್ ಪ್ರದೇಶದಲ್ಲಿ ಶಾದಾಬ್‌ ತನ್ನ ಇಬ್ಬರು ಸ್ನೇಹಿತರ ಜತೆ ಪಿಕ್‌ನಿಕ್‌ಗೆ ಕರೆದುಕೊಂಡು ಹೋಗಿದ್ದಾನೆ.

    ಅಲ್ಲಿ ಮೂವರೂ ಸೇರಿ ಕಂಠಪೂರ್ತಿ ಕುಡಿದು ಸಂತ್ರಸ್ತೆಗೂ ಕುಡಿಸಿ ನಂತರ ಆಕೆಯ ಮೇಲೆ ಗ್ಯಾಂಗ್‌ರೇಪ್‌ ಮಾಡಿ ವಿಷ ಹಾಕಿದ್ದಾರೆ. ನಂತರ ಶಾದಾಬ್ ಉಸ್ಮಾನಿ ಪರಾರಿಯಾಗಿದ್ದು, ಉಳಿದ ಸ್ನೇಹಿತರು ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಯ ಹೊರಗೆ ಬಿಟ್ಟಿದ್ದಾರೆ. ನಂತರ ಒಬ್ಬಾತ ಆಕೆಯ ಮನೆಯವರಿಗೆ ಕರೆ ಮಾಡಿ ಆಕೆ ಮದ್ಯ ಸೇವನೆ ಮಾಡಿದ್ದರಿಂದ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದಿದ್ದಾನೆ.

    ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಮದ್ಯ ಸೇವನೆ ಮಾಡಿ ವಿಷ ಸೇವನೆಯನ್ನೂ ಮಾಡಿರುವುದು ದೃಢಪಟ್ಟಿದೆ. ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿಎಂ ಆದೇಶದ ಮೇರೆಗೆ ಜಿಲ್ಲಾಡಳಿತ, ಸ್ಥಳೀಯ ಪೊಲೀಸರು ಬುಲ್ಡೋಜರ್‌ಗಳೊಂದಿಗೆ ಉಸ್ಮಾನಿ ಅವರ ಮನೆಯನ್ನು ಕೆಡವಿದ್ದಾರೆ.

    ಮತಾಂತರಕ್ಕೆ ಒಪ್ಪದ ಯುವತಿಯನ್ನು ನಡುರಸ್ತೆಯಲ್ಲಿಯೇ ಮನಬಂದಂತೆ ಗುಂಡು ಹಾರಿಸಿ ಬರ್ಬರ ಹತ್ಯೆ!

    ಜಾತ್ರೆಗಳಲ್ಲಿ ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ: ಹಿಜಾಬ್‌ ಪ್ರತಿಭಟನೆಯಲ್ಲಿ ನಾವಿಲ್ಲ ಎಂದು ಕಣ್ಣೀರು ಹಾಕ್ತಿರೋ ವ್ಯಾಪಾರಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts