More

    ಹುಟ್ಟುತ್ತಲೇ ಮಗುವಿಗೆ ಸಿಕ್ತು 18 ವರ್ಷ ಉಚಿತ ವೈಫೈ: ಇದಕ್ಕೆ ಕಾರಣವೇ ಕುತೂಹಲ…

    ಸ್ವಿಜರ್​ಲೆಂಡ್​: ಇದೀಗ ಇಂಟರ್​ನೆಟ್​ ಸೌಲಭ್ಯ ತುಂಬಾ ಕಡಿಮೆ ದರದಲ್ಲಿ ಸಿಗುತ್ತಿದ್ದರೂ ಉಚಿತವಾಗಿ ವೈಫೈ ಪಡೆಯಲು ಏನೆಲ್ಲಾ ಸರ್ಕಸ್​ ಮಾಡುವವರು ಇದ್ದಾರೆ. ಆದರೆ ಇಲ್ಲೊಂದು ಮಗುವು ಹುಟ್ಟುತ್ತಲೇ ಉಚಿತ ವೈಫೈ ಸೌಲಭ್ಯ ಪಡೆದುಕೊಂಡು ಬಂದಿದೆ, ಅದೂ ಅದರ 18 ವರ್ಷದವರೆಗೆ!

    ಅಷ್ಟಕ್ಕೂ ಇದು ಹೇಗೆ ಸಾಧ್ಯ ಎಂದರೆ ಆ ಮಗುವಿನ ಹೆಸರು! ಸ್ವಿಜರ್​ಲೆಂಡ್​ ದಂಪತಿಗೆ ಹುಟ್ಟಿರುವ ಮಗುವಿಗೆ ಇಟ್ಟಿರುವ ಹೆಸರಿನಿಂದಾಗಿ ಅದಕ್ಕೆ ಈ ಸೌಲಭ್ಯ ಸಿಕ್ಕಿದೆ.
    ಅಷ್ಟಕ್ಕೂ ಈ ಮಗುವಿಗೆ ಅದೆಂಥ ಹೆಸರು ಇಟ್ಟಿದ್ದಾರೆ ಎನ್ನುವ ಕುತೂಹಲವಿದ್ದರೆ ಕೇಳಿ, ಅದರ ಹೆಸರು ಟ್ವಿಫಿಯಾ. ಟ್ವಿಫಿಯಾ ಎನ್ನುವುದು ಮಾಮೂಲು ಹೆಸರಲ್ಲ, ಬದಲಿಗೆ ಇಂಟರ್​ನೆಟ್​ ಸೇವೆಯನ್ನು ಪೂರೈಕೆ ಮಾಡುವ ಕಂಪೆನಿಯ ಹೆಸರು ಇದು.

    ಕಂಪೆನಿಯ ಹುಟ್ಟುಹಬ್ಬದ ನಿಮಿತ್ತ ಅದು ಒಂದು ಆಫರ್​ ನೀಡಿತ್ತು. ಅದೇನೆಂದರೆ, ಇನ್ನುಮುಂದೆ ಹುಟ್ಟುವ ಮಗುವಿಗೆ ತನ್ನ ಕಂಪೆನಿಯ ಹೆಸರಾದ ಟ್ವಿಫಿ, ಟ್ವಿಫಿಯಾ ಅಥವಾ ಟ್ವಿಫಿಯಸ್​ ಇಟ್ಟರೆ ಆ ಮಗುವಿಗೆ ಕನಿಷ್ಠ 18 ವರ್ಷದ ವರೆಗೆ ಉಚಿತವಾಗಿ ವೈಫೈ ಸೌಲಭ್ಯ ನೀಡಲಾಗುವುದು ಎಂದು. ತನ್ನ ಫೇಸ್​ಬುಕ್​ ಖಾತೆಯಲ್ಲಿ ಈ ವಿಷಯ ತಿಳಿಸಿದ್ದ ಕಂಪೆನಿ, ಅಂಥ ಹೆಸರು ಇಟ್ಟಿರುವ ಮಗುವಿನ ಜನನ ಪ್ರಮಾಣಪತ್ರವನ್ನು ಹಾಗೂ ಹೆಸರು ಇಟ್ಟಿರುವ ದಾಖಲೆಗಳನ್ನು ಅಪ್​ಲೋಡ್​ ಮಾಡುವಂತೆ ಹೇಳಿತ್ತು.

    ಇದನ್ನೂ ಓದಿ: ವಿಚ್ಛೇದಿತ ಅಕ್ಕನನ್ನು ರೇಪ್ ಮಾಡಿದ ತಮ್ಮಂದಿರು; ಹೊಡೆದು ಬಾಯಿ ಮುಚ್ಚಿಸಿದ ಪಾಲಕರು

    ಅದರಂತೆ ಈ ದಂಪತಿ ಮಾಡಿದ್ದಾರೆ. ಆದ್ದರಿಂದ ಅವರ ಮಗುವಿಗೆ 18 ವರ್ಷ ಉಚಿತ ವೈಫೈ ಸಿಗಲಿದೆ. ಈಗ ದಂಪತಿ ಭವಿಷ್ಯದ ಲೆಕ್ಕಾಚಾರ ಹಾಕಿದ್ದಾರೆ. ಮಗುವಿಗೆ ಉಚಿತ ವೈಫೈ ಎಂದರೆ ಅದು ಅಪ್ಪ-ಅಮ್ಮನಿಗೆ ಸಿಕ್ಕಂತೆ ಅಲ್ಲವೆ? ಅದಕ್ಕಾಗಿ ಈ ಮುಂದಿನ 18 ವರ್ಷ ತಾವು ಇಂಟರ್​ನೆಟ್​ ಸೇವೆಗೆ ಎಷ್ಟು ಹಣ ಖರ್ಚು ಮಾಡುತ್ತಿದ್ದೆವೋ, ಅಷ್ಟು ಹಣವನ್ನು ಅವರು ಉಳಿತಾಯ ಮಾಡಲಿದ್ದಾರಂತೆ. ನಂತರ ಮಗುವಿಗೆ 18 ವರ್ಷ ತುಂಬಿದಾಗ ಆ ಉಳಿತಾಯದ ಹಣದಲ್ಲಿ ಕಾರು ಅಥವಾ ಇನ್ನಾವುದಾದರೂ ವಸ್ತುವನ್ನು ಮಗುವಿಗೆ ಗಿಫ್ಟ್​ ಕೊಡಲಿದ್ದಾರಂತೆ.

    ಮೊದಲು ಇಂಥದ್ದೊಂದು ಹೆಸರು ಮಗಳಿಗೆ ಇಡಲು ಮುಜುಗರವಾಯಿತು. ಹೆಸರು ಮನುಷ್ಯರಿಗೆ ಸ್ವಲ್ಪ ವಿಚಿತ್ರ ಎನಿಸಿತು. ಆದರೂ ನಂತರ ಇದೊಂದು ಡಿಫರೆಂಟ್​ ಹೆಸರು ಎನಿಸಿ ಇಟ್ಟಿರುವುದಾಗಿ ದಂಪತಿ ಹೇಳಿದ್ದಾರೆ.

    ನನ್ನಮ್ಮನ ಜತೆ 3 ಬಾರಿ ಮದುವೆಯಾಗಿ ಸೆಕ್ಸ್​ ಮಾಡುವಾಗ ಅಪ್ಪ ತೀರಿಕೊಂಡರು – ಆತ್ಮಚರಿತ್ರೆಯಲ್ಲಿ ಆಸ್ಕರ್​ ವಿಜೇತ

    ಬೆಂಗಳೂರಿನಲ್ಲಿ ಭಯಾನಕ ಘಟನೆ: ಚಾಕು ಹಿಡಿದು ಕಂಡಕಂಡವರ ಮೇಲೆ ಹಲ್ಲೆ- ಒಬ್ಬನ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts