More

    ನಾಯಿಗಾಗಿ ಸ್ತ್ರೀಯರ ಕಾದಾಟ: ಮೌನಕ್ಕೆ ಜಾರಿದ ‘ಟಾಮಿ’- ಯುವತಿಯ ಕಚ್ಚಿದ ಮಹಿಳೆ ಜೈಲಿಗೆ

    ಬರ್ಲಿನ್: ಪಾರ್ಕಿಗೆ ಹೋದ ಸಮಯದಲ್ಲಿ ಇಬ್ಬರು ಯುವತಿಯರು ನಾಯಿಯ ಸಲುವಾಗಿ ಜಗಳವಾಡಿ ನಂತರ ಒಬ್ಬಳು ಇನ್ನೊಬ್ಬಳನ್ನು ಕಚ್ಚಿರುವ ಘಟನೆ ಇದೀಗ ಭಾರಿ ವೈರಲ್ ಆಗಿದೆ.

    ಜರ್ಮನಿಯ ತಿರಿಂಗಿಯ ಎಂಬ ಊರಿನ ಉದ್ಯಾನದಲ್ಲಿ ಈ ಘಟನೆ ನಡೆದಿದೆ. ಸಾಮಾನ್ಯವಾಗಿ ಚಿಕ್ಕಪುಟ್ಟ ಗಲಾಟೆಗಳಾದರೆ ಅದೇನು ದೊಡ್ಡ ವಿಷಯವಾಗುವುದಿಲ್ಲ. ಆದರೆ ಈ ಘಟನೆ ಮಾತ್ರ ವಿಶ್ವಾದ್ಯಂತ ಸುದ್ದಿಯಾಗಿದೆ. ಇದರ ವಿಡಿಯೋ ಕೂಡ ಹರಿಬಿಡಲಾಗಿದೆ.

    ಇದಕ್ಕೆ ಕಾರಣ ಏನೆಂದರೆ, ಓರ್ವ ಮಹಿಳೆ ತನ್ನ ನಾಯಿ ಟಾಮಿಯನ್ನು ಪಾರ್ಕಿಗೆ ಕರೆದುಕೊಂಡು ಬಂದಿದ್ದಾಳೆ. ನಾಯಿ ಮಾತು ಕೇಳುತ್ತಿಲ್ಲ ಎಂದು ಅದಕ್ಕೆ ಚೆನ್ನಾಗಿ ಹೊಡೆಯುತ್ತಿದ್ದಳು. ಇದನ್ನು ಅಲ್ಲಿಯೇ ಇದ್ದ ಯುವತಿ ನೋಡಿದ್ದಾಳೆ. ಅವಳಿಗೆ ನಾಯಿಯ ಮೇಲೆ ಮರುಕ ಹುಟ್ಟಿದೆ. ಏಕೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾಳೆ. ಅದನ್ನು ಕೇಳಲು ನೀನ್ಯಾರು, ಅದು ನನ್ನ ನಾಯಿ ಎಂದ ಮಹಿಳೆ ಪುನಃ ನಾಯಿಯನ್ನು ಹೊಡೆಯಲು ಶುರು ಮಾಡಿದ್ದಾಳೆ.

    ನೀವು ಸರಿಯಾಗಿ ಬುದ್ಧಿ ಕಲಿಸಿದ್ದರೆ ನಾಯಿ ಮಾತು ಕೇಳುತ್ತಿತ್ತು ಎಂದು ಆ ಯುವತಿ ಪುನಃ ಹೇಳಿದ್ದಾಳೆ. ಹೀಗೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಕೈಕೈ ಮಿಲಾಯಿಸುವ ಮಟ್ಟಿಗೆ ಪರಿಸ್ಥಿತಿ ಹೋಯಿತು. ಜಗಳವಾಡುವುದನ್ನು ನೋಡಿದ ನಾಯಿ ಅದನ್ನು ತಪ್ಪಿಸಲು ಎಂಬಂತೆ ತುಂಬಾ ಸಲ ಜೋರಾಗಿ ಕೂಗಿಕೊಂಡಿತು. ಅದರ ಕೂಗಿಗೆ ಪಾರ್ಕ್‌ನಲ್ಲಿ ಇದ್ದ ಜನರು ಓಡಿ ಬಂದರು. ಜಗಳವನ್ನು ತಪ್ಪಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

    ನಾಯಿ ಬೊಗಳುವುದನ್ನು ಮುಂದುವರೆಸಿತ್ತು. ಒಂದೆಡೆ ತನ್ನ ಒಡತಿ, ಇನ್ನೊಂದೆಡೆ ತನ್ನನ್ನು ರಕ್ಷಿಸಲು ಬಂದಿರುವ ಯುವತಿ… ಸಂದಿಗ್ಧದಲ್ಲಿ ನಾಯಿ ಇರುವಂತೆ ಕಾಣಿಸುತ್ತಿತ್ತು. ಆದರೂ ನಾಯಿ ಕೂಗುವುದನ್ನು ನೋಡಿದ ಜನ ಈ ಜಗಳದ ಕಾರಣ ತಿಳಿಯದ ಹಿನ್ನೆಲೆಯಲ್ಲಿ ಯುವತಿಯನ್ನು ಹಿಂದಕ್ಕೆ ಸರಿಯುವಂತೆ ಹೇಳಿದರು. ನಾಯಿ ಎಗರುತ್ತಿದ್ದುದ್ದನ್ನು ಕಂಡ ಜನ ಯುವತಿಯನ್ನು ಅದು ಕಚ್ಚಬಹುದು ಎಂದು ಭಯ ಪಡುತ್ತಿದ್ದರು.

    ಆದರೆ ಆದದ್ದೇ ಬೇರೆ. ಈ ಇಬ್ಬರು ಸ್ತ್ರೀಯರ ಜಗಳ ಎಷ್ಟು ವಿಕೋಪಕ್ಕೆ ಹೋಯಿತು ಎಂದರೆ ನಾಯಿಯ ಬದಲು ಆ ಮಹಿಳೆಯೇ ಯುವತಿಗೆ ಬಲವಾಗಿ ಕಚ್ಚಿಬಿಟ್ಟಳು. ಇದನ್ನೆಲ್ಲಾ ನೋಡುತ್ತಿದ್ದ ನಾಯಿ ಒಂದೇ ಸಲಕ್ಕೆ ಮೌನಕ್ಕೆ ಜಾರಿತು. ಕುಯೋ ಕುಯೋ ಎನ್ನುತ್ತಾ ಏನನ್ನೋ ಹೇಳಲು ಬಯಸಿದಂತೆ ಕಂಡಿತು.

    ಯುವತಿ ಸೀದಾ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದರು. ಸದ್ಯ ಯುವತಿಗೆ ದೈಹಿಕ ಹಿಂಸೆ ನೀಡಿದ ಆರೋಪದ ಮೇಲೆ ಮಹಿಳೆಯನ್ನು ಸದ್ಯ ಜೈಲಿಗೆ ಕಳುಹಿಸಲಾಗಿದೆ. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

    VIDEO: ಆಕಾಶದಿಂದ ಸುರಿಯಿತು ಮೀನುಗಳು ಮಳೆ: ರಸ್ತೆಯ ತುಂಬಾ ವಿಲವಿಲ… ನಂಬಲಸಾಧ್ಯವಾದ ವಿಡಿಯೋ ವೈರಲ್‌

    ಎಟಿಎಂ ವಿತ್‌ಡ್ರಾ, ಫುಡ್‌ ಆರ್ಡರ್‌, ಓಲಾ ಜೇಬಿಗೆ ಭಾರ: ಬ್ಯಾಂಕ್‌ ಲಾಕರ್‌ ಗ್ರಾಹಕ ನಿರಾಳ- ಆರು ಹೊಸ ರೂಲ್ಸ್‌ ಇಲ್ಲಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts