More

    ಶತಮಾನದಷ್ಟು ಹಳೆಯ ಅಮರಾವತಿ ರಥ ಬೆಂಕಿಗಾಹುತಿ: ಪತ್ತೆಯಾಗದ ಕಾರಣ

    ಅಮರಾವತಿ: ಆಂಧ್ರ ಪ್ರದೇಶದ ಅಮರಾವತಿ ಜಿಲ್ಲೆಯ ಶತಮಾನಗಳ ಹಳೆಯ ಪ್ರಸಿದ್ಧ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿರುವ ಮರದ ರಥಕ್ಕೆ ಏಕಾಏಕಿ ಬೆಂಕಿ ತಗುಲಿದೆ. ದೇವಾಲಯದ ಅವರದಲ್ಲಿರುವ ಕೊಠಡಿಯಲ್ಲಿ ನಿಲ್ಲಿಸಲಾಗಿದ್ದ 40 ಅಡಿ ಎತ್ತರದ ಈ ರಥಕ್ಕೆ ಬೆಂಕಿ ತಗುಲಿರುವ ಹಿಂದೆ ಯಾರ ಕೈವಾಡ ಇದೆ ಎನ್ನುವುದು ನಿಗೂಢವಾಗಿದೆ.

    ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿರುವ ಸಖಿನೇತಿಪಲ್ಲಿ ತಾಲೂಕಿನಲ್ಲಿನ ಅಂತರ್ವೇದಿಯಲ್ಲಿರುವ ಈ ದೇವಸ್ಥಾನದಲ್ಲಿಯೇ ಇದ್ದ ರಥಕ್ಕೆ ನಡುರಾತ್ರಿ ಒಂದರಿಂದ ಮೂರು ಗಂಟೆ ನಡುವಿನ ಅವಧಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತೇಗದ ಮರದಿಂದ ನಿರ್ಮಾಣ ಮಾಡಿರುವ ಈ ರಥವು ಶತಮಾನಗಳ ಇತಿಹಾಸವನ್ನು ಹೊಂದಿದೆ.

    ಇದು ಕಿಡಿಕೇಡಿಗಳ ಕೃತ್ಯವೆಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ಷಾರ್ಟ್‌ಸರ್ಕೀಟ್‌ನಿಂದಲೂ ವಿದ್ಯುತ್‌ ತಗುಲಿರುವ ಸಾಧ್ಯತೆಗಳಿದ್ದು, ಆ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಆಂಧ್ರಪ್ರದೇಶದ ನೆಲ್ಲೂರು ತಾಲೂಕಿನಲ್ಲಿ ಮಾನಸಿಕ ಅಸ್ವಸ್ಥನೊಬ್ಬ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಿ ಹೋಗಿದ್ದ. ಆದ್ದರಿಂದ ಎಲ್ಲ ರೀತಿಯಲ್ಲಿಯೂ ತನಿಖೆ ನಡೆಸಲಾಗುವುದು ಎಂದಿದ್ದಾರೆ.

    ಇದನ್ನೂ ಓದಿ: ಕನ್ಹಯ್ಯ ಕುಮಾರ್‌ ಪೌರತ್ವ ರದ್ದುಪಡಿಸಿ ಎಂದು ಪಿಐಎಲ್‌: ಹೈಕೋರ್ಟ್‌ನಿಂದ ಭಾರಿ ದಂಡ

    ರಥ ಸಂಪೂರ್ಣ ಸುಟ್ಟುಹೋಗಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ವಿಶೇಷ ಸಂದರ್ಭಗಳಲ್ಲಿ ಮಾತ್ರ ಈ ರಥವನ್ನು ಹೊರಕ್ಕೆ ತರಲಾಗುತ್ತದೆ. ಕಳೆದ ಏಪ್ರಿಲ್‌ನಲ್ಲಿ ನಡೆದ ರಥೋತ್ಸವದ ಸಮಯದಲ್ಲಿ ಹೊರಕ್ಕೆ ರಥವನ್ನು ತರಲಾಗಿತ್ತು. ನಂತರ ಅದನ್ನು ಆವರಣದಲ್ಲಿ ನಿಲ್ಲಿಸಲಾಗಿತ್ತು.

    ಅಂತರ್ವೇದಿಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿರುವ 104 ಶ್ರೀ ಲಕ್ಷ್ಮೀ ನರಸಿಂಹ ದೇವಾಲಯಗಳಲ್ಲಿ ಇದೂ ಒಂದಾಗಿದೆ.

    ವಿಚಾರಣೆ ಮಾಡೋದಿದ್ರೆ ಆಫ್ರಿಕನ್‌ ಭಾಷೆಯಲ್ಲಿ ಮಾಡಿ, ಉತ್ತರಿಸುವೆ ಎಂದ ಡ್ರಗ್ಸ್ ಪೆಡ್ಲರ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts