More

    ಫೀಸ್‌ ಕಟ್ಟಿ ಎಂದು ಶಾಲೆಯ ಒತ್ತಡ: ನೊಂದ ವಿದ್ಯಾರ್ಥಿ ಆತ್ಮಹತ್ಯೆ

    ಭೋಪಾಲ್: ಕರೊನಾ ವೈರಸ್‌, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ದುಬಾರಿ ಶುಲ್ಕ ಕೊಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿರುವ ಎಷ್ಟೋ ಪಾಲಕರಿಗೆ ಇದು ಸಂಕಷ್ಟದ ಸಮಯ.

    ಇದೇ ಕಾರಣಕ್ಕೆ ಶುಲ್ಕ ಭರ್ತಿ ಮಾಡುವಂತೆ ಪಾಲಕರಿಗೆ ಒತ್ತಡ ಹೇರಬಾರದು ಎಂದು ಕೇಂದ್ರ ಸರ್ಕಾರ ಹಲವಾರು ಬಾರಿ ಹೇಳುತ್ತಲೇ ಬಂದಿದೆ, ಆದರೆ ತಮ್ಮ ಶಿಕ್ಷಕರಿಗೆ ಸಂಬಳ ಕೊಡಲು ಹಣವಿಲ್ಲ, ಆದ್ದರಿಂದ ಶುಲ್ಕ ತುಂಬಿ ಎಂದು ಹಲವು ಶಾಲೆಗಳು ಪಾಲಕರಿಗೆ ಒತ್ತಾಯ ಮಾಡುತ್ತಲೇ ಬಂದಿದೆ.

    ಇದು ಅನೇಕ ಪಾಲಕರಿಗೆ ನುಂಗಲಾರದ ತುತ್ತಾಗಿದೆ. ಆದರೆ ಶುಲ್ಕ ತುಂಬಲು ತೀರಾ ಕಷ್ಟ ಎನಿಸುವ ಪಾಲಕರಿಗೂ ಕೆಲವು ಶಾಲೆಗಳು ತೀವ್ರವಾಗಿ ಒತ್ತಡ ಹೇರುತ್ತಿವೆ. ಇದೇ ಒತ್ತಡ, ಬಾಲಕನೊಬ್ಬನ ಸಾವಿಗೆ ಕಾರಣವಾಗಿರುವ ದುರ್ಘಟನೆಯೊಂದು ಮಧ್ಯಪ್ರದೇಶದ ಮಹಾಲಕ್ಷ್ಮೀ ನಗರದಲ್ಲಿ ನಡೆದಿದೆ.

    ಬಾಕಿ ಇರುವ ಶುಲ್ಕ ಪಾವತಿಸುವಂತೆ ಆಡಳಿತ ಶಾಲೆಯ ಮಂಡಳಿಯ ನಿರಂತರವಾಗಿ ಒತ್ತಡ ಹೇರಿದ್ದರಿಂದ ಬೇಸತ್ತ 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದು.

    ಇದನ್ನೂ ಓದಿ: ನಟನಿಗೆ ಹುಟ್ಟುಹಬ್ಬದ ವಿಷ್‌ ಮಾಡಹೋಗಿ ಜೀವ ಕಳೆದುಕೊಂಡ ಅಭಿಮಾನಿಗಳು!

    ಹರೇಂದ್ರ ಸಿಂಗ್ ಗುರ್ಜರ್ (15) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬಾಕಿ ಇರುವ ಶುಲ್ಕ ಪಾವತಿಗೆ ಶಾಲೆಯವರು ಒತ್ತಡ ಹೇರಿದ್ದರಿಂದ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕ ಯಾವುದೇ ನೋಟ್ ಬರೆದಿರುವುದು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ಎಲ್ಲಾ ಆ್ಯಂಗಲ್‌ಗಳಿಂದ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳೀದ್ದಾರೆ.

    ಅಂತ್ಯಸಂಸ್ಕಾರದ 10ನೇ ದಿನಕ್ಕೆ ಅಪ್ಪನಿಗೆ ಕರೆ ಮಾಡಿದ ಕೊಲೆಯಾದ ಯುವತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts