More

    ಕೇಂದ್ರಕ್ಕೆ ಹೇಗೆ ಧನ್ಯವಾದ ಸಲ್ಲಿಸಬೇಕೋ ತಿಳಿಯುತ್ತಿಲ್ಲ ಎನ್ನುತ್ತಲೇ ಪರಿಹಾರಿ ನಿಧಿಗೆ ಧನ ಸಹಾಯ ಮಾಡಿದ ಅಪ್ಪ…

    ಹಮೀರ್​ಪುರ (ಹಿಮಾಚಲ ಪ್ರದೇಶ): ಯೂಕ್ರೇನ್​ನಲ್ಲಿ ವೈದ್ಯಕೀಯ ಕಲಿಯುತ್ತಿದ್ದ ತಮ್ಮ ಮಗಳನ್ನು ಸುರಕ್ಷಿತವಾಗಿ, ಜೀವಂತವಾಗಿ ನೋಡುತ್ತೇವೆಯೋ ಇಲ್ಲವೋ ಎಂಬ ಆತಂಕದಲ್ಲಿ ಹಿಮಾಚಲ ಪ್ರದೇಶದ ಹಮೀರ್​ಪುರದ ಅಪ್ಪ-ಅಮ್ಮ ಮಗಳನ್ನು ನೋಡಿ ಕಣ್ಣೀರಾಗಿದ್ದಾರೆ.

    ಯೂಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕೆಲಸದಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ‘ಆಪರೇಷನ್ ಗಂಗಾ’ ಯೋಜನೆಯಲ್ಲಿ ಹಮೀರ್​ಪುರನ ಅಂಕಿತಾ ಠಾಕೂರ್​ ಸುರಕ್ಷಿತವಾಗಿ ಅಪ್ಪ-ಅಮ್ಮನ ಬಳಿ ಸೇರಿದ್ದು, ಇದು ಅವರನ್ನು ಭಾವುಕರನ್ನಾಗಿ ಮಾಡಿದೆ. ಇದಾಗಲೇ ಸುಮಾರು 10 ಸಾವಿರ ಭಾರತೀಯರು ವಾಪಸ್​ ಬಂದಿದ್ದು, ಅದರಲ್ಲಿ ಅಂಕಿತಾ ಕೂಡ ಒಬ್ಬರು.

    ಮಗಳನ್ನು ನೋಡುತ್ತಲೇ ಕಣ್ಣೀರಾಗಿರುವ ಠಾಕೂರ್​ ಕುಟುಂಬ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತಲೇ, ಕೇಂದ್ರ ಸರ್ಕಾರಕ್ಕೆ ಹೇಗೆ ಧನ್ಯವಾದ ಸಲ್ಲಿಸಬೇಕೋ ತಿಳಿಯುತ್ತಿಲ್ಲ. ಅಂಥ ಭೀಕರ ಸ್ಥಿತಿಯಲ್ಲಿಯೂ ಮಗಳನ್ನು ಸುರಕ್ಷಿತವಾಗಿ ನಮ್ಮ ಮಡಿಲಿಗೆ ಒಪ್ಪಿಸಲಾಗಿದೆ ಎಂದಿರುವ ಅಂಕಿತಾ ಅಪ್ಪ-ಅಮ್ಮ ಪಿಎಂ ಕೇರ್ಸ್​ ಫಂಡ್​ಗೆ 21 ಸಾವಿರ ರೂ. ಹಾಗೂ ಸಿಎಂ ಪರಿಹಾರ ನಿಧಿಗೆ 11 ಸಾವಿರ ರೂ. ದೇಣಿಗೆ ನೀಡಿದ್ದಾರೆ.

    ಈ ಬಗ್ಗೆ ಅಂಕಿತಾ ಕೂಡ ಮಾತನಾಡಿದ್ದು, ಅಲ್ಲಿಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಎಲ್ಲೆಡೆ ಬಾಂಬ್​ ಸದ್ದು ಕೇಳಿಸುತ್ತಿತ್ತು. ಬಂಕರ್​ನಲ್ಲಿ ಉಳಿದುಕೊಂಡಿದ್ದರೂ ಪ್ರಾಣಕ್ಕೆ ಯಾವುದೇ ಕ್ಷಣದಲ್ಲಿಯೂ ಅಪಾಯ ಉಂಟಾಗುವ ಸಾಧ್ಯತೆ ಇತ್ತು. ಇಂಥ ಸನ್ನಿವೇಶದಲ್ಲಿಯೂ ಭಾರತ ಸರ್ಕಾರದ ಸಹಾಯದಿಂದ ನಾನು ಪ್ರಾಣ ಕಾಪಾಡಿಕೊಂಡು ಬಂದಿದ್ದೇನೆ. ನನ್ನಂಥ ಸಹಸ್ರಾರು ವಿದ್ಯಾರ್ಥಿಗಳಿಗೆ ಜೀವದಾನ ಸಿಕ್ಕಿದೆ ಎಂದಿದ್ದಾರೆ.

    VIDEO: ಭಾರತದ ಧ್ವಜ ಹಿಡಿದು ಪ್ರಾಣ ಉಳಿಸಿಕೊಂಡ ಪಾಕಿಸ್ತಾನದ ವಿದ್ಯಾರ್ಥಿಗಳು! ಅನುಭವ ಇಲ್ಲಿದೆ ಕೇಳಿ…

    ‘ವಾಪಸ್​ ಕರೆಸಿಕೊಳ್ಳಿ’ ಎಂದು ಗೋಳಿಡುತ್ತಲೇ ಯೂಕ್ರೇನ್​ನಲ್ಲೂ ಭಾರತದ ವಿರುದ್ಧ ಪ್ರಚಾರ ಶುರು ಮಾಡಿದ! ಈತನ ಹಿಸ್ಟರಿ ಕೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts