More

    ಎಮ್ಮೆಯ ವಿರುದ್ಧ ದೂರು ದಾಖಲಿಸಲು ಠಾಣೆಗೆ ಬಂದ ರೈತ: ವಶೀಕರಣದ ಕಾರಣ ಕೇಳಿ ಪೊಲೀಸರು ಸುಸ್ತು!

    ಭೋಪಾಲ್: ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯ ನಾಯಗಾಂವ್ ಎಂಬ ಹಳ್ಳಿಯ ರೈತನೊಬ್ಬ ಎಮ್ಮೆಯನ್ನು ಕರೆದುಕೊಂಡು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಅದರ ವಿರುದ್ಧ ದೂರು ದಾಖಲು ಮಾಡಿ ಪೊಲೀಸರನ್ನು ಬೇಸ್ತು ಬೀಳಿಸಿದ್ದಾನೆ. ಅಷ್ಟಕ್ಕೂ ಆತ ಮಾಡಿದ ಆರೋಪ ಎಂದರೆ ತನ್ನ ಎಮ್ಮೆ ಹಾಲು ಕರೆಯಲು ಅವಕಾಶ ಕೊಡುತ್ತಿಲ್ಲ ಎಂದು!

    ತಮ್ಮ ಎಮ್ಮೆಯ ಮೇಲೆ ಮಾಟ ಮಂತ್ರ ಪ್ರಯೋಗಿಸಲಾಗಿದೆ. ಇಷ್ಟು ದಿನ ಚೆನ್ನಾಗಿದ್ದ ಎಮ್ಮೆ ಈಗ ಹಾಲು ಕರೆಯಲು ಬಿಡುತ್ತಿಲ್ಲ ಎಂದು ಬಾಬುಲಾಲ್ ಜಾದವ್ ಎಂಬಾತ ದೂರು ದಾಖಲಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

    ‘ಎಮ್ಮೆಯ ಮೇಲೆ ಮಾಟ ಮಂತ್ರ ಪ್ರಯೋಗಿಸಲಾಗಿದೆ, ಈ ಬಗ್ಗೆ ಕೆಲವರು ತಮಗೆ ಮಾಹಿತಿ ನೀಡಿದ್ದಾರೆ. ಎಮ್ಮೆಯ ಮೇಲೆ ವಶೀಕರಣ ಮಂತ್ರ ಪ್ರಯೋಗ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದರು’ ಎಂದು ಪೊಲೀಸ್ ಅಧಿಕಾರಿ ಅರವಿಂದ್ ಷಾ ಮಾಹಿತಿ ನೀಡಿದ್ದಾರೆ.

    ಸದ್ಯ ರೈತನನ್ನು ಹಳ್ಳಿಯ ಪಶು ವೈದ್ಯರ ಬಳಿ ಕಳುಹಿಸಿಕೊಡಲಾಯಿತು. ನಿಮ್ಮ ಎಮ್ಮೆಗೆ ಏನೋ ಸಮಸ್ಯೆಯಾಗಿರಬಹುದು, ಆದ್ದರಿಂದ ಪಶುವೈದ್ಯರಲ್ಲಿ ಹೋಗಿ ಚಿಕಿತ್ಸೆ ಕೊಡಿಸಿ ಎಂದು ಹೇಳಿದೆವು. ಅದರಂತೆ ರೈತ ಅಲ್ಲಿಗೆ ಹೋಗಿ ಚಿಕಿತ್ಸೆ ಕೊಡಿಸಿದ್ದಾನೆ. ನಂತರ ಕೆಲ ಗಂಟೆಗಳ ನಂತರ ಪುನಃ ಆತ ಎಮ್ಮೆ ಸಹಿತವಾಗಿ ಪೊಲೀಸ್‌ ಠಾಣೆಗೆ ಬಂದು ಧನ್ಯವಾದ ಹೇಳಿದ್ದಾನೆ. ಕಾರಣ ಕೇಳಿದಾಗ ಎಮ್ಮೆಗೆ ಹುಷಾರಾಗಿದೆ. ಹಾಲು ಕೊಡಲು ಶುರು ಮಾಡಿದೆ ಎಂದು ಹೇಳಿದ್ದ. ಅಂತೂ ಆತನನ್ನು ಸಮಾಧಾನ ಪಡಿಸಿ ಕಳುಹಿಸಿಕೊಡಲಾಯಿತು’ ಎಂದು ಷಾ ಮಾಹಿತಿ ನೀಡಿದರು.

    ಮದುವೆಗೆಂದು ಇಟ್ಟ ಹಣ ಬಡ ಹೃದ್ರೋಗಿಗಳ ಚಿಕಿತ್ಸೆಗೆಂದು ದೇಣಿಗೆ ನೀಡಿದ ಉಪರಾಷ್ಟ್ರಪತಿ ಮೊಮ್ಮಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts