More

    ಫ್ಯಾಕ್ಟ್​ ಚೆಕ್​: ಪೊಲೀಸ್​ ಅಧಿಕಾರಿ ಮಹಿಳೆ ಮೇಲೆ ಬಿದ್ದರಾ,ಮಹಿಳೆಯೇ ಪೊಲೀಸ್​ನನ್ನು ಎಳೆದರಾ?

    ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಘಟನೆಯೊಂದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರದಲ್ಲಿ ಮಹಿಳೆಯೊಬ್ಬರು ಕೆಳಕ್ಕೆ ಬಿದ್ದಿದ್ದು, ಅವರ ಮೇಲೆ ಪೊಲೀಸ್​ ಸಿಬ್ಬಂದಿ ಕುಳಿತುಕೊಂಡಿದ್ದಾರೆ.

    ಒಮ್ಮೆಲೇ ಇದನ್ನು ನೋಡಿದರೆ ಈ ಪೊಲೀಸ್​ ಮಹಿಳೆಯ ಮೇಲೆ ದೌರ್ಜನ್ಯ ಎಸಗುತ್ತಿರುವಂತೆ ಕಾಣಿಸುತ್ತದೆ. ಅಖಿಲೇಶ್​ ಕೂಡ ಇದೇ ರೀತಿಯ ಕ್ಯಾಪ್ಷನ್​ ಅದಕ್ಕೆ ಕೊಟ್ಟಿದ್ದಾರೆ. ಅವರು ಕೆಲವು ಪೊಲೀಸ್ ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಯೋಗಿ ಆದಿತ್ಯನಾಥ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇದನ್ನು ಶೇರ್​ ಮಾಡಿರುವ ಅನೇಕ ಮಂದಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ ಅಸಲಿಗೆ ಈ ಫೋಟೋದ ಕಥೆಯೇ ಬೇರೆ. ಇಲ್ಲಿ ಮಹಿಳೆಯ ಮೇಲೆ ಪೊಲೀಸ್​ ದೌರ್ಜನ್ಯ ನಡೆಸುತ್ತಿಲ್ಲ. ಬದಲಿಗೆ ಮಹಿಳೆ ಪೊಲೀಸ್ ಅಧಿಕಾರಿಯನ್ನು ಕೊರಳು ಪಟ್ಟಿ ಹಿಡಿದು ಎಳೆದಾಗ ಪೊಲೀಸ್ ಅದರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುವ ಚಿತ್ರವಾಗಿದೆ ಇದು! ಇದು ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ.

    ಇದೀಗ ಸತ್ಯ ಬಹಿರಂಗಗೊಂಡಿದ್ದು ಜಾಲತಾಣದಲ್ಲಿ ಅಖಿಲೇಶ್​ ಯಾದವ್​ ವಿರುದ್ಧ ಭಾರಿ ಪ್ರತಿಭಟನೆ ಶುರುವಾಗಿದೆ. ಪುಖರಾಯನ್ ಔಟ್‌ಪೋಸ್ಟ್ ಉಸ್ತುವಾರಿ ಮಹೇಂದ್ರ ಪಟೇಲ್ ಎಂದು ಗುರುತಿಸಲ್ಪಟ್ಟ ಈ ಅಧಿಕಾರಿಯು ನಾಲ್ವರು ಕಾನ್‌ಸ್ಟೆಬಲ್‌ಗಳ ತಂಡದೊಂದಿಗೆ ಆರೋಪಿಗಳೊಬ್ಬರ ಮನೆಯ ಮೇಲೆ ದಾಳಿ ನಡೆಸಲು ಹೋದಾಗ ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

    https://www.vijayavani.net/s-ove-om-relation-partner-soldout-kidney/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts