More

    ಬೆಂಗಳೂರು, ಮಂಡ್ಯದಲ್ಲಿ ಭೂಕಂಪನ: ಕಿಟಕಿ, ಪೀಠೋಕರಣಗಳು ಗಡಗಡ- ಭಾರಿ ಶಬ್ದಕ್ಕೆ ಬೆಚ್ಚಿಬಿದ್ದ ಜನತೆ

    ಬೆಂಗಳೂರು/ಮಂಡ್ಯ: ಕೆಲ ತಿಂಗಳಿನಿಂದ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗುತ್ತಿದ್ದು, ಜನರು ಭಯದಿಂದಲೇ ಇರುತ್ತಿರುವ ಬೆನ್ನಲ್ಲೇ ಇದೀಗ ಬೆಂಗಳೂರು ಮತ್ತು ಮಂಡ್ಯದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ.

    ಬೆಂಗಳೂರಿನ ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ, ಮೈಸೂರು ರಸ್ತೆಯ ಕೆಲ ಪ್ರದೇಶಗಳಲ್ಲಿ ಎರಡೆರಡು ಬಾರಿ ಭೂಮಿ ಕಂಪಿಸಿರುವ ಅನುಭವವಾಗಿದೆ.

    ಆರಂಭದಲ್ಲಿ ಸಣ್ಣದಾಗಿ ಭೂಮಿ ಕಂಪಿಸಿತ್ತು. ಆದರೆ ಇದು ಭೂಕಂಪನವೋ ಅಥವಾ ಇನ್ನೇನು ಶಬ್ದವೋ ಎಂದು ಜನರಿಗೆ ತಿಳಿಯಲಿಲ್ಲ. ಆದರೆ ಎರಡನೆಯ ಬಾರಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಉಳಿದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ಅನುಭವವಾಗಿಲ್ಲ.

    ಅದೇ ಇನ್ನೊಂದೆಡೆ ಮಂಡ್ಯದ ಹಲವು ಭಾಗಗಳಲ್ಲಿ ಬೆಳಗ್ಗೆ 11.50ರ ಸುಮಾರಿಗೆ ಜೋರು ಶಬ್ದ ಕೇಳಿಬಂದಿದ್ದು, 10-15 ನಿಮಿಷ ಅಂತರದಲ್ಲಿ ಮತ್ತೊಮ್ಮೆ ಭಯಾನಕ ಶಬ್ದ ಕೇಳಿಸಿದೆ. ಈ ಶಬ್ದಕ್ಕೆ ಮನೆ, ಕಚೇರಿ, ಕಟ್ಟಡಗಳ ಕಿಟಕಿಗಳು, ಪೀಠೋಪಕರಣಗಳು ನಲುಗಿವೆ.

    ಬೆಂಗಳೂರಿನಲ್ಲಿ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಮಂಡ್ಯ ವ್ಯಾಪ್ತಿಯಲ್ಲಿ ಭಾರಿ ಶಬ್ಧ ಕೇಳಿರಬಹುದು ಎಂದು ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.

    ಕೆಲ ತಿಂಗಳ ಹಿಂದೆ ಬಾರಿ ಕೆಆರ್‌ಎಸ್‌ ಹಾಗೂ ಪಾಂಡವಪುರ ವ್ಯಾಪ್ತಿಯಲ್ಲಿ ಶಬ್ದ ಕೇಳಿಬಂದಿದ್ದವು. ಅಕ್ರಮ ಗಣಿಗಾರಿಕೆಯಿಂದ ಶಬ್ದ ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಸದ್ಯ ಅಕ್ರಮ ಗಣಿಗಾರಿಕೆಗೆ ಮಂಡ್ಯ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಈಗ ಮಂಡ್ಯ ನಗರ ವ್ಯಾಪ್ತಿಯಲ್ಲಿ ಭಾರೀ ಶಬ್ದ ಕೇಳಿಬಂದಿರುವುದು ಆತಂಕಕ್ಕೀಡುಮಾಡಿದೆ.

    ಬಾಡಿಗೆ ಮನೆ ಕೇಳಿ ಬಲೆ ಬೀಸಿದ್ದ ಎಸಿಬಿ ಅಧಿಕಾರಿಗಳು: ಶಿವಮೊಗ್ಗದ ಕೃಷಿ ಅಧಿಕಾರಿಯ ಬೇಟೆಯಾಡಿದ್ದೇ ರೋಚಕ

    ಮೈಸೂರಿನ ಆಸ್ತಿ ಅರಸರದ್ದೇ: ಸರ್ಕಾರಕ್ಕೆ ಸುಪ್ರೀಂನಲ್ಲಿ ಭಾರಿ ಹಿನ್ನಡೆ- ಜಿಲ್ಲಾಡಳಿತಕ್ಕೂ ಎದುರಾಗಿದೆ ದೊಡ್ಡ ಸಂಕಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts