More

    ಸಿಎಂ ಬೊಮ್ಮಾಯಿ ಮನೆಗೆ ಕರೆದುಕೊಂಡು ಹೋಗೆಂದು ಆದೇಶಿಸಿದ ಕನಕಾದುರ್ಗಪರಮೇಶ್ವರಿ ದೇವಿ!

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಕನಕಾದುರ್ಗಪರಮೇಶ್ವರಿ ವಿಗ್ರಹವನ್ನು ದೇವಸ್ಥಾನದ ಆಡಳಿತ ಮಂಡಳಿ ಕರೆತಂದ ಘಟನೆ ನಡೆದಿದೆ. ಬೆಂಗಳೂರಿನ ಕೆಂಗೇರಿ ಬಳಿಯ ಎಚ್. ಗೊಲ್ಲಹಳ್ಳಿಯ ಕನಕದುರ್ಗಾಪರಮೇಶ್ವರಿ ದೇವಸ್ಥಾನದ ಪುರೋಹಿತರು ಈ ವಿಗ್ರಹವನ್ನು ತೆಗೆದುಕೊಂಡು ಬಂದಿದ್ದರು.

    ಇದಕ್ಕೆ ಕಾರಣ, ದೇವಿಯ ಆದೇಶ ಎಂದು ಪುರೋಹಿತರು ಹೇಳಿದ್ದಾರೆ. ಮುಖ್ಯಮಂತ್ರಿ ಮನೆಗೆ ಬರಬೇಕೇಂದು ದೇವಿಯ ಆದೇಶದ ಹಿನ್ನೆಲೆಯಲ್ಲಿ ತಾವು ಕರೆತಂದಿರುವುದಾಗಿ ಹೇಳಿದ್ದಾರೆ.
    ಆದರೆ ಪೊಲೀಸರು ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡಲಿಲ್ಲ. ದೇವಿ ಆದೇಶದಂತೆ ಬಂದಿದ್ದೇವೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದರೂ ಸದ್ಯ ಅವಕಾಶ ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದರು.

    ನಂತರ ಖುದ್ದು ಮುಖ್ಯಮಂತ್ರಿಗಳು ದೇವಸ್ಥಾನಕ್ಕೆ ಸದ್ಯದಲ್ಲೇ ಭೇಟಿ ನೀಡಿ ದೇವಿ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸುವುದಾಗಿ ತಿಳಿಸಿದ್ದರಿಂದ ಅರ್ಚಕರು ವಾಪಸ್ ಹೋದರು.

    ಸಿಎಂಗೆ ಗದೆ ಗಿಫ್ಟ್: ಅದೇ ಇನ್ನೊಂದೆಡೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ನಿವಾಸಕ್ಕೆ ಆಗಮಿಸಿದ ಅಭಿಮಾನಿಗಳು ರಾಜಸ್ಥಾನ ಜಯಪುರದ ಪಂಚಲೋಹದ ಗದೆಯನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿ ಮಹಮ್ಮದ್ ರಫಿ‌ ಚಳಮರ್ ಶೇಖ್, 30 ವರ್ಷಗಳ ಹಿಂದೆ ದೊಡ್ಡ ‌ಸಾಹೇಬರ ಶಿಷ್ಯರಾಗಿದ್ದೆವು. ಅವರು ಉತ್ತರ ಆಡಳಿತ ನೀಡುತ್ತಾರೆ. ಅದಕ್ಕಾಗಿ ಈ ಗಿಫ್ಟ್​ ತಂದಿದ್ದೇವೆ ಎಂದರು.

    VIDEO: ನಾನು ಹೇಳಿದ ಹಾಡು ಪ್ಲೇ ಆಗುವವರೆಗೆ ಮಂಟಪಕ್ಕೆ ಬರಲ್ಲ ಎಂದು ಪಟ್ಟು ಹಿಡಿದ ವಧು- ವಿಡಿಯೋ ವೈರಲ್‌

    ಅಂಕಲ್‌ಗಳೇ ಈಕೆಯ ಟಾರ್ಗೆಟ್‌: ಪಾರ್ಕ್‌ಗೆ ಕರೆದು ಮಾಡಬಾರದ್ದು ಮಾಡಿ ವಿಡಿಯೋ- ಚಾಲಾಕಿ ಆಂಟಿ ಅರೆಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts